
ಬೆಂಗಳೂರು(ಮಾ.07): ಮಕ್ಕಳು ಮನೆಯಲ್ಲಿದ್ದರೆ ಅದೇ ಸ್ವರ್ಗ ಅಂತ ದೊಡ್ಡವರು ಹೇಳುತ್ತಿದ್ದರು. ಆದರೆ, ಈಗ ಫುಲ್ ಬದಲಾಗಿದೆ. ಮಕ್ಕಳು ಯಾವಾಗ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಪಾಲಕರು ಕಾಯುತ್ತಿದ್ದಾರೆ. ಅರೇ, ಅದ್ಯಾರ್ ರೀ... ಮಕ್ಕಳನ್ನ ಮನೆಯಿಂದ ಹೊರಗೆ ಹೋಗ್ಲಿ ಎನ್ನುವವರು? ಅಷ್ಟಕ್ಕೂ ಮಕ್ಕಳು ಏನು ಮಾಡಿದ್ರು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಇತ್ತೀಚಿಗೆ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿದು ಮುಳುಗಿ ಹೋಗಿದ್ದಾರೆ. ಆ ಹಳೇ ವಿಷಯಕ್ಕೆ ಈವಾಗ ಹೊಸ ಟ್ವಿಸ್ಟ್ ಸಿಕ್ಕಿದೆ. ಟೆಕ್ನಾಲಜಿ ಬಗ್ಗೆ ಮಕ್ಕಳಿಗೆ ಅರ್ಥವಾಗಲಿ ಅಂತ ಪಾಲಕರು ಮಕ್ಕಳಿಗೆ ಕೊಡಸಿದ್ದ ಮೊಬೈಲ್ ಈಗ ಮಕ್ಕಳಿಗೆ ಮಾರಕವಾಗಿದೆ. ಇಡೀ ದಿನ ಮಕ್ಕಳು ಮೊಬೈಲ್'ನಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಂತ ಕಳೆದ ಎರಡು ತಿಂಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪಾಲಕರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿರುವ ಪಾಲಕರೆಲ್ಲರೂ ಬೆಂಗಳೂರಿನವರೇ. ಪ್ರತಿ ನಿತ್ಯ ಬೆಳಗಾದರೆ ಮಕ್ಕಳು ಮೊಬೈಲ್ ಹಿಡಿದುಕೊಂಡು ಕೂತು ಬಿಡುತ್ತಾರೆ. ಅದನ್ನು ಬಿಡಿಸಲು ಏನು ಮಾಡಬೇಕು? ಮೊಬೈಲ್ ಕೊಡಸದಿದ್ದರೆ ಊಟ ಮಾಡಲ್ಲ ಅಂತ ರಚ್ಚೆ ಹಿಡಿಯುತ್ತಾರೆ. ಹೀಗೆ ಹಲವು ಪ್ರಶ್ನೆಗಳನ್ನ ಪೋಷಕರು ಸಹಾಯವಾಣಿಗೆ ಕರೆ ಮಾಡಿ ಕೇಳಿದ್ದಾರಂತೆ. ಜೊತೆಗೆ ಮಕ್ಕಳ ಆರೋಗ್ಯದ ಮೇಲೂ ಭಾರಿ ಪ್ರಭಾವ ಬಿದ್ದಿದೆ. ಮನೆಯಲ್ಲಿ ತಂದೆ-ತಾಯಿಯರನ್ನೇ ಮಕ್ಕಳು ಮಾತಾಡಿಸಲು ಸಮಯವಿಲ್ಲದಷ್ಟು ಮೊಬೈಲ್'ನಲ್ಲಿ ಬ್ಯುಸಿ ಆಗಿದ್ದಾರಂತೆ.
ಇನ್ನೊಂದು ಅಚ್ಚರಿ ಅಂತಂದ್ರೆ.. ಸಹಾಯವಾಣಿಗೆ ಕರೆ ಮಾಡಿರುವ ಇಪ್ಪತ್ತು ಸಾವಿರ ಪೋಷಕರಲ್ಲಿ 13 ಸಾವಿರ ಕರೆಗಳು 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳ ಪಾಲಕರು. ದಿನಾಲೂ ಮೊಬೈಲ್'ನಲ್ಲಿ ಆಟವಾಡುತ್ತಾ, ಮನೆ ಬಿಟ್ಟು ಹೊರಗಿನ ಜಗತ್ತನೇ ನೋಡುತ್ತಿಲ್ಲವಂತೆ. ಇದರಿಂದ ಮಕ್ಕಳ ಆರೋಗ್ಯದ ಮೇಲೂ ಭಾರೀ ಪ್ರಭಾವ ಬೀರುತ್ತಿದೆ.
ಮಕ್ಕಳು ಗಿಡ-ಮರ ಮಧ್ಯೆ, ಬೀದಿ-ಮೈದಾನದಲ್ಲಿ ಆಟವಾಡಿದರೆ ಅವರ ಆರೋಗ್ಯದ ಮೇಲೆ ಬೀರುವ ಪ್ರಭಾವವೇ ಬೇರೆ. ಆದರೆ, ಇಡೀ ದಿನ ಮನೆಯಲ್ಲಿ ಮೊಬೈಲ್ ಹಿಡಿದು ಆಟವಾಡುತ್ತಿದ್ದರೆ ಆಗುವ ಪರಿಣಾಮ ಭಯಾನಕವಾಗಿರುತ್ತದೆ. ನಿಮ್ಮ ಮನೆಯಲ್ಲೂ ಮಕ್ಕಳಿಗೆ ಮೊಬೈಲ್ ಜಗತ್ತು ಪರಿಚಯಿಸುವ ಮುನ್ನ ಒಮ್ಮೆ ಯೋಚನೆ ಮಾಡಿ. ಇಲ್ಲವಾದರೆ ನೀವು ಮುಂದೊಂದು ದಿನ ಸಹಾಯವಾಣಿಗೆ ಕರೆ ಮಾಡುವ ಪರಿಸ್ಥಿತಿ ಬರಬಹುದು ಎಚ್ಚರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.