
ನವದೆಹಲಿ[ಅ.14]: ಲೈಂಗಿಕ ಶೋಷಣೆಗೆ ಒಳಗಾದವರು ಹೇಳಿಕೊಳ್ಳಲು ಇರುವ ವೇದಿಕೆಯಾದ ‘ಮೀ ಟೂ’ ಆಂದೋಲನದ ಸುಳಿಗೆ ಸಿಲುಕಿರುವ ಲೇಖಕರಾದ ಚೇತನ್ ಭಗತ್ ಹಾಗೂ ಸುಹೇಲ್ ಸೇಠ್ ಮೇಲೆ ಮತ್ತಷ್ಟುಕಾಮಚೇಷ್ಟೆಆರೋಪಗಳು ಕೇಳಿಬಂದಿವೆ. ಭಗತ್ ಹಾಗೂ ಸೇಠ್ ಹೆಣ್ಣುಬಾಕರು ಎಂದು ಖ್ಯಾತ ಯುವ ಯೋಗ ಪಟು ಹಾಗೂ ಲೇಖಕಿ ಇರಾ ತ್ರಿವೇದಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮವೊಂದಕ್ಕೆ ಲೇಖನ ಬರೆದು, ಕೆಟ್ಟಅನುಭವವನ್ನು ಹಂಚಿಕೊಂಡಿರುವ ಇರಾ ತ್ರಿವೇದಿ, ಭಗತ್ ಹಾಗೂ ಸೇಠ್ ಅವರ ‘ಜನ್ಮ’ ಜಾಲಾಡಿದ್ದಾರೆ.
‘ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ನಾನೊಮ್ಮೆ ಪಾಲ್ಗೊಂಡ ವೇಳೆ ‘ನಿಮ್ಮ ಪುಸ್ತಕಗಳನ್ನು ಭಾರಿ ಸಂಖ್ಯೆಯಲ್ಲಿ ಪುರುಷರು ಖರೀದಿಸಿದರೆ ಏನು ಮಾಡುವಿರಿ?’ ಎಂದು ಚೇತನ್ ಭಗತ್ ಕೇಳಿದರು. ಅದಕ್ಕೆ ನಾನು ಲಘು ಶೈಲಿಯಲ್ಲಿ ಪರಿಗಣಿಸಿ, ‘100 ಪುಸ್ತಕ ಕೊಂಡ ಪುರುಷನಿಗೆ ಮುತ್ತು ಕೊಡುವೆ. ಎಲ್ಲ ಪುಸ್ತಕ ಖರೀದಿಸಿದವನನ್ನು ಮದುವೆ ಆಗುವೆ’ ಎಂದು ಹಾಸ್ಯವಾಗಿ ಉತ್ತರಿಸಿದೆ. ಆದರೆ ಇದನ್ನೇ ಗಂಭೀರವಾಗಿ ಪರಿಗಣಿಸಿದ್ದ ಭಗತ್ ನನ್ನನ್ನು ತಮ್ಮ ಕೋಣೆಗೆ ಕರೆಸಿಕೊಂಡರು. ‘ನಿನ್ನ 100 ಪುಸ್ತಕ ಖರೀದಿಸಿದ್ದೇನೆ. ಮುತ್ತು ಕೊಡು’ ಎಂದು ಬಲವಂತ ಮಾಡಿದರು’ ಎಂದು ಇರಾ ಆರೋಪಿಸಿದ್ದಾರೆ.
‘ಅಲ್ಲದೆ, ಹಲವಾರು ಬಾರಿ ಫೋನ್‌ನಲ್ಲಿ ಅಶ್ಲೀಲ ಸಂಭಾಷಣೆ ಹಾಗೂ ಸಂದೇಶ ರವಾನೆ ಯತ್ನವನ್ನು ಭಗತ್ ಮಾಡಿದ್ದಾರೆ. ನನ್ನ ಸ್ನೇಹಿತೆಯ ಜತೆಗೂ ಲಂಡನ್‌ನಲ್ಲಿ ಕೆಟ್ಟದಾಗಿ ನಡೆದುಕೊಂಡು ಆಕೆಯ ದೇಹವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ. ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟಿಗೇ ಹೋಗೋಣ ಎಂಬ ನೆಪ ಹೇಳಿ ನನ್ನ ಜತೆ ಲೈಂಗಿಕ ವಾಂಛೆ ತೀರಿಸಿಕೊಳ್ಳುವ ವಿಫಲ ಯತ್ನಗಳನ್ನು ಮಾಡಿದ್ದಾರೆ. ಒಬ್ಬ ವಿಬಾಹಿತನಾದ ಅವರ ನಡವಳಿಕೆ ನನಗೆ ಆಘಾತ ತಂದಿದೆ’ ಎಂದು ಇರಾ ದೂರಿದ್ದಾರೆ.
ಇನ್ನೊಬ್ಬ ಲೇಖಕ ಸುಹೇಲ್ ಸೇಠ್ ‘ಕಾಮಲೀಲೆ’ಗಳನ್ನೂ ಬಯಲಿಗೆ ಎಳೆದಿರುವ ಇರಾ, ‘ಸುಹೇಲ್ ಸೇಠ್ ಅವರು ನನ್ನ ಯೋಗದ ಭಂಗಿಗಳು ಸೆಕ್ಸಿಯಾಗಿವೆ ಎಂದು ಕಾಮೆಂಟ್ ಮಾಡುತ್ತಿದ್ದರು. ‘ನೀನು ಬ್ರಾ ಹಾಕಿಕೊಳ್ಳುವ ಅಗತ್ಯವಿಲ್ಲ’ ಎನ್ನುತ್ತಿದ್ದರು. ಅಲ್ಲದೆ, ‘ನಿನ್ನ ಕಾಲನ್ನು ವ್ಯಾಕ್ಸ್ ಮಾಡಿಸಿಕೊಂಡಿದ್ದೀಯಾ’ ಎಂದು ಕೇಳಿದ್ದರು’ ಎಂದು ಆಪಾದಿಸಿದ್ದಾರೆ.
‘ಸೇಠ್ ಅವರು ಪಾರ್ಟಿಗಳಲ್ಲಿ ಕುಡಿದಾಗ ಮಹಿಳೆಯರ ದೇಹದ ಮೇಲೆ ಅಸಭ್ಯವಾಗಿ ಕೈ ಹಾಕುತ್ತಾರೆ. ತಬ್ಬಿಕೊಳ್ಳುತ್ತಾರೆ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಾರೆ’ ಎಂದೂ ಇರಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.