ದೃಷ್ಟಿಹೀನತೆಗೆ ಝಿಕಾ ಕಾರಣ!

By Suvarna Web DeskFirst Published Dec 1, 2016, 3:34 PM IST
Highlights

ಗರ್ಭ ಧರಿಸಿದ ಮಹಿಳೆಯರಲ್ಲಿ ಝಿಕಾ ವೈರಸ್ ಇದ್ದರೆ, ಅವರಿಗೆ ಜನಿಸುವ ಮಕ್ಕಳು ದೃಷ್ಟಿಹೀನತೆಗೂ ಕಾರಣವಾಗುತ್ತದೆ ಎಂಬ ವಿಚಾರವನ್ನು ವಿಜ್ಞಾನಿಗಳ ತಂಡ ಬಹಿರಂಗಪಡಿಸಿದೆ.

ನವದೆಹಲಿ(ಡಿ.01): ಜ್ವರ, ಚರ್ಮ ಸಮಸ್ಯೆ, ಸ್ನಾಯು ಮತ್ತು ಸಂದು ನೋವು ಮತ್ತು ತಲೆ ನೋವಿಗೆ ಝಿಕಾ ವೈರಸ್ ಕಾರಣವಾಗುತ್ತದೆ ಎಂಬುದು ಹಳೆಯ ಸುದ್ದಿ.

ಆದರೆ ಗರ್ಭ ಧರಿಸಿದ ಮಹಿಳೆಯರಲ್ಲಿ ಝಿಕಾ ವೈರಸ್ ಇದ್ದರೆ, ಅವರಿಗೆ ಜನಿಸುವ ಮಕ್ಕಳು ದೃಷ್ಟಿಹೀನತೆಗೂ ಕಾರಣವಾಗುತ್ತದೆ ಎಂಬ ವಿಚಾರವನ್ನು ವಿಜ್ಞಾನಿಗಳ ತಂಡ ಬಹಿರಂಗಪಡಿಸಿದೆ.

ಬ್ರೆಜಿಲ್‌ನ ‘ಯಾಲೆ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ನ ಸಂಶೋಧಕರ ತಂಡ ಗರ್ಭಿಣಿ ಮಹಿಳೆಯರಲ್ಲಿನ ಝಿಕಾ ವೈರಸ್, ಅವರಿಗೆ ಜನಿಸುವ ಮಕ್ಕಳ ರೆಟಿನಾದ ಮೇಲೆ ತೀವ್ರ ಸ್ವರೂಪದ ಗಾಯಕ್ಕೆ ಕಾರಣವಾಗುತ್ತದೆ. ಆದರೆ, ಶಾಶ್ವತ ಕುರುಡುತನಕ್ಕೆ ಝಿಕಾ ಕಾರಣವಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

click me!