
ಮುಂಬೈ(ಜೂ.20): ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಆತ್ಮಹತ್ಯೆ ಸಂಬಂಧ ವಿಚಾರಣೆ ತೀವ್ರಗೊಳಿಸಿರುವ ಮುಂಬೈ ಪೊಲೀಸರು, ನಟನ ಗೆಳತಿ ರಿಯಾ ಚಕ್ರವರ್ತಿಯಿಂದ ಮಹತ್ವದ ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!
‘ಸುಶಾಂತ್ ಹಾಗೂ ನಾನು ನವೆಂಬರ್‌ನಲ್ಲಿ ವಿವಾಹ ಮಾಡಿಕೊಳ್ಳಲು ಯೋಚಿಸಿದ್ದೆವು. ಇಬ್ಬರೂ ಜತೆಗೂಡಿ ಆಸ್ತಿಯಲ್ಲಿ ಹಣ ಹೂಡಿಕೆ ಸಂಬಂಧ ಚರ್ಚೆ ನಡೆಸಿದ್ದೆವು. ಸುಶಾಂತ್ ನಿವಾಸದಲ್ಲೇ ನಾವಿಬ್ಬರೂ ಒಟ್ಟಿಗೇ ಇದ್ದೆವು. ಜಗಳವಾಗಿದ್ದರಿಂದ ಅವರಿಂದ ದೂರವಾಗಿದ್ದೆ. ಆದಾಗ್ಯೂ ಇಬ್ಬರೂ ಪರಸ್ಪರ ಫೋನ್ ಹಾಗೂ ಸಂದೇಶಗಳ ಮೂಲಕ ಸಂಪರ್ಕದಲ್ಲಿದ್ದೆವು. ಪ್ರತಿ ರಾತ್ರಿ ನಿದ್ರೆಗೆ ಜಾರುವ ಮುನ್ನ ಸುಶಾಂತ್ ಕರೆ ಮಾಡುತ್ತಿದ್ದ ಕೊನೆಯ ವ್ಯಕ್ತಿ ನಾನಾಗಿದ್ದೆ’ ಎಂದು ರಿಯಾ 9 ತಾಸುಗಳ ವಿಚಾರಣೆ ವೇಳೆ ಪೊಲೀಸರೆದುರು ತಿಳಿಸಿದ್ದಾರೆ.
ಈ ನಡುವೆ ಸುಶಾಂತ್ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ವೃತ್ತಿ ಮತ್ಸರ ಮತ್ತು ಬಾಲಿವುಡ್‌ನ ಒತ್ತಡ ಕಾರಣ ಎಂಬ ಆರೋಪಗಳ ಬೆನ್ನಲ್ಲೇ, ಸುಶಾಂತ್ ಜೊತೆ ಮಾಡಿಕೊಂಡ ಒಪ್ಪಂದಗಳ ಕುರಿತಾಗಿ ಮಾಹಿತಿ ನೀಡುವಂತೆ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಯಶ್‌ರಾಜ್ ಫಿಲ್ಮ್$್ಸಗೆ ಪೊಲೀಸರು ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.