
ನವದೆಹಲಿ[ಜೂ.25]: ಕರ್ನಾಟಕ, ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿರುವ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯ ಮೂರು ಹೊಸ ಫೋಟೋಗಳು ತನಗೆ ಲಭ್ಯವಾಗಿವೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ಹೇಳಿಕೊಂಡಿದೆ.
58 ವರ್ಷದ ಪಾತಕಿ ಕೆಂಪು ಬಣ್ಣದ ಕುರ್ತಾ ಧರಿಸಿ, ಸೆನೆಗಲ್ ದೇಶದ ರಾಜಧಾನಿ ಡಾಕರ್‌ನಲ್ಲಿ ತಾನು ಹೊಂದಿರುವ ಐಷಾರಾಮಿ ಹೋಟೆಲ್‌ನ ಆಯೋಜನೆಗೊಂಡಿದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಲು ತೆರಳುತ್ತಿರುವ, 2019ರ ಜ.21ರಂದು ಕ್ಷೌರದ ಅಂಗಡಿಯಲ್ಲಿ ಬಂಧನಕ್ಕೆ ಒಳಗಾದ ಬಳಿಕ ಕಿತ್ತಳೆ ಬಣ್ಣದ ಟಿ- ಶರ್ಟ್, ಜೀನ್ಸ್ ಚಡ್ಡಿ ಧರಿಸಿ ಪೊಲೀಸ್ ಠಾಣೆಗೆ ತೆರಳುತ್ತಿರುವ ಹಾಗೂ ಬಂಧನಕ್ಕೆ ಒಳಗಾದಾಗ ಸೆರೆ ಹಿಡಿದ ಫೋಟೋಗಳು ತನ್ನ ಬಳಿ ಇವೆ ಎಂದು ರಿಪಬ್ಲಿಕ್ ಟೀವಿ ವರದಿ ಮಾಡಿದೆ.
ರವಿ ಪೂಜಾರಿ ಹೊಂದಿದ್ದ ನಕಲಿ ಪಾಸ್‌ಪೋರ್ಟ್‌ನ ಪ್ರತಿ ಕೂಡ ತನ್ನ ಬಳಿ ಇದೆ. 2013ರ ಜು.10ರಂದು ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ ಸರ್ಕಾರ ನೀಡಿದ್ದ ಪಾಸ್‌ಪೋರ್ಟ್ ಇದಾಗಿದೆ. ರವಿ ಪೂಜಾರಿಯ ಚಿತ್ರ ಇದರಲ್ಲಿದ್ದು, ‘ಆ್ಯಂಟೋನಿ ಫರ್ನಾಂಡಿಸ್’ ಹೆಸರಿನಲ್ಲಿ ಪಾಸ್‌ಪೋರ್ಟ್ ಇದೆ. 1961ರ ಜ.25ರ ಜನ್ಮದಿನಾಂಕ ಹೊಂದಿದ್ದು, ಮೈಸೂರಿನಲ್ಲಿ ಜನಿಸಿದ ವಿವರ ಇದೆ ಎಂದು ಚಾನಲ್ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.