ಟಿಕ್ ಟಾಕ್ ದುರಂತ : ನೋಡ ನೋಡುತ್ತಿದ್ದಂತೆ ಕೆರೆಯಲ್ಲಿ ಮುಳುಗಿ ಯುವಕ ಸಾವು

Published : Jul 12, 2019, 01:35 PM ISTUpdated : Jul 12, 2019, 01:56 PM IST
ಟಿಕ್ ಟಾಕ್ ದುರಂತ : ನೋಡ ನೋಡುತ್ತಿದ್ದಂತೆ ಕೆರೆಯಲ್ಲಿ ಮುಳುಗಿ ಯುವಕ ಸಾವು

ಸಾರಾಂಶ

ಟಿಕ್ ಟಾಕ್ ವಿಡಿಯೋ ದುರಂತಗಳು ಪದೇ ಪದೇ ವರದಿಯಾಗುತ್ತಲೇ ಇರುತ್ತದೆ. ಇದೀಗ ತೆಲಂಗಾಣದಲ್ಲಿಯೂ ಕೂಡ ಯುವಕನೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. 

ಹೈದರಾಬಾದ್ [ಜು.12] : ಟಿಕ್ ಟಾಕ್ ವಿಡಿಯೋಗಳು ಈಗಾಗಲೇ ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಇದ್ದು, ತೆಲಂಗಾಣದಲ್ಲಿಯೂ ವಿಡಿಯೋ ಮಾಡುವ ವೇಳೆ ಯುವಕನೋರ್ವ ಪ್ರಾಣ ಕಳೆದುಕೊಂಡ ದುರಂತವೊಂದು ನಡೆದಿದೆ.

ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಕೆರೆಯಲ್ಲಿ ಮುಳುಗಿ 24 ವರ್ಷದ ಯುವಕ ಸಾವಿಗೀಡಾಗಿದ್ದಾರೆ. 

ಜಿಹಾದ್‌ ಪ್ರಚೋದನೆ ಆರೋಪ; ಟಿಕ್‌ಟಾಕ್ ನಿಷೇಧಿಸಲು ಮೋದಿಗೆ ಮನವಿ!

ನರಸಿಂಹ ಎನ್ನುವ ಯುವಕ ತನ್ನ ಸಂಬಂಧಿಯೊಂದಿಗೆ ಕೆರೆಗೆ ಈಜಲು ತೆರಳಿದ್ದಾಗ  ಇಬ್ಬರೂ ಕೂಡ ಕೆರೆಗೆ ಇಳಿದಿದ್ದು, ವಿಡಿಯೋ ಮಾಡುತ್ತಿದ್ದರು. ವಿಡಿಯೋಗೆ  ಪೋಸ್ ನೀಡುತ್ತಿದ್ದ ನರಸಿಂಹ ಆಳವಾದ ಜಾಗಕ್ಕೆ ತೆರಳಿ ಜಾರಿ ಬಿದ್ದಿದ್ದಾನೆ.

ಭಾವೀ ಪತ್ನಿ ಜೊತೆ ಧ್ರವ ಸರ್ಜಾ ಟಿಕ್‌ಟಾಕ್; ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ !

ಇಬ್ಬರಿಗೂ ಕೂಡ ಈಜು ಬಾರದ ಕಾರಣ ರಕ್ಷಣೆಗೆ ಕೂಗಿಕೊಂಡರು ಸ್ಥಳದಲ್ಲಿ ಯಾರೂ ಇರದ ಕಾರಣ ಮೇಲೇಳಲಾಗದೇ ನರಸಿಂಹ ಅಲ್ಲಿಯೇ ಮೃತಪಟ್ಟಿದ್ದಾನೆ. 

ನೀರಿನಲ್ಲಿ ಮುಳುಗುವ ಮೊದಲು ಆತ ನೀರಿನಲ್ಲಿ ನೃತ್ಯ ಮಾಡಿದ್ದು, ದೂರ ದೂರ ಹೋಗಿ ಮುಳುಗಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!