ಮೊಟ್ಟೆ ಕಾಪಾಡಲು ಟ್ರ್ಯಾಕ್ಟರ್‌ಗೇ ಅಡ್ಡ ನಿಂತ ತಾಯಿ ಹಕ್ಕಿ!: ವೈರಲ್ ಆಯ್ತು ಹೃದಯಸ್ಪರ್ಶಿ ವಿಡಿಯೋ

Published : Jul 12, 2019, 12:57 PM IST
ಮೊಟ್ಟೆ ಕಾಪಾಡಲು ಟ್ರ್ಯಾಕ್ಟರ್‌ಗೇ ಅಡ್ಡ ನಿಂತ ತಾಯಿ ಹಕ್ಕಿ!: ವೈರಲ್ ಆಯ್ತು ಹೃದಯಸ್ಪರ್ಶಿ ವಿಡಿಯೋ

ಸಾರಾಂಶ

ಉಪ್ಪಿಗಿಂತ ಬೇರೆ ರುಚಿ ಇಲ್ಲ, ತಾಯಿಗಿಂತ ದೊಡ್ಡ ಬಂಧುವಿಲ್ಲ| ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ತಾಯಿ ಹಕ್ಕಿಯ ಮಮತೆಯ ವಿಡಿಯೋ| ಜೀವವನ್ನೇ ಪಣಕ್ಕಿಟ್ಟು ಟ್ರ್ಯಾಕ್ಟರ್‌ ಅಡ್ಡಗಟ್ಟಿದ ತಾಯಿ| ತಾಯಿ ಹಕ್ಕಿಯ ಪ್ರೀತಿಗೆ ಮರುಗಿದ ನೆಟ್ಟಿಗರು

ಬೀಜಿಂಗ್[ಜು.12]: ತಾಯಿಯ ಮಮತೆಗೆ ಸಾಟಿಯೇ ಇಲ್ಲ, ಆಕೆಯ ಮಡಿಲಿನಷ್ಟು ಸೇಫ್ ಜಾಗ ಜಗತ್ತಿನಲ್ಲಿ ಮತ್ತೊಂದಿಲ್ಲ. ಸದ್ಯ ವೈರಲ್ ಆಗುತ್ತಿರುವ ಚೀನಾದ ವಿಡಿಯೋ ಒಂದು ಇದಕ್ಕೆ ತಕ್ಕ ಉದಾಹರಣೆಯಂತಿದೆ. ತನ್ನ ಮೊಟ್ಟೆಗಳನ್ನು ಕಾಪಾಡಲು ಪುಟ್ಟ ಹಕ್ಕಿಯೊಂದು, ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಟ್ರ್ಯಾಕ್ಟರ್ ಎದುರು ಬಂದು ನಿಂತ ಈ ವಿಡಿಯೋ ನೋಡುಗರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದೆ. 

CGTN ವರದಿಯನ್ವಯ ಇದು ಚೀನಾದ ಉಲಾಕಬ್ ಎಂಬ ನಗರದಲ್ಲಿ ಸೆರೆ ಹಿಡಿದ ವಿಡಿಯೋ ಎನ್ನಲಾಗಿದೆ. ಟ್ರ್ಯಾಕ್ಟರ್ ಬರುತ್ತಿರುವುದನ್ನು ಗಮನಿಸಿದ ಹಕ್ಕಿ ತನ್ನ ರೆಕ್ಕೆಗಳನ್ನು ಹರಡಿ ಅದನ್ನು ತಡೆಯಲು ಯತ್ನಿಸಿದೆ. ಟ್ರ್ಯಾಕ್ಟರ್ ಚಲಿಸುತ್ತಿದ್ದ ಹಾದಿಯಲ್ಲಿ ಸ್ವಲ್ಪ ದೂರದಲ್ಲೇ ಈ ಹಕ್ಕಿಯ ಮೊಟ್ಟೆಗಳಿತ್ತು. ಇದನ್ನು ಕಾಪಾಡಲು ತಾಯಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟಿದೆ. 

ಹಕ್ಕಿಯ ಈ ವರ್ತನೆ ಗಮನಿಸಿದ ಟ್ರ್ಯಾಕ್ಟರ್ ಡ್ರೈವರ್ ಕೂಡಲೇ ವಾಹನವನ್ನು ನಿಲ್ಲಿಸಿ ಕೆಳಗಿಳಿದಿದ್ದಾನೆ. ಹಕ್ಕಿ ತನ್ನ ಮೊಟ್ಟೆಗಳನ್ನು ಕಾಪಾಡಲು ಹೀಗೆ ವರ್ತಿಸುತ್ತಿದೆ ಎಂದು ತಿಳಿದ ಆತ ಕೂಡಲೇ ಒಂದು ಬಾಟಲ್ ನೀರು ಕೂಡಾ ಅಲ್ಲಿಟ್ಟಿದ್ದಾನೆ. ಬಿಸಿಲಿನ ತಾಪ ಬಹಳಷ್ಟು ಇದ್ದ ಕಾರಣ ಆತ ನೀರಿಟ್ಟಿದ್ದಾನೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಭಾರೀ ವೈರಲ್ ಆಗಿದೆ. 

ಒಂದೆಡೆ ತಾಯಿ ಹಕ್ಕಿಯ ಮಮತೆ ಕಂಡು ನೆಟ್ಟಿಗರು ಭಾವುಕರಾಗಿದ್ದರೆ, ಮತ್ತೊಂದೆಡೆ ಟ್ರ್ಯಾಕ್ಟರ್ ಚಾ=ಲಕನ ಮಾನವೀಯತೆಗೆ ಭೇಷ್ ಎಂದಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!