ಸಂಬಳದ ಗೋಳು: ಕಂಪನಿ ಕೊಟ್ಟರೂ, ಎಟಿಎಂ ಕೊಡಲಿಲ್ಲ

Published : Dec 01, 2016, 04:28 PM ISTUpdated : Apr 11, 2018, 01:10 PM IST
ಸಂಬಳದ ಗೋಳು: ಕಂಪನಿ ಕೊಟ್ಟರೂ, ಎಟಿಎಂ ಕೊಡಲಿಲ್ಲ

ಸಾರಾಂಶ

ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ಬಳಿಕ ಪರಿಸ್ಥಿತಿ ಸಹಜ ರೂಪಕ್ಕೆ ಮರಳಿ ಬರುತ್ತಿದ್ದಂತೆಯೇ, ತಿಂಗಳಿನ ಮೊದಲನೇ ತಾರೀಖು ಹಣಕಾಸು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.. ಎಟಿಎಂ’ಗಳಲ್ಲಿ ದುಡ್ಡಿಲ್ಲ, ದುಡ್ಡಿರುವ ಎಟಿಎಂಗಳ ಮುಂದೆ ಗ್ರಾಹಕರ ಉದ್ದುದ್ದ ಸರತಿ ಸಾಲುಗಳಿತ್ತು. ಬ್ಯಾಂಕುಗಳು ಕೂಡಾ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದುವು.  ರಾಜ್ಯದೆಲ್ಲೆಡೆ ಸಣ್ಣ ಹಳ್ಳಿಗಳಿಂದ ಹಿಡಿದು ಬೆಂಗಳೂರಿನವೆರೆಗೆ ಜನರು ಹಣಕ್ಕಾಗಿ ಪರದಾಡುವ ಸಮಸ್ಯೆ ಇಂದು ಸರ್ವೆಸಾಮಾನ್ಯವಾಗಿತ್ತು.

ಬೆಂಗಳೂರು (ಡಿ.01): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ಬಳಿಕ ಪರಿಸ್ಥಿತಿ ಸಹಜ ರೂಪಕ್ಕೆ ಮರಳಿ ಬರುತ್ತಿದ್ದಂತೆಯೇ, ತಿಂಗಳಿನ ಮೊದಲನೇ ತಾರೀಖು ಹಣಕಾಸು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.. ಎಟಿಎಂ’ಗಳಲ್ಲಿ ದುಡ್ಡಿಲ್ಲ, ದುಡ್ಡಿರುವ ಎಟಿಎಂಗಳ ಮುಂದೆ ಗ್ರಾಹಕರ ಉದ್ದುದ್ದ ಸರತಿ ಸಾಲುಗಳಿತ್ತು. ಬ್ಯಾಂಕುಗಳು ಕೂಡಾ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದುವು.  ರಾಜ್ಯದೆಲ್ಲೆಡೆ ಸಣ್ಣ ಹಳ್ಳಿಗಳಿಂದ ಹಿಡಿದು ಬೆಂಗಳೂರಿನವೆರೆಗೆ ಜನರು ಹಣಕ್ಕಾಗಿ ಪರದಾಡುವ ಸಮಸ್ಯೆ ಇಂದು ಸರ್ವೆಸಾಮಾನ್ಯವಾಗಿತ್ತು.

ರಾಮನಗರ: ತಿಂಗಳ ಸಂಬಳಕ್ಕಾಗಿ ಹೆಣಗಾಟ

ಕೇಂದ್ರ ಸರ್ಕಾರ 500, 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಇಂದಿಗೆ ಬರೋಬ್ಬರಿ 22 ದಿನಗಳು ಕಳೆದಿವೆ. ಕಳೆದ 22 ದಿನಗಳಿಂದಲೂ ಕೂಡಾ ಸಾರ್ವಜನಿಕರು ಹಣ ಬದಲಾಯಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಇನ್ನು ಇಂದು ಎಲ್ಲಾ ಕಾರ್ಖಾನೆ,  ಗಾರ್ಮೆಂಟ್ಸ್ ಅಲ್ಲದೇ ಸರ್ಕಾರಿ ನೌಕರರ ಅಕೌಂಟಿಗೆ ಸಂಬಳ ಜಮೆ ಆಗಿದೆ. ಆದರೆ ಸಂಬಳವನ್ನು ಪಡೆಯಲು ಬ್ಯಾಂಕ್’ಗಳಿಗೆ ತೆರಳಿದರೇ  ಎಟಿಎಂಗಳಲ್ಲಿ ದುಡ್ಡು ಬರ್ತಿಲ್ಲ. ಹೀಗಾಗಿ ದಿನನಿತ್ಯದ ಖರ್ಚಿಗೆ ಹರಸಾಹಸ ಪಡುವಂತಾಗಿದೆ. ಇನ್ನು ಗಾರ್ಮೆಂಟ್ಸಗಳ ಕಾರ್ಮಿಕರು ಸಹ ಕೆಲಸ ಬಿಟ್ಟು ಮನೆ ಖರ್ಚಿಗೆ ಹಣವಿಲ್ಲದೆ ಬ್ಯಾಂಕುಗಳ ಎದುರು ನಿಲ್ಲುವಂತಾಗಿದೆ.  ಸರ್ಕಾರಿ ನೌಕರರ ಪಾಡು ಸಹ ಇದೇ ಆಗಿದೆ.

ಯಾದಗಿರಿ: ಹಣದ ಕೊರೆತೆಯಿಂದ ಎಟಿಎಂಗಳು ಬಂದ್  

ತಿಂಗಳ ದುಡಿಮೆಯ ಶ್ರಮಕ್ಕೆ ಇಂದು ಸಂಬಳ ಪಡೆಯುವ ದಿನ. ಆದರೆ ಯಾದಗಿರಿ ನಗರದಲ್ಲಿ ಮಾತ್ರ ಹಣದ ಕೊರತೆಯಿಂದ ಎಲ್ಲಾ ಎಟಿಎಂಗಳು ಬಂದ್ ಆಗಿವೆ. ಕಳೆದ 3-4 ದಿನಗಳಿಂದ ಯಾದಗಿರಿ ನಗರ ಮತ್ತು ಜಿಲ್ಲೆಯಾದ್ಯಂತ ವಿವಿಧ 30 ಬ್ಯಾಂಕ್​ಗಳ ಪೈಕಿ ಕೇವಲ 4-5 ಬ್ಯಾಂಕಗಳು ಬಿಟ್ಟರೆ ಉಳಿದ ಸುಮಾರು 26 ಬ್ಯಾಂಕ್​ಗಳಲ್ಲಿ ಹಣವಿಲ್ಲದೇ ಜನ ಪರದಾಡುವಂತಾಗಿದೆ. ಯಾದಗಿರಿ ನಗರದ ಎಸ್​ಬಿಎಚ್, ಎಸ್​ಬಿಐ, ಎಸ್​ಬಿಎಮ್, ಕರ್ನಾಟಕ ಬ್ಯಾಂಕ್, ಎಕ್ಸಿಸ್ ಬ್ಯಾಂಕ್​ಗಳು ಹೊರತು ಪಡಿಸಿದರೆ ಉಳಿದ ಯಾವುದೇ ಬ್ಯಾಂಕ್​ಗಳಲ್ಲಿ ಹಣವಿಲ್ಲ . ಕಾರ್ಮಿಕರು, ರೈತಾಪಿ ವರ್ಗ, ವರ್ತಕರು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ ಬ್ಯಾಂಕಿನಲ್ಲಿ ಹಣವಿಲ್ಲದ ಕಾರಣ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ವಿಜಯಪುರ: ಎಟಿಎಂಗಳ ಮುಂದೆ ಗ್ರಾಹಕರ ಪರದಾಟ  

ನೋಟ್ ನಿಷೇಧ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಆಲಮೇಲ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ರೈತರು ವ್ಯಾಪಾರಸ್ಥರು, ಎಟಿಎಂ ಎದುರು ಸರತಿ ಸಾಲಲ್ಲಿ  ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಗ್ರಾಮದಲ್ಲಿ ಇರುವ ಮೂರು ಎಟಿಎಂಗಳಲ್ಲಿ ಒಂದು ಎಟಿಎಂನಲ್ಲಿ ಮಾತ್ರ ಹಣ ಸಿಗ್ತಾಯಿರೊದ್ರಿಂದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಣಕ್ಕಾಗಿ ಎಟಿಎಂ ಎದುರು ಪಾಳೆ ಹಚ್ಚಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ನೌಕರರು ಸೇರಿದಂತೆ ಗ್ರಾಮಸ್ಥರು ಸರತಿ ಸಾಲಲ್ಲಿ ನಿಂತು ಹಣಕ್ಕಾಗಿ ಹೆಣಗಾಡುತ್ತಿದ್ದಾರೆ.  ಕಳೆದೆರಡು ದಿನಗಳಿಂದ ನೂರು ರೂಪಾಯಿ ಮುಖ ಬೆಲೆ ನೋಟುಗಳನ್ನು ನೀಡಲಾಗುತ್ತಿತ್ತು. ಆದರೆ ಇದೀಗ  ಎರಡು ಸಾವಿರ ‌ಮುಖಬೆಲೆ ನೋಟ್ ಗಳನ್ನು  ನೀಡ್ತಿರೋದ್ರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ದಾವಣಗೆರೆ: ಕರ್ತವ್ಯಕ್ಕೆ ರಜೆ  ಹಾಕಿ ಬ್ಯಾಂಕ್ ಮುಂದೆ ಕ್ಯೂ

ದಾವಣಗೆರೆಯಲ್ಲಿ ಎಟಿಎಂಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ನಗರದ ಎಟಿಎಂ ಬ್ಯಾಂಕ್ ಗಳ ಮುಂದೆ ಪಿಂಚಣಿದಾರರು, ಉದ್ಯೋಗಿಗಳು ಕರ್ತವ್ಯಕ್ಕೆ  ರಜೆ ಹಾಕಿ ಬ್ಯಾಂಕ್ ಮುಂದೆ ಹಣಕ್ಕಾಗಿ ಕ್ಯೂ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಬ್ಯಾಂಕ್ ಗಳ  ಹಣದ ಪರಿಸ್ಥಿತಿಯು ಅಧಿಕಾರವರ್ಗವನ್ನು ಚಿಂತೆಗೀಡುಮಾಡಿದೆ. ದಾವಣಗೆರೆ ಎಸ್ ಬಿಮ್ ಬ್ಯಾಂಕ್ ಗ್ರೂಪ್   ಆರ್’ಬಿಐನ ಮುಂದೆ ಇಟ್ಟಿರುವ ಬೇಡಿಕೆಯಲ್ಲಿ ಶೇ. 50 ರಷ್ಟು ಮಾತ್ರ ಹಣ ಬಂದಿದೆ. ಇನ್ನು ಶೇ.50ರಷ್ಟು ಹಣದ ಅವಶ್ಯಕತೆ ಇದ್ದು ನಾವು ಆರ್’ಬಿಐನತ್ತ ನೋಡುತ್ತಿದ್ದೇವೆ. ಇನ್ನೆರೆಡು ದಿನಗಳಲ್ಲಿ ಹಣ ಬರದಿದ್ದೆರೇ ನಾವು ಉದ್ಯೋಗಿಗಳಿಗೆ ಹಣ ಕೊಡಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ.

ಚಿತ್ರದುರ್ಗ: ಚಿಲ್ಲರೆ ಸಮಸ್ಯೆ ಹೇಳತೀರದಾಗಿದೆ                      

ಸಂಬಳದ ದಿನವಾದ ಇಂದು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಬಳದ ಹಣವನ್ನು ನೀಡಲು ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ನಮ್ಮಲಿರುವ ಎಲ್ಲರಿಗೂ ಸಕಾಲದಲ್ಲಿ ವೇತನವನ್ನು ನೀಡಲು  ವ್ಯವಸ್ಥೆ ಮಾಡಿದ್ದೇವೆ,  ಆದರೆ ಚಿಲ್ಲರೆ ಸಮಸ್ಯೆ ಮಾತ್ರ ನಮ್ಮನ್ನು ಬಿಟ್ಟಿಲ್ಲ ಎಂದು ಚಿತ್ರದುರ್ಗದ ಎಸ್​ಬಿಎಂ ಬ್ಯಾಂಕ್ ಮ್ಯಾನೇಜರ್ ಸುನಿಲ್ ಹೇಳಿದ್ದಾರೆ. ಆಯಾ ಸಮಯಕ್ಕೆ ನಾವು ಎಲ್ಲರಿಗೂ ಸಂಬಳವನ್ನು ಕೊಡುತ್ತಾ ಬಂದಿದ್ದೇವೆ. ಅದಕ್ಕಾಗಿ ಪ್ರತ್ಯೇಕ ಮೂರು ಕೌಂಟರ್​ಗಳನ್ನು ಮಾಡಿದ್ದೇವೆ. ಪಿಂಚಣಿದಾರರು  ಕಳೆದ ಮೂರು ದಿನಗಳಿಂದ ಹಣವನ್ನು ಬಿಡಿಸಿಕೊಂಡು ಹೋಗ್ತಾ ಇದ್ದಾರೆ.  ಇದರಿಂದ ನಮಗೆ ಯಾವ  ಸಮಸ್ಯೆ ಇಲ್ಲ. ಆದರೆ ನೋಟುಗಳ ಕೊರತೆ ಇದೆ ಎಂದು  ಎಸ್​ಬಿಎಂ ಬ್ಯಾಂಕ್​ ಮ್ಯಾನೇಜರ್​ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ