ಗುಹೆಯಿಂದ ಮೇಲೆದ್ದ ಫುಟ್ಬಾಲ್ ತಂಡ: ಫಲಿಸಿತು ಪ್ರಾರ್ಥನೆ!

Published : Jul 10, 2018, 05:27 PM ISTUpdated : Jul 10, 2018, 06:23 PM IST
ಗುಹೆಯಿಂದ ಮೇಲೆದ್ದ ಫುಟ್ಬಾಲ್ ತಂಡ: ಫಲಿಸಿತು ಪ್ರಾರ್ಥನೆ!

ಸಾರಾಂಶ

ಥೈಲ್ಯಾಂಡ್ ಗುಹೆಯಲ್ಲಿ ಫುಟ್ಬಾಲ್ ತಂಡ 11 ಬಾಲಕರು ಸುರಕ್ಷಿತವಾಗಿ ಹೊರಗೆ ಉಳಿದಿರುವುದು ಕೋಚ್ ಮತ್ತೋರ್ವ ಬಾಲಕ ಮಾತ್ರ ಇಂದೇ ಕಾರ್ಯಾಚರಣೆ ಮುಗಿಯುವ ಸಾಧ್ಯತೆ

ಬ್ಯಾಂಕಾಕ್(ಜು.10): ಥೈಲ್ಯಾಂಡ್​ ಗುಹೆಯಲ್ಲಿ ಸಿಲುಕಿರುವ ಬಾಲಕರ ಫುಟ್ಬಾಲ್ ತಂಡದ ಸುರಕ್ಷತೆಗೆ ಇಡೀ ವಿಶ್ವವೇ ಪ್ರಾರ್ಥನೆ ಮಾಡುತ್ತಿತ್ತು. ಇದೀಗ ಈ ಪ್ರಾರ್ಥನೆ ಫಲಿಸಿದ್ದು, ಗುಹೆಯಲ್ಲಿ ಎಲ್ಲ 12 ಬಾಲಕರು ಮತ್ತು ಕೋಚ್ ಅವರನ್ನು ರಕ್ಷಣಾ ತಂಡ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ಅಬ್ಬರದ ಮಳೆಯ ನಡುವೆಯೂ ಸಾಹಸೀ ರಕ್ಷಣಾ ಕಾರ್ಯಾಚರಣೆಗೆ ಜಯ ಸಿಕ್ಕಿದೆ.

ಕಳೆದ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ 4, ಸೋಮವಾರ 4 ಮತ್ತು ಇಂದಿನ ಕಾರ್ಯಾಚರಣೆಯಲ್ಲಿ4 ಬಾಲಕರು ಮತ್ತು ಕೋಚ್ ಅವರನ್ನು ತರುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ ಎರಡು ವಾರಗಳಿಂದ  ಇಡೀ ಜಗತ್ತು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಸಿಹಿ ಸುದ್ದಿ ಕೊನೆಗೂ ಬಂದಂತಾಗಿದೆ. 

ಥೈಲ್ಯಾಂಡ್​ನ ಚಿಯಾಂಗ್​ ರಾಯ್​ ಬಳಿಯ ಗುಹೆಯಲ್ಲಿ ಕೋಚ್ ಸಮೇತ 12 ಬಾಲಕರು ಗುಹೆಯೊಳಗೆ ಸಿಲುಕಿಕೊಂಡಿದ್ದರು. ಜೀವದ ಹಂಗನ್ನೂ ತೊರೆದು ಡೈವರ್​ಗಳ ತಂಡ ಜ್ಯೂನಿಯರ್​ ಫುಟ್ಬಾಲ್ ತಂಡವನ್ನು ರಕ್ಷಿಸಲು ನಿರಂತರ ಕಾರ್ಯಾಚರಣೆ ಮಾಡಿ ಫುಟ್ಇಬಾಲ್ಡೀ ತಂಡವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
ಹೊಸ ವರ್ಷಕ್ಕೆ ಕೆಲವೇ ಹೊತ್ತಲ್ಲಿ ಶಾಕ್! ಕೊಳ್ಳೇಗಾಲದಲ್ಲಿ ಭೀಕರ ಅಗ್ನಿ ಅವಘಡ; ಬೇಕರಿ ಸೇರಿದಂತೆ ಮೂರು ಅಂಗಡಿಗಳು ಭಸ್ಮ!