ಬೆಂಗಳೂರಿನಲ್ಲಿ ನಮ್ಮ ಕಾಡಹಬ್ಬ, ವಿಶೇಷ ಏನು?

First Published Jul 10, 2018, 4:13 PM IST
Highlights

ಪ್ರತಿ ದಿನ ಪರಿಸರ ಸಂರಕ್ಷಣೆಯ ಕೂಗು ಕೇಳಿ ಬರುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ರಾಜರಾಜೇಶ್ವರಿ ನಗರದ ಐ ಕೇರ್ ಸಂಸ್ಥೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.ಏನಿದು ಹೊಸತನ ಈ ಸುದ್ದಿಯನ್ನು  ಓದಿ...

ಬೆಂಗಳೂರು[ಜು.10] 'ಆರ್ ಆರ್ ನಗರ- ಐ - ಕೇರ್' ಸಂಸ್ಥೆಯು ಜುಲೈ 15 ರಂದು ಬೆಳಗ್ಗೆ 7 ರಿಂದ  10 ರವರೆಗೆ, ​​'ನಮ್ಮ ಕಾಡಹಬ್ಬ'  ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜರಾಜೇಶ್ವರಿ ನಗರದಲ್ಲಿರುವ ಸಂಸ್ಥೆ 2013 ರಿಂದ, 'ಹಸಿರು ಮತ್ತು ಸ್ವಚ್ಛ ಆರ್ ಆರ್ ನಗರ' ನಿರ್ಮಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಕಾಡು ಹಬ್ಬದ ಪ್ರಯುಕ್ತ ನಗರದ ಹೊರವಲಯದಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂದು ಸಾವಿರ  ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಈ ಕೆಲಸಕ್ಕೆ  ವೃತ್ತಿಪರರು, ತಜ್ಞರು, ನಾಗರಿಕರು, ವರ್ತಕರು, ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ, ನಾನಾ ಕ್ಷೇತ್ರದ ಸಂಘ-ಸಂಸ್ಥೆಗಳನ್ನು ಪಾಲುದಾರರಾಗಿ ಭಾಗವಹಿಸಲಿದ್ದಾರೆ.

ಸಸಿಗಳನ್ನು ಅರಣ್ಯ ಇಲಾಖೆ ಒದಗಿಸಲಿದೆ.  ಲಿಯೊ ಪ್ಯಾಕರ್ಸ್ ಅಂಡ್ ಮೂವೆರ್ಸ್ , ಬಾಲಾಜಿ ಕನ್ ಸ್ಟ್ರಕ್ಷನ್  ಹಾಗೂ ಬೆಸ್ಟ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು  ಸಸಿ ನೆಡುವ ಕೆಲಸಕ್ಕೆ ಕೖ ಜೋಡಿಸಲಿವೆ. ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯಕೀಯ ನೆರವು ನೀಡುತ್ತಿದೆ. 

ಪರಿಸರ ಕಾಳಜಿಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್, ಆರೆಕಲ್ ಸೇರಿದಂತೆ ಕಾರ್ಪೊರೇಟ್ ವಲಯದ ಹಲವು ಕಂಪನಿಗಳು ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಕೈಜೋಡಿಸಿದ್ದಾರೆ.  ಅರಣ್ಯದಲ್ಲಿ ಮರಗಳನ್ನು ಬೆಳೆಸುವ ಈ ಕಾರ್ಯಕ್ರಮಕ್ಕೆ ನಾಟಿ ಸಸಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಇಂಟರ್ ನ್ಯಾಶನಲ್ ಆರ್ಟ್ ಆ್ಯಂಡ್ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಶ್ರೀವತ್ಸ ತಿಳಿಸಿದ್ದಾರೆ.

click me!