ಇವರು ಕನ್ನಡದ ಟಿಕ್ ಟಾಕ್ ಸ್ಟಾರ್ ಗಳು/ ಬಸು ಹಿರೇಮಠ ಅವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ/ ಕನ್ನಡದ ಮಟ್ಟಿಗೆ ಇವರು ಸದ್ದಿಲ್ಲದ ಹೀರೋಗಳು/ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ/
ಬೀಮ್ಸ್ ಗೋಕುಲ್
ಪೇಸ್ಬುಕ್ ವಾಟ್ಸಪ್ ನಂತರದ ಅತಿ ವೇಗವಾಗಿ ಚಲಿಸುತ್ತಿರುವ ಮತ್ತೊಂದು ಸಾಮಾಜಿಕ ಜಾಲತಾಣ ಟಿಕ್‌ಟಾಕ್ ಇದೀಗ ಟಿಕ್‌ಟಾಕ್ ಆ್ಯಪ್ ಉಪಯೋಗಿಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ ನಂ 1ಸ್ಥಾನದಲ್ಲಿದೆ ಅದರಲ್ಲೂ ಕರ್ನಾಟಕದಲ್ಲಿ ಟಿಕ್‌ಟಾಕ್ ಸ್ಟಾರ್ ಗಳಿಗೇನು ಕಡಿಮೆ ಇಲ್ಲ.
undefined
ಆ್ಯಪ್ ಓಪನ್ ಮಾಡಿದರೆ ಸಾಕು " ನಾ ಬಾಳ ಶ್ಯಾಣ್ಯಾ ಅದೀನಿ " ಎನ್ನುತ್ತಲೇ ತನಗೆ ತಾನು ಅವಮಾನ ಮಾಡಿಕೊಂಡು ಜನರಿಗೆ ಹಾಸ್ಯ ನೀಡುತ್ತಿರುವ ಬಸು ಹೀರೆಮಠ, ಹಿಂದೆ ಸೈಲೆಂಟ್ ಮ್ಯೂಜಿಕ್ ಹಾಕಿಕೊಂಡು ನಗಿಸುವ ಮಲ್ಯ ಪ್ರಾಂ ಯುಕೆ,, ಟಾಮ್ ಆ್ಯಂಡ್ ಜೇರಿ ತರ ಜಗಳ ಮಾಡುತ್ತಲೇ ಆತ್ಮೀಯ ಸ್ನೇಹಿತರ ತರ ಇರುವ ಮಲ್ಲು ಜಮಖಂಡಿ ಮತ್ತು ಶಂಕರ ಅಂಬಿಗೆರ, ಲೋಮೇಶ್ ಬ್ರದರ್ಸ್, ಶಿವಪುತ್ರ & ಟೀಂ, ಶಂಭುಲಿಂಗ ಚಿಕ್ಕೋಡಿ, ಶರಣು ಡಿಎಲ್, ಸಂದೀಪ ಹಾವೇರಿ, ಪಕ್ಕಿರೇಶ ಕಾಂಬ್ಳೆ ವಕ್ಕುಂದ ಮತ್ತು ಅಜ್ಜಿ ಇನ್ನೂ ಸಾಕಷ್ಟು ಜನರು ಹಾಸ್ಯದಿಂದಲೇ ಸಾಕಷ್ಟು ಮನಸ್ಸುಗಳನ್ನು ಕದ್ದಿದ್ದಾರೆ ಲಕ್ಷ ಗಟ್ಟಲೇ ಫಾಲೋವರ್ಸ್ ಮತ್ತು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಟಿಕ್ ಟಾಕ್ ಸ್ಟಾರ್ ಆದ್ರೆ ಲಕ್ಷ ಲಕ್ಷ ಸಿಗುತ್ತಾ? ಸಂಪಾದನೆ ಗುಟ್ಟು!
ಹಾಗೆ ಯಶು ಮಿಕ್ಕಿ, ಕವನಾ ಜಾಗೂರ ಅಂತವರು ತಮ್ಮ ನೃತ್ಯದ ಮೂಲಕ ಹೆಸರು ಗಳಿಸಿದ್ದಾರೆ ದಿನ ಟಿಕ್‌ಟಾಕ್ ನೋಡುವಾಗ ಈ ಎಲ್ಲರಿಗೂ ಲೈಕ್ ಕೊಡದೇ ಇದ್ದ ದಿನಗಳು ಇಲ್ಲವೇ ಅಲ್ಲ. ಇಷ್ಟೆಲ್ಲರ ಮಧ್ಯ ಸಮಾಜಕ್ಕೆ, ದೇಶಕ್ಕೆ, ಧರ್ಮಕ್ಕೆ, ಸಂಸ್ಕೃತಿಗೆ ಟಿಕ್‌ಟಾಕ್ ನಿಂದ ಏನು ಕೊಡುಗೆ ಎನ್ನುವುದನ್ನು ನೋಡಿದರೇ ಖಂಡಿತ ಶೂನ್ಯ ಉತ್ತರ ಕರ್ನಾಟಕ ಪ್ರವಾಹ ಆದಾಗ ಸ್ಮೈಲಿ ನವೀನ್, ರಘು ಗೌಡ ಬೆಂಗಳೂರಿನಿಂದ ಒಂದಿಷ್ಟು ಆಹಾರ ಬಟ್ಟೆ ಹಣ ಸಂಗ್ರಹಿಸಿ ಕೊಟ್ಟರು ಹೊರತಾಗಿ ಬೇರೆ ಯಾರು ಒಂದು ಪರಿಹಾರದ ವಿಷಯವಾಗಿ ಒಂದು ಮಾತು ಹೇಳಲಿಲ್ಲ, ಸಂಪೂರ್ಣ ಕರ್ನಾಟಕ ಕೇಂದ್ರಕ್ಕೆ ಪರಿಹಾರ ವಿಷಯವಾಗಿ ಧ್ವನಿ ಎತ್ತಿದಾಗ ಸಹ ಈ ಯಾವ ಟಿಕ್‌ಟಾಕ್ ಸ್ಟಾರ್ ಕೈ ಜೋಡಿಸಲಿಲ್ಲ ಹಾಗಂತ ಅವರ ಪ್ರತಿಭೆ ಅವಮಾನಿಸುತ್ತಿಲ್ಲ ಒಬ್ಬನ ಪ್ರತಿಭೆ ಮತ್ತೊಬ್ಬನಿಗೆ ಬರಲು ಕಷ್ಟಸಾಧ್ಯ ಉತ್ತರ ಕರ್ನಾಟಕ ಭಾಗದಲ್ಲಿಯೂ ಕಲೆ ಗೆ ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟ ಸಾಧನೆ ಈ ಟಿಕ್‌ಟಾಕ್ ಸ್ಟಾರ್ ಗಳಿಗೆ ಸಲ್ಲುತ್ತದೆ.
ಇಂತಹ ಎಲ್ಲ ಚರ್ಚೆಗಳ ನಡುವೆ ಒಬ್ಬ ಅತ್ಯುತ್ತಮ ವ್ಯಕ್ತಿ ಯ ಬಗ್ಗೆ ಹಾಗೂ ಟಿಕ್‌ಟಾಕ್ ನಿಂದ ಆಗಬೇಕಾದ ಕೆಲಸಗಳ ಬಗ್ಗೆ ಹೇಳಬೇಕಾಗಿದೆ. ಟಿಕ್‌ಟಾಕ್ ನೋಡುವಾಗ ನೂರಕ್ಕೆ ತೋಂಭತ್ತೊಂಬತ್ತರಷ್ಟು ನಿಮಗೆ ಸಿಗುವ ಎಲ್ಲ ವಿಡಿಯೋಗಳು ನಗಿಸುವಂತವೇ ಆದರೆ ಬಿಜಾಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಎಂಬುವರು ವಿಡಿಯೋಗಳಂತು ಅದ್ಭುತ ಈ ಮನುಷ್ಯ ಶ್ರೀಮಂತನೋ ಬಡವನೋ, ವಿದ್ಯಾವಂತನೋ ಅವಿದ್ಯಾವಂತನೋ, ಕೆಟ್ಟವನೋ ಒಳ್ಳೆಯವನೋ ಈತ ಯಾರಂತ ಗೊತ್ತಿಲ್ಲ ಈತನ ಬಗ್ಗೆ ಎಲ್ಲಿಯೂ ಪ್ರಚಾರವಿಲ್ಲ, ಆದರೆ ಈ ವ್ಯಕ್ತಿ ಮಾಡುವ ಪ್ರತಿಯೊಂದು ವಿಡಿಯೋಗಳು ಸಮಾಜಕ್ಕೆ ಮನುಷ್ಯನ ಬದುಕಿಗೆ ಪಾಠ ಹೇಳುತ್ತವೆ.
ಇತಿಹಾಸವಂತು ಅದ್ಭುತ ಈತ ನಿಜಕ್ಕೂ ಶಾಲೆಯ ಇತಿಹಾಸ ಬೋಧಿಸುವ ಮೇಷ್ಟ್ರು ಆಗಬೇಕಿತ್ತು ಈತ ಆಯ್ಕೆ ಮಾಡಿಕೊಳ್ಳು ಬ್ಯಾಗ್ರೌಂಡ್ ಮ್ಯುಸಿಕ್ ಸಹ ಜನರ ಮನಸ್ಸು ಬದಲಾಯಿಸುವ ಆಯುಧ ಇವರೊಮ್ಮೆ ಜಮಖಂಡಿ ಇತಿಹಾಸದ ಬಗ್ಗೆ ಮಾಡಿದ ವಿಡಿಯೋ ಭಾರಿ ವೈರಲ್ ಆಗಿತ್ತು ಸಮಾಜಕ್ಕೆ ಏನಾದರೂ ಒಂದು ಸಂದೇಶ ಕೊಡುವ ಲಿಂಗರಾಜ ಸಿಂಗಡಿ ಮತ್ತು ಅವರ ಸ್ನೇಹಿತರಿಗೆ ಸಿಗುವ ಸ್ಥಾನಮಾನ ಸಿಗುತ್ತಿಲ್ಲ ಎಂಬ ಬೇಸರವಂತೂ ಖಂಡಿತ ಇದೆ ಹಾಗಂತ ಉಳಿದವರು ಕೆಟ್ಟವರಲ್ಲ ಅವರು ಸಹ ಹಾಸ್ಯಲೋಕದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ.
ಇಷ್ಟೆಲ್ಲಾ ಫಾಲೋವರ್ಸ್ ಹೊಂದಿದ ನಂತರ ಒಂದಿಷ್ಟು ಸಮಾಜಕ್ಕೆ ಉಪಯೋಗ ಆಗುವಂತಹ ಕೆಲಸಗಳನ್ನು ಮಾಡಬೇಕು ಎಂಬುದು ನನ್ನ ಅಭಿಪ್ರಾಯ ಎಲ್ಲರೂ ಬುದ್ಧಿವಂತರಿದ್ದಾರೆ, ಪ್ರಬುದ್ಧರಿದ್ದರೆ ಬಸವನ ಬಾಗೇವಾಡಿಯಲ್ಲಿ ವಿವೇಕಾನಂದ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಜಾಗರೂಕತೆಯಿಂದಲೋ ಅಥವಾ ಗೊತ್ತಿದ್ದೋ ನಡೆದ ಯಡವಟ್ಟುಗಳ ಬಗ್ಗೆ ಜನರಿಗೆ ನೀವು ಯಾವ ಸಂದೇಶ ಕೊಟ್ಟಿರಿ ಅನ್ನುವ ಬಗ್ಗೆಯೂ ಯೋಚಿಸಬೇಕು.
ಪೇಸ್ಬುಕ್ ನಿಂದ ಸಾಕಷ್ಟು ಸಾಧನೆಗಳು, ಸಹಾಯಗಳು ಆಗಿವೇ ಆಗುತ್ತಲೇ ಇವೆ ಇದೆ ತರ ಟಿಕ್‌ಟಾಕ್ ನಿಂದ ಸಮಾಜಮುಖಿ ಕೆಲಸಗಳು ಆಗಲಿ, ಟಿಕ್‌ಟಾಕ್ ನಿಂದ ಸಾಕಷ್ಟು ಹೆಸರು ಮಾಡಿ ಉತ್ತಮ ಸ್ಥಾನಕ್ಕೆ ಹೋಗುತ್ತಿದ್ದೀರಿ ಕೆಲವರು ಈಗಾಗಲೇ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ಇದೆ ಕೆಲವರು ಸ್ವಂತ ಅಲ್ಬಮ್ ತಯಾರಿಸಿ ಸಾಧನೆ ಮಾಡಿದ್ದಾರೆ, ಇನ್ನೂ ಕೆಲವರು ಸಿರಿಯಲ್ ಗಳಲ್ಲಿ ನಟನೆ ಮಾಡುತ್ತಿದ್ದರೇ ಕಿರುಚಿತ್ರಗಳಿಂದ ಫೇಮಸ್ ಆಗಿದ್ದಾರೆ ದೇವರು ಎಲ್ಲರಿಗೂ ಅವಕಾಶ ಕೊಟ್ಟಿರುತ್ತಾನೆ ಅದನ್ನು ಸ್ವಂತಕ್ಜೆ ಉಪಯೋಗಿಸಿಕೊಳ್ಳದೇ ನಮ್ಮ ಸಾಧನೆಯಿಂದ ದೇಶ ಧರ್ಮ ಸಮಾಜ ಸಂಸ್ಕೃತಿಗೆ ಏನು ಕೊಟ್ಟೆ ಎಂಬುದಾಗಿರಬೇಕು.
ಎಂದಿಗೂ ನಾ ನಿಮ್ಮ ಅಭಿಮಾನಿ ಯಾರು ಸಹ ಬೇಸರ ಮಾಡಿಕೊಳ್ಳಬೇಡಿ ಬದಲಾವಣೆ ನಮ್ಮ ನಿಮ್ಮಿಂದ ಸಾಧ್ಯ.