
ಬೆಂಗಳೂರು[ಫೆ. 28] ತನ್ನ ಬಳಿ ಶಕ್ತಿ ಇಲ್ಲವಾಗಿದ್ದರೂ ಪಾಕಿಸ್ತಾನ ಭಾರತದ ಪೈಲಟ್ ನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವ ಹಂತಕ್ಕೆ ಬಂದಿತ್ತು. ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಂತಿಮವಾಗಿ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಿಕೊಡುವ ನಿರ್ಧಾರ ಮಾಡಿದರು. ಆದರೆ ಇದಕ್ಕೆ ಸಲಿ ಕಾರಣಗಳು ಬೇರೆಯದೇ ಇದೆ.
1. ಜಿನೇವಾ ಒಪ್ಪಂದ: 1949ರ 2ನೇ ಮಹಾಯುದ್ಧದ ಸಂದರ್ಭದಲ್ಲಿ ಜಿನೇವಾ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಎರಡನೇ ಮಹಾಯುದ್ಧದ ಕೈದಿಗಳಿಗೆ ಪೂರ್ಣ ಪ್ರಮಾಣದ ಹಕ್ಕನ್ನು ನೀಡಲಾಗಿದೆ. ಯುದ್ಧ ಕೈದಿಗಳಿಗೆ ಹಿಂಸೆ ಬಗ್ಗೆ ಕಾನೂನಿನಲ್ಲಿ ಅಂಕುಶ ನೀಡುವುದು ಇದರ ಉದ್ದೇಶ. ಎಲ್ಲಾ ಕೈದಿಗಳನ್ನ ಮಾನವೀಯ ನೆಲೆಯಲ್ಲಿ ನೋಡಿಕೊಳ್ಳಬೇಕು ಎಂದು ಜಿನೇವಾ ಒಪ್ಪಂದ ಹೇಳುತ್ತದೆ. ಕೈದಿಗಳಿಗೆ ಚಿತ್ರಹಿಂಸೆ ನೀಡುವಂತಿಲ್ಲ, ದರ್ಪ ತೋರಿಸುವಂತಿಲ್ಲ, ಮರಣ ದಂಡನೆ ಶಿಕ್ಷೆ ನೀಡುವಂತಿಲ್ಲ, ಶಿರ ಛೇದನ ಮಾಡುವಂತಿಲ್ಲ ಎಂದು ಈ ಒಪ್ಪಂದ ಹೇಳುತ್ತಿದ್ದು ಪಾಕಿಸ್ತಾನ ಇದನ್ನು ಉಲ್ಲಂಘನೆ ಮಾಡಿದ್ದರೆ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬೇಕಿತ್ತು.
ಫಲಿಸಿತು ಭಾರತೀಯರ ಪೂಜಾಫಲ: ಅಭಿನಂದನ್ ನಾಳೆ ಭಾರತಕ್ಕೆ!
2. ನೆರವಿಗೆ ಬಾರದ ಚೀನಾ, ಅಮೆರಿಕ: ಭಾರತ ಮತ್ತು ಪಾಕಿಸ್ತಾನದ ನಡುವೆ ಗೊಂದಲದ ವಾತಾವರಣ ನಿರ್ಮಾಣ ಆದಾಗ ಚೀನಾ ಮತ್ತು ಅಮೆರಿಕ ತಮ್ಮ ನೆರವಿಗೆ ಬರುತ್ತದೆ ಎಂದು ಪಾಕ್ ಭಾವಿಸಿತ್ತು.
3. ಒಬ್ಬಂಟಿಯಾಗುವ ಅಪಾಯ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ನಡೆಯುತ್ತಿದ್ದ ಬೆಳವಣಿಗೆಗಳು ಪಾಕಿಸ್ತಾನವನ್ನು ಒಬ್ಬಂಟಿಯಾಗಿಸುವ ಎಚ್ಚರಿಕೆಯನ್ನು ನೀಡಿದ್ದವು
4. ಸೇನಾ ಕಾರ್ಯಾಚರಣೆ ಭಯ: ಒಂದು ವೇಳೆ ಯುದ್ಧಕ್ಕೆ ಮುಂದಾದರೆ ಭಾರತ ಸುಮ್ಮನೆ ಕೂರುವ ಸ್ಥಿತಿಯಲ್ಲಿ ಇಲ್ಲ ಎಂಬುದು ಪಾಕ್ ಗೆ ಗೊತ್ತಿತ್ತು. ಸೇನಾ ಕಾರ್ಯಾಚರಣೆ ಭಯವು ಪಾಕಿಸ್ತಾನವನ್ನು ಕಾಡಿತು.
5. ನಾಗರಿಕರ ಮೇಲೆ ದಾಳಿ ಮಾಡಿಲ್ಲ: ಅಭಿನಂದನ್ ಅಥವಾ ಭಾರತದ ಯುದ್ಧ ವಿಮಾನಗಳು ಪಾಕ್ ನಾಗರಿಕರ ಮೇಲೆ ದಾಳಿ ಮಾಡಿರಲಿಲ್ಲ.
7. ಯುದ್ಧ ಕೈದಿ ಎಂದು ಹೇಳಲು ಸಾಧ್ಯವಿಲ್ಲ: ಎಲ್ಲಿಯೂ ಯುದ್ಧ ಆರಂಭವಾಗಿದೆ ಎಂದು ಎರಡು ದೇಶಗಳು ಹೇಳಿಲ್ಲ. ಈ ಕಾರಣದಿಂದ ಅಭಿನಂದನ್ ಅವರನ್ನು ಯುದ್ಧ ಕೈದಿ ಎಂದು ಪರಿಭಾವಿಸಲು ಸಾಧ್ಯವೇ ಇಲ್ಲ.
8.ಭಾರತದ ವಿದೇಶಾಂಗ ತಂತ್ರ: ಅಭಿನಂದನ್ ಬಂಧನದ ನಂತರ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳೊಂದಿಗೆ ಮಾತುಕತೆ ನಡೆಸಿ ಕೋಟೆ ಕಟ್ಟಿಕೊಂಡಿತ್ತು.
9 . ಶಾಂತಿ ಧೂತನಂತೆ ಪೋಸ್ : ಇನ್ನೊಂದು ಕಡೆ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಧೂತ ಎಂದು ತೋರಿಸಿಕೊಳ್ಳುವ, ಪೋಸ್ ನೀಡುವ ಕೆಲಸ ಮಾಡಿದೆ.
10 . ಯಥಾ ಸ್ಥಿತಿ ಕಾಪಾಡಿಕೊಳ್ಳುವ ತಂತ್ರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸದ್ಯದ ವಾತಾವರಣವನ್ನೇ ಕಾಪಾಡಿಕೊಂಡು ಹೋಗುವ ತಂತ್ರವೂ ಅಭಿನಂದನ್ ಬಿಡುಗಡೆ ಹಿಂದೆ ಇದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.