ಅಜ್ಮೀರ್ ಬಾಂಬ್ ಸ್ಪೋಟ: ಇಬ್ಬರಿಗೆ ಜೀವಾವಧಿ ಶಿಕ್ಷೆ

By Suvarna Web DeskFirst Published Mar 22, 2017, 10:23 AM IST
Highlights

2007 ರಲ್ಲಿ ನಡೆದ ಅಜ್ಮೀರ್ ದರ್ಗಾ ಸ್ಪೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ದೇವೇಂದ್ರ ಗುಪ್ತಾ ಮತ್ತು ಭಾವೇಶ್ ಪಟೇಲ್ ಗೆ ವಿಶೇಷ ರಾಷ್ಟ್ರೀಯ ತನಿಖಾ ತಮಡ ಜೀವಾವಧಿ ಶಿಕ್ಷೆ ವಿಧಿಸಿದೆ.

ನವದೆಹಲಿ (ಮಾ.22): 2007 ರಲ್ಲಿ ನಡೆದ ಅಜ್ಮೀರ್ ದರ್ಗಾ ಸ್ಪೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ದೇವೇಂದ್ರ ಗುಪ್ತಾ ಮತ್ತು ಭಾವೇಶ್ ಪಟೇಲ್ ಗೆ ವಿಶೇಷ ರಾಷ್ಟ್ರೀಯ ತನಿಖಾ ತಮಡ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಮೂವರನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಹೇಳಿತ್ತು. ಆರ್ ಎಸ್ ಎಸ್ ಕಾರ್ಯಕರ್ತ ಸ್ವಾಮಿ ಅಸೀಮಾನಂದ್ ಸೆರಿದಂತೆ ಕೆಲವರನ್ನು ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಳಿಸಿತ್ತು.

ಐಪಿಸಿ ಸೆಕ್ಷನ್ ಕ್ರಿಮಿನಲ್ ಪಿತೂರಿ, ಸ್ಪೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿಯಲ್ಲಿ ದೇವೇಂದ್ರ ಗುಪ್ತಾ ಮತ್ತು ಭಾವೇಶ್ ಪಟೇಲ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇಫ್ತಾರ್ ಸಮಯದಲ್ಲಿ ಖ್ವಾಜಾ ಮೋಯಿನುದ್ದೀನ್ ಚಿಸ್ತಿ/ ಅಜ್ಮೀರ್ ದರ್ಗಾದಲ್ಲಿ 2007. ಅಕ್ಟೋಬರ್ 11 ರಂದು ಬಾಂಬ್ ಸ್ಪೋಟ ನಡೆದಿತ್ತು. ಈ ಸ್ಪೋಟದಲ್ಲಿ ಮೂವರು ಯಾತ್ರಾರ್ಥಿಗಳು ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದರು.  

click me!