
ಬೆಂಗಳೂರು (ಫೆ.17): ನಮ್ಮ ಮೆಟ್ರೋ’ ರೈಲು ಮಹಿಳಾ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ. ಸೋಮವಾರದಿಂದ ಮೆಟ್ರೋ ರೈಲಿನ ಮುಂಭಾಗದ ಎರಡು ದ್ವಾರಗಳು ಮಹಿಳೆಯರಿಗಾಗಿಯೇ ಮೀಸಲಿರಿಸಿದ್ದು, ಆ ದ್ವಾರಗಳನ್ನು ಪುರು ಷರು ಬಳಸುವುದನ್ನು ನಿರ್ಬಂಧಿಸಿದೆ.
ಜನದಟ್ಟಣೆ ಇರುವ ಸಂದರ್ಭದಲ್ಲಿ ಪುರುಷರೊಂದಿಗೆ ಪ್ರಯಾಣ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಅಳವಡಿಸಬೇಕು ಮಹಿಳಾ ಪ್ರಯಾಣಿಕರಿಂದ ಬೇಡಿಕೆಯಿತ್ತು. ಅದರಂತೆ ಪ್ರತ್ಯೇಕ ಬೋಗಿ ನೀಡುವ ಭರವಸೆಯನ್ನು ಬಿಎಂಆರ್ ಸಿಎಲ್ ನೀಡಿತ್ತು. ಈ ಭರವಸೆ ಈಡೇರಿಸಲು ಇನ್ನೂ ಕೆಲಕಾಲ ಆಗುವ ಹಿನ್ನೆಲೆಯಲ್ಲಿ ಸಂಸ್ಥೆಯು ಸೋಮವಾರದಿಂದ ಮೆಟ್ರೋ ರೈಲಿನ ಮುಂದಿನ ಎರಡು ದ್ವಾರಗಳನ್ನು ಮಹಿಳೆಯರ ಬಳಕೆಗೆ ಮೀಸಲಿಟ್ಟಿದೆ.
ಈ ನಿಯಮವು ಇಂದಿನಿಂದ ರಿಂದ ಪೀಕ್ ಅವರ್ಸ್ (ಹೆಚ್ಚು ಜನ ದಟ್ಟಣೆ ಇರುವ ಸಂದರ್ಭ)ಗಳಲ್ಲಿ ಈ ನಿಯಮ ಜಾರಿಯಾಗುತ್ತಿದೆ. ಈ ನಿಯಮದ ಪ್ರಕಾರ ಪ್ರತಿ ದಿನ ಬೆಳಗ್ಗೆ 9 ರಿಂದ 11.30, ಸಂಜೆ 5.30 ರಿಂದ 7.30 ರವರೆಗೆ ಚಾಲಕರ ಹಿಂಬದಿಯ ಬೋಗಿಯ ಎರಡು ದ್ವಾರಗಳು ಮಹಿಳೆಯರಿಗೆ ಮಾತ್ರ ಮೀಸಲಿರಲಿದೆ. ಪ್ರಸ್ತುತ ಪ್ರಾಯೋಗಿಕವಾಗಿ ಈ ನಿಯಮವನ್ನು ಜಾರಿ ಮಾಡುತ್ತಿದ್ದು, ಸಾರ್ವಜನಿಕರ ಅಭಿಪ್ರಾಯಗಳ ಆಧಾರದಲ್ಲಿ ಮುಂದುವರಿಸುವುದರ ಕುರಿತು
ಚಿಂತನೆ ನಡೆಸಲಾಗುವುದು. ಪ್ರತಿನಿತ್ಯ 3.6 ರಿಂದ 3.7 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಸಾಕಷ್ಟು ಮಹಿಳಾ ಪ್ರಯಾಣಿಕರು ನಮಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿಯಮ ಜಾರಿ ಮಾಡಲಾಗುತ್ತದೆ ಎಂದು ಬಿಎಂಆರ್ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.