ಭಾವನೆ ನಿಮ್ಮದು, ಧ್ವನಿ ನನ್ನದು: ಸಲಹೆ ಕೇಳಿದ ಮೋದಿ!

By Web DeskFirst Published Jul 31, 2018, 12:53 PM IST
Highlights

ಆಗಸ್ಟ್ 15 ರ ಭಾಷಣಕ್ಕೆ ಸಲಹೆ ಕೊಡಿ

ಜನತೆಗೆ ಮನವಿ ಮಾಡಿದ ಪ್ರಧಾನಿ ಮೋದಿ

ಸ್ವಾತಂತ್ರ್ಯ ಭಾಷಣಕ್ಕೆ ಸಲಹೆಗೆ ಮನವಿ

ಕೆಂಪುಕೋಟೆಯಿಂದ ಮೋದಿ ಭಾಷಣ

ನಮೋ ಆ್ಯಪ್ ನಲ್ಲಿ ಸಲಹೆ ಹಂಚಿಕೊಳ್ಳಿ
 

ನವದೆಹಲಿ(ಜು.31): ಇನ್ನೇನು ಆಗಸ್ಟ್ ೧೫ ಬರಲಿದೆ. ಇಡೀ ದೇಶ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಲಿದೆ. ದೆಹಲಿಯ ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಹಿನ್ನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಆಗಸ್ಟ್ ೧೫ರ ಭಾಷಣಕ್ಕೆ ಸಲಹೆ ಕೇಳಿ ಟ್ವೀಟ್ ಮಾಡಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ವ ದಿನಾಚರಣೆ ಭಾಷಣಕ್ಕಾಗಿ ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳುವಂತೆ ಮೋದಿ ಜನತೆಯಲ್ಲಿ ಮನವಿ ಮಾಡಿದ್ದಾರೆ. 

What are your thoughts and ideas for my 15th August speech?

Share them with me on a specially created forum on the Narendra Modi App.

You can also share them on MyGov. https://t.co/BJMCEeisne

I look forward to receiving your fruitful inputs in the coming days.

— Narendra Modi (@narendramodi)

ಅಂತೆಯೇ ಸಾರ್ವಜನಿಕರ ಸಲಹೆ ಮತ್ತು ಚರ್ಚೆಗೆ ನಮೋ ಆ್ಯಪ್ ನಲ್ಲಿ ವೇದಿಕೆ ಕಲ್ಪಿಸಲಾಗಿದೆ. ಅಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.

ಇನ್ನು ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಕೇವಲ 56 ನಿಮಿಷಗಳ ಚಿಕ್ಕ ಭಾಷಣ ಮಾಡಿದ್ದರು. 2016ರಲ್ಲಿ ಅತ್ಯಂತ  ಸುಧೀರ್ಘ ಅಂದರೆ ಒಟ್ಟು 96 ನಿಮಿಷಗಳ ಭಾಷಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!