
ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಕೇವಲ ತಮ್ಮ ನಟನೆಗೆ ಮಾತ್ರವಲ್ಲದೆ, ಫಿಟ್ನೆಸ್ ಮತ್ತು ಸಾಹಸಗಳಿಂದಲೂ ಹೆಸರುವಾಸಿಯಾಗಿದ್ದಾರೆ. ತಮ್ಮ ಫಿಟ್‌ನೆಸ್ ವಿಡಿಯೋಗಳಿಂದ ಅವರು ಯಾವಾಗಲೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಈ ಬಾರಿಯೂ ವಿದ್ಯುತ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯ ವಿಷಯವಾಗಿದೆ.
ಶನಿವಾರ, ವಿದ್ಯುತ್ ಜಮ್ವಾಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವರು ಯಾವುದೇ ಬಟ್ಟೆಯಿಲ್ಲದೆ ಮರವನ್ನು ಹತ್ತುತ್ತಿರುವುದು ಕಂಡುಬರುತ್ತದೆ. ಆದರೆ, ವೀಡಿಯೊದಲ್ಲಿ, ಅವರು ಎಮೋಜಿಯಿಂದ ತಮ್ಮ ಗುಪ್ತಾಂಗವನ್ನು ಮುಚ್ಚಿಕೊಂಡಿದ್ದಾರೆ. ಈ ವೀಡಿಯೊವನ್ನು ನೋಡಿ ಅನೇಕ ನೆಟಿಜನ್‌ಗಳು ಅಚ್ಚರಿಗೊಂಡಿದ್ದು, ವೈರಲ್ ಆಗುತ್ತಿದೆ.
ವಿದ್ಯುತ್ ಈ ವೀಡಿಯೊದೊಂದಿಗೆ ವಿವರವಾದ ಮಾಹಿತಿಯನ್ನೂ ಸಹ ಬರೆದಿದ್ದಾರೆ. ಕಲರಿಪಯಟ್ಟು ಅಭ್ಯಾಸಕಾರನಾಗಿ, ವರ್ಷಕ್ಕೊಮ್ಮೆ ಸಹಜ ಯೋಗವನ್ನು ಅಭ್ಯಾಸ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಸಹಜ ಎಂದರೆ ನೈಸರ್ಗಿಕ ಸ್ಥಿತಿ ಮತ್ತು ನೈಸರ್ಗಿಕತೆಗೆ ಮರಳುವುದು. ಇದು ಪ್ರಕೃತಿ ಮತ್ತು ಆಂತರಿಕ ಆತ್ಮದೊಂದಿಗೆ ಆಳವಾದ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ವೈಜ್ಞಾನಿಕ ದೃಷ್ಟಿಕೋನದಿಂದ, ಇದು ಅನೇಕ ನರ ರೆಸೆಪ್ಟರ್ ಮತ್ತು ಪ್ರೊಪ್ರಿಯೋಸೆಪ್ಟರ್‌ಗಳನ್ನು ಸಕ್ರಿಯಗೊಳಿಸುತ್ತದೆ. ಇದು ಸೂಕ್ಷ್ಮತೆ, ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸುತ್ತದೆ. ಇದು ದೇಹದ ಅರಿವನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಸ್ಥಿರತೆಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ ಎಂದು ಅವರು ವಿವರಿಸಿದರು.
ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಹಾಟ್ ಟಾಪಿಕ್ ಆಗಿದೆ. ಕೆಲವು ಅಭಿಮಾನಿಗಳು ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡಿ, ವಿದ್ಯುತ್ 'ಟಾರ್ಜನ್' ಚಿತ್ರಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಅವರ 'ಕಮಾಂಡೋ' ಪಾತ್ರದ ಬಗ್ಗೆ ತಮಾಷೆ ಮಾಡಿದ್ದಾರೆ. ಕೆಲವರು ಅವರನ್ನು ಟೀಕಿಸಿದರೆ, ಅನೇಕರು ಅವರ ನಿರ್ಧಾರವನ್ನು ಗೌರವಿಸಿದರು, ಅದು ಅವರ ವೈಯಕ್ತಿಕ ಆಯ್ಕೆ ಎಂದಿದ್ದಾರೆ.
ಇದರ ನಡುವೆ, ವಿದ್ಯುತ್ ಜಮ್ವಾಲ್ ಅವರ ಮುಂದಿನ ಸಿನಿಮಾಗಳನ್ನು ನೋಡುವುದಾದರೆ, ಅವರು ಶೀಘ್ರದಲ್ಲೇ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. 'ಸ್ಟ್ರೀಟ್ ಫೈಟರ್' ಚಿತ್ರದ ಮೂಲಕ ಹಾಲಿವುಡ್‌ಗೆ ಕಾಲಿಡಲಿದ್ದಾರೆ. ಇತ್ತೀಚೆಗೆ, ಅವರು ಚಿತ್ರದ ತಮ್ಮ ಲುಕ್ ಅನ್ನು ಸಹ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಕಿಟಾವೊ ಸಕುರೈ ನಿರ್ದೇಶಿಸಿದ್ದಾರೆ ಮತ್ತು ನೋಹ್ ಸೆಂಟಿನಿಯೊ, ಆಂಡ್ರ್ಯೂ ಕೋಜಿ, ಕಲಿನಾ ಲಿಯಾಂಗ್ ಮತ್ತು ಇತರ ಅನೇಕ ನಟರು ನಟಿಸಿದ್ದಾರೆ. 'ಸ್ಟ್ರೀಟ್ ಫೈಟರ್' ಚಿತ್ರವು 2026 ಅಕ್ಟೋಬರ್ 16 ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.