ಶಬರಿಮಲೆ ತೀರ್ಪು ವಿರೋಧಿಸಿ ಶುರುವಾಯ್ತು 'ಕಾಯಲು ಸಿದ್ಧ’ ಮಹಿಳಾ ಆಂದೋಲನ

By Shrilakshmi ShriFirst Published Oct 3, 2018, 2:14 PM IST
Highlights

ಶಬರಿಮಲೆ ದೇವಾಲಯವನ್ನು ಮಹಿಳೆಯರು ಪ್ರವೇಶ ಮಾಡಬಹುದು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು | ತೀರ್ಪನ್ನು ವಿರೋಧಿಸಿ ಶುರುವಾಗಿದೆ ಮಹಿಳಾ ಆಂದೋಲನ 

ಕೇರಳ (ಅ. 03): ಶಬರಿಮಲೆ ದೇವಾಲಯವನ್ನು ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಋತುಸ್ರಾವದ ಕಾರಣಕ್ಕಾಗಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವುದನ್ನು ಸುಪ್ರೀಂಕೋರ್ಟ್ ತೆಗೆದು ಹಾಕಿದೆ. ಎಲ್ಲಾ ಪ್ರಾಯದ ಹೆಣ್ಣು ಮಕ್ಕಳು ಪ್ರವೇಶಿಸಬಹುದೆಂದು ಹೇಳಿದೆ. ಕೋರ್ಟಿನ ತೀರ್ಪನ್ನು ಕೆಲವರು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧವನ್ನು ವ್ಯಕ್ತಪಡಿಸಿದರು. 

ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!

ಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಮಾನ ಮನಸ್ಕ ಮಹಿಳೆಯರು #ReadyToWait ಎನ್ನುವ ಆಂದೋಲನವನ್ನು ಶುರು ಮಾಡಿದ್ದಾರೆ. ಈ ಆಂದೋಲನದ ಬಗ್ಗೆ ವಕ್ತಾರೆ ಪದ್ಮಾ ಪಿಳ್ಳೈ, ನಾವು ದೇವಾಲಯದ ಸಂಪ್ರದಾಯ, ಪರಂಪರೆಯನ್ನು ಗೌರವಿಸುತ್ತೇವೆ. 50 ವರ್ಷದವರೆಗೆ ಕಾಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಮಹಿಳೆಯರು ದನಿಗೂಡಿಸಿದ್ದಾರೆ. 

ನಿಲ್ಲಲು ಶಕ್ತಿ ಇದ್ರೆ ಮಾತ್ರ ಶಬರಿಮಲೆ, ಮಹಿಳೆಯರಿಗೆ ಈ ಸುದ್ದಿ ಪ್ರಮುಖ

#ReadyToWait  ಆಂದೋಲನ 2016 ರಲ್ಲಿ ಶುರುವಾಗಿದೆ. ಇದೀಗ ಮತ್ತೆ ಮುನ್ನಲೆಗೆ ಬಂದಿದೆ.  People Of Dharma ಎನ್ನುವ ಸಂಘಟನೆಯೊಂದು ತೀರ್ಪನ್ನು ಪ್ರಶ್ನಿಸಿ ಮತ್ತೆ ಕೋರ್ಟಿನ ಮೆಟ್ಟಿಲೇರಲಿದ್ದಾರೆ. ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. 

ಶಬರಿಮಲೆ: ಹಿಂದೆ ಹೆಂಗಿತ್ತೋ ಹಂಗೆ ಇರ್ಲಿ ಎಂದಿದ್ದ ಮಹಿಳಾ ನ್ಯಾಯಾಧೀಶೆ!
click me!