
ನವದೆಹಲಿ(ಏ.17): ಅಪನಗದೀಕರಣದ ವೇಳೆ ಕಪ್ಪುಹಣಕ್ಕೆ ‘ಆಶ್ರಯ' ನೀಡಿದ ಗುಮಾನಿಗೆ ಒಳಗಾಗಿದ್ದ ಜನಧನ ಖಾತೆಗಳಲ್ಲಿನ ಹಣ ಮಾರ್ಚ್ 29ರಿಂದ ಏಪ್ರಿಲ್ 5ರ ನಡುವಿನ ಒಂದೇ ವಾರದ ಅವಧಿಯಲ್ಲಿ 1000 ಕೋಟಿ ರು.ನಷ್ಟು ಏರಿದೆ.
ಮಾರ್ಚ್ 29ಕ್ಕೆ ಅಂತ್ಯಗೊಂಡ ವಾರದಲ್ಲಿ 62,972.42 ಕೋಟಿ ರು. ಇದ್ದ ಜನಧನ ಖಾತೆಗಳಲ್ಲಿನ ಠೇವಣಿ ಏಪ್ರಿಲ್ 5ಕ್ಕೆ 63,971.38 ಕೋಟಿ ರು.ಗೆ ಏರಿದೆ ಎಂದು ಹಣಕಾಸು ಸಚಿವಾಲಯದ ದತ್ತಾಂಶಗಳು ಹೇಳಿವೆ.
500 ಮತ್ತು 1000 ನೋಟುಗಳ ಅಪನಗದೀಕರಣದ ತರುವಾಯ ಡಿ.7ರಂದು ಜನಧನ ಖಾತೆಗಳಲ್ಲಿನ ಸಾರ್ವಕಾಲಿಕ ಗರಿಷ್ಠ .74,610ಕ್ಕೇರಿತ್ತು. ಬಳಿಕ ಠೇವಣಿ ಹಿಂತೆಗೆತ ಆರಂಭವಾಗಿತ್ತು. ಈಗ ಡಿ.7ರ ನಂತರ ಇದೇ ಮೊದಲ ಬಾರಿಗೆ ಕುಸಿತದ ಪರ್ವ ಮುಗಿ ದಿದ್ದು, ಒಂದು ವಾರದಲ್ಲಿ ಸಾವಿರ ಕೋಟಿ ರು.ನಷ್ಟುಏರಿದೆ. ಈ ನಡುವೆ ಜನಧನ ಖಾತೆಗಳ ಸಂಖ್ಯೆಯೂ 28.23 ಕೋಟಿಗೆ ಏರಿದ್ದು, ಈ ಪೈಕಿ 18.50 ಕೋಟಿ ಖಾತೆಗಳು ಆಧಾರ್‌ಗೆ ಸಂಯೋಜನೆಯಾಗಿವೆ. ಅಪನಗದೀಕರಣದಲ್ಲಿ ಆಧಾರ್ ಖಾತೆಗಳು ದುರ್ಬಳಕೆಯಾಗುವುದನ್ನು ಮನಗಂಡಿದ್ದ ಸರ್ಕಾರ, ಇವುಗಳಲ್ಲಿನ ಹಣ ಹಿಂತೆಗೆತದ ಮೇಲೆ ಹಲವು ಮಿತಿಗಳನ್ನು ಹೇರಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.