ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಕುಟುಂಬದ 13 ಸದಸ್ಯರು

By Web DeskFirst Published Oct 3, 2018, 1:36 PM IST
Highlights

ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ತಮ್ಮ ಸಮುದಾಯದಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದೆ. 

ಲಕ್ನೋ :  20 ಮಂದಿಯ ಮುಸ್ಲಿಂ ಕುಟುಂಬ ಸದಸ್ಯರಲ್ಲಿ 13 ಮಂದಿ ಹಿಂದೂ ಧರ್ಮಕ್ಕೆ ಮತಾಂತರವಾದ ಘಟನೆ ಉತ್ತರ ಪ್ರದೇಶದ ಬಾಗ್ ಪತ್ ಪ್ರದೇಶದ ಬಡರ್ಕಾದಲ್ಲಿ ನಡೆದಿದೆ. 

ಅಕ್ತರ್ ಅಲಿ ಎನ್ನುವ 68 ವರ್ಷದ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರವಾಗುವ ಮೂಲಕ ತನ್ನ ಹೆಸರನ್ನು ಧರಮ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ. 

ಕಳೆದ ಕೆಲ ತಿಂಗಳ ಹಿಂದೆ ತಮ್ಮ ಕುಟುಂಬದ 28 ವರ್ಷದ ಪುತ್ರ ಸಾವನ್ನಪ್ಪಿದ್ದು ಇದಕ್ಕೆ ತಮ್ಮ ಸಮುದಾಯ ಹಾಗೂ ಪೊಲೀಸರು ಯಾರೂ ಬೆಂಬಲ ನೀಡಿಲ್ಲ. ಈ ನಿಟ್ಟಿನಲ್ಲಿ ತಮ್ಮ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಅವರು ಹೇಳಿದ್ದಾರೆ. 

ಹಿಂದೂ ಯುವ ವಾಹಿನಿ ಕಾರ್ಯಕರ್ತರು ಹವನವನ್ನು ಮಾಡುವ ಮೂಲಕ ಅವರನ್ನು ಹಿಂದೂ ಧರ್ಮಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅಲ್ಲದೇ ಇದೇ ವೇಳೆ ವಂದೇ ಮಾತರಂ ಗೀತೆಯನ್ನೂ ಕೂಡ ಹಾಡಲಾಗಿದೆ. 

ಈ ವೇಳೆ ಜಿಲ್ಲಾ ಹಿಂದೂ ಯುವ ವಾಹಿನಿ ಅಧ್ಯಕ್ಷರಾದ ಯೋಗೇಂದ್ರ ತೋಮರ್ ಅವರು ಹಾಜರಿದ್ದು ಧರ್ಮಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ. ಕಳೆದ  5, 6 ದಶಕಗಳ ಹಿಂದೆ ಈ ಕುಟುಂಬ ಮುಸ್ಲೀಂ ಧರ್ಮಕ್ಕೆ ಮತಾಂತರವಾಗಿತ್ತು. ಇದೀಗ ಮತ್ತೆ ಅವರನ್ನು ಘರ್ ವಾಪ್ಸಿ  ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

click me!