
ಮೈಸೂರು(ಏ.17): ಕ್ಯಾದನಹಳ್ಳಿಯ ಸೋಮಣ್ಣ ಅವರ ನಾಲ್ಕು ಎಕರೆ ಭೂಮಿ ಹಗಲಿನಲ್ಲಿ ಮಾಮೂಲಿ ಯಂತೆ ಕಂಡರೂ ರಾತ್ರಿ ಕೆಂಡದಂತೆ ಕೆಂಪಗೆ ಗೋಚರಿಸುತ್ತದೆ. ಮಂಗಳ ವಾರದಿಂದಲೂ ಈ ಪ್ರದೇಶದಲ್ಲಿ ಭೂಮಿ ಬೆಂಕಿ ಉಗುಳುತ್ತಿದ್ದು, ದುರದೃಷ್ಟವಶಾತ್ ಹರ್ಷಲ್ ಹಾಗೂ ಮನೋಜ್ ಬಹಿರ್ದೆ ಸೆಗೆಂದು ಹೋಗಿದ್ದಾಗ ಬೆಂಕಿ ತಗುಲಿತ್ತು. ಹರ್ಷಿಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ಸ್ಥಳೀ ಯರಲ್ಲಿ ಆತಂಕ ಮನೆ ಮಾಡಿದ್ದು, ಭೂ ವಿಜ್ಞಾನಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆದರೆ, ಘಟನೆಗೆ ನಿಖರ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಸದ್ಯ ಜಮೀ ನಿನ ಪಕ್ಕದ ಕಾರ್ಖಾ ನೆಗಳಿಂದ ಹೊರಬರುವ ತ್ಯಾಜ್ಯವೇ ಕಾರಣ ಎಂದು ಹೇಳ ಲಾಗುತ್ತಿದೆ.
ಸದ್ಯ ಘಟನಾ ಸ್ಥಳದಲ್ಲಿ 110 ಡಿಗ್ರಿ ತಾಪಮಾನ ಇದೆ. ಯಾವ ಕಾರಣದಿಂದ ಬೆಂಕಿ ಉತ್ಪತ್ತಿಯಾಗಿದೆ ಎಂದು ಈಗ ಹೇಳೋಕೆ ಸಾಧ್ಯವಿಲ್ಲ. ಘಟನೆಗೆ ಕಾರಣರಾದವರ ವಿರುದ್ದ ಕ್ರಿಮಿನಲ್ ಪ್ರಕರಣಕ್ಕೂ ಅವಕಾಶವಿದೆ. ವರದಿಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಶಿಫಾರಸು ಮಾಡುತ್ತೇವೆ ಎಂದು ಸುವರ್ಣ ನ್ಯೂಸ್'ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ. ಲಿಂಗರಾಜ್ ತಿಳಿಸಿದ್ದಾರೆ.
ಅಲ್ಲದೆ ತಹಸಿಲ್ದಾರ್ ಅವರು ಘಟನಾ ಸ್ಥಳವನ್ನು ನಿಷೇಧಿತ ವಲಯ ಎಂದು ಘೋಷಿಸಿ ಸಾರ್ವಜನಿಕರು ಸಂಚರಿಸದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರತಿಭಟನೆಗೆ ನಿರ್ಧಾರ
ಘಟನೆಯಿಂ ದಾಗಿ ಆತಂಕಗೊಂಡಿರುವ ಸ್ಥಳೀ ಯರು ಆ ಪ್ರದೇಶಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.ಆ ಪ್ರದೇಶಕ್ಕೆ ಕಾಲಿಟ್ಟರೆ ಕ್ಷಣಾರ್ಧ ದಲ್ಲಿ ಸುಟ್ಟುಭಸ್ಮವಾಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಹರ್ಷಲ್ ಶವ ಇಟ್ಟು ಡೀಸಿ ಕಚೇರಿ ಮುಂದೆ ಸೋಮ ವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.