
ನವದೆಹಲಿ: ವ್ಯಭಿಚಾರ ತಡೆ ಕಾನೂನು ಲಿಂಗ ತಾರತಮ್ಯ ಮಾಡುತ್ತಿದೆ ಎಂಬ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್, ತೀರ್ಪು ಕಾಯ್ದಿರಿಸಿದೆ. ಇದರ ಜತೆಗೆ ಕೇಂದ್ರ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಯನ್ನೂ ಕೇಳಿದೆ. ತನ್ನ ಪತ್ನಿಯು ಪರಪುರುಷನೊಂದಿಗೆ ‘ಪತಿಯ ಸಮ್ಮತಿಯೊಂದಿಗೆ’ ಅಕ್ರಮ ಸಂಬಂಧ ಹೊಂದಿದ್ದರೆ ಅದರಲ್ಲಿ ತಪ್ಪಿಲ್ಲ ಎಂದು ವ್ಯಭಿಚಾರ ತಡೆ ಕಾನೂನು ಹೇಳುತ್ತದೆ.
ಹೀಗೆ ಅಕ್ರಮ ಸಂಬಂಧಕ್ಕೆ ಪತಿ ಒಪ್ಪಿದರೆ ಅಡ್ಡಿಯಿಲ್ಲ ಎಂದಾದಲ್ಲಿ ಈ ಕಾಯ್ದೆಯಿಂದ ಸಮಾಜಕ್ಕೆ ಆಗುವ ಲಾಭವೇನು ಎಂದು ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರ ಪೀಠವು ಸರ್ಕಾರವನ್ನು ಪ್ರಶ್ನಿಸಿತು. ವ್ಯಭಿಚಾರ ತಡೆ ಕಾಯ್ದೆಯನ್ನು ಸಮರ್ಥಿಸುತ್ತ ನ್ಯಾಯಪೀಠದ ಮುಂದೆ ವಾದ ಮುಂದುವರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು, ‘ಈ ಕಾನೂನು ಮದುವೆಯ ಪಾವಿತ್ರ್ಯತೆಯನ್ನು ರಕ್ಷಿಸುತ್ತದೆ’ ಎಂದು ಹೇಳಿದರು. ಆಗ ಸಿಡಿಮಿಡಿಗೊಂಡ ನ್ಯಾಯಪೀಠವು, ‘ಇದು ಯಾವ ರೀತಿಯ ಪಾವಿತ್ರ್ಯ ರಕ್ಷಿಸುತ್ತದೆ?’ ಎಂದು ಈ ಮೇಲಿನಂತೆ ಖಾರವಾಗಿ ಪ್ರಶ್ನಿಸಿತು.
ಕಾಯ್ದಿರಿಸಿದ ತೀರ್ಪು: ಈ ಮಧ್ಯೆ ಸುಪ್ರೀಂಕೋರ್ಟ್‌ನ ಪಂಚಸದಸ್ಯ ಸಾಂವಿಧಾನಿಕ ಪೀಠ, ತೀರ್ಪು ಕಾಯ್ದಿರಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.