
ಗ್ವಾಲಿಯರ್[ಜೂ.25]: ಕಾರ್ಗಿಲ್ ಯುದ್ಧಕ್ಕೆ 20 ವರ್ಷಗಳು ತುಂಬಿದ ಸ್ಮರಣಾರ್ಥ ಭಾರತೀಯ ವಾಯು ಪಡೆ ಗ್ವಾಲಿಯರ್ ವಾಯು ನೆಲೆಯಲ್ಲಿ ಯುದ್ಧದ ಪ್ರಮುಖ ಸನ್ನಿವೇಶವನ್ನು ಸೋಮವಾರ ಮರುಸೃಷ್ಟಿಸಿದೆ.
ಜಮ್ಮು- ಕಾಶ್ಮೀರದ ಡ್ರಾಸ್- ಕಾರ್ಗಿಲ್ ಪ್ರದೇಶದಲ್ಲಿರುವ ಟೈಗರ್ ಹಿಲ್ ಮಾದರಿಯನ್ನು ರಚಿಸಿ ಅದರ ಮೇಲೆ, ಮಿರಾಜ್ ಯುದ್ಧ ವಿಮಾನಗಳು ಬಾಂಬ್‌ಗಳನ್ನು ಸ್ಫೋಟಿಸುವ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲದೇ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ 5 ವಿಮಾಜ್ ಯುದ್ಧ ವಿಮಾನಗಳು, ಒಂದು ಸುಖೋಯ್ ಯುದ್ಧ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
20ನೇ ಕಾರ್ಗಿಲ್ ವಿಜಯ ದಿವಸವನ್ನು ಜು.25ರಿಂದ 27ರ ವರೆಗೆ ಮೂರು ದಿನಗಳ ಕಾಲ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿ ಮತ್ತು ಕಾಶ್ಮೀರದ ದ್ರಾಸ್ ಪಟ್ಟಣದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.