ಬಾಲಿವುಡ್‌ನಲ್ಲಿ ನಕಲಿ ಸೋಷಿಯಲ್‌ ಮೀಡಿಯಾ ದಂಧೆ: ಮಾನ ಹರಣಕ್ಕೂ ದುಡ್ಡು!

By Kannadaprabha News  |  First Published Jul 18, 2020, 9:42 AM IST

ಬಾಲಿವುಡ್‌ನಲ್ಲಿ ನಕಲಿ ಸೋಷಿಯಲ್‌ ಮೀಡಿಯಾ ದಂಧೆ| ಹಣಕೊಟ್ಟು ಹಿಂಬಾಲಕರನ್ನು ಖರೀದಿಸುತ್ತಿರುವ ಬಾಲಿವುಡ್‌ ಸೆಲೆಬ್ರಿಟಿಗಳು|  ಹರಣಕ್ಕೂ ದುಡ್ಡು


 

ಮುಂಬೈ: ಬಾಲಿವುಡ್‌ ನಟರು, ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು ಮತ್ತು ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಹಿಂಬಾಲಕರನ್ನು ಸೃಷ್ಟಿಸಿ ಹಣ ಮಾಡುತ್ತಿರುವ ಜಾಲವೊಂದನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರತಿ ವೀಕ್ಷಣೆ, ಲೈಕ್ಸ್‌, ಕಮೆಂಟ್‌ ಮತ್ತು ರೀ ಟ್ವೀಟ್‌ಗೆ ಇಂತಿಷ್ಟುಎಂದು ದರವನ್ನು ದಂಧೆಕೋರರು ನಿಗದಿ ಮಾಡಿದ್ದರು ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.

Tap to resize

Latest Videos

ಪೊಲೀಸರ ಪ್ರಕಾರ, ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು, ಉದ್ಯಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್‌ ಜನಪ್ರಿಯರಾಗಲು ಜಾಲತಾಣ ಮಾರುಕಟ್ಟೆಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ. ಕೆಲವು ಅಂತಾರಾಷ್ಟ್ರೀಯ ಕಂಪನಿಗಳು ಕೂಡ ಈ ಹಗರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.

ಲೈಕ್‌, ಕಮೆಂಟ್‌ಗೂ ಹಣ:

ಸಾಮಾಜಿಕ ಜಾಲತಾಣ ಮಾರುಕಟ್ಟೆಸಂಸ್ಥೆಗಳು ಫೇಸ್‌ಬುಕ್‌, ಟ್ವೀಟರ್‌, ಇನ್ಸ್‌ಸ್ಟಾಗ್ರಾಮ್‌ ಮತ್ತು ಯುಟ್ಯೂಬ್‌ನಲ್ಲಿ ಪ್ರತಿ ವೀಕ್ಷಣೆ ಮತ್ತು ಲೈಕ್‌ಗೆ 50 ಪೈಸೆ ಮತ್ತು ಪ್ರತಿ ಕಮೆಂಟ್‌ ಮತ್ತು ರೀ ಟ್ವೀಟ್‌ಗೆ 1 ರು. ಶುಲ್ಕ ವಿಧಿಸುತ್ತಿವೆ. ದೊಡ್ಡ ಪ್ರಮಾಣದಲ್ಲಿ ಲೈಕ್‌ ಮತ್ತು ಕಮೆಂಟ್‌ಗಳನ್ನು ಖರೀದಿಸಿ ಅವುಗಳಿಗೆ ಇಂತಿಷ್ಟುಎಂದು ದರವನ್ನೂ ನಿಗದಿ ಮಾಡುತ್ತಿವೆ.

ಅಲ್ಲದೇ ಯಾವುದಾದರೂ ಒಂದು ಪೋಸ್ಟ್‌ ವೈರಲ್‌ ಆಗಬೇಕಾದರೆ 1ರಿಂದ 3 ಲಕ್ಷದ ವರೆಗೂ ಹಣ ಪಡೆಯಲಾಗುತ್ತಿದೆ. ಫೋಟೋಗ್ರಾಫ್‌ ಇರುವ ಚಿತ್ರಗಳು ಮೀಮ್‌ಗಳಿಗೆ ವೈರಲ್‌ ಮಾಡಲು ಪ್ರತ್ಯೇಕ ದರವನ್ನು ನಿಗದಿಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಕೆಲವು ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾದವರ ಸಹಾಯವನ್ನೂ ಪಡೆಯಲಾಗುತ್ತದೆ. ಭಾರೀ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವವರಿಗೆ ಪೋಸ್ಟ್‌ವೊಂದನ್ನು ಷೇರ್‌ ಅಥವಾ ರೀ ಟ್ವೀಟ್‌ ಮಾಡಲು 1ರಿಂದ 2 ಲಕ್ಷ ರು.ವರೆಗೂ ಸಾಮಾಜಿಕ ಜಾಲತಾಣ ಮಾರುಕಟ್ಟೆಸಂಸ್ಥೆಗಳು ನೀಡುತ್ತಿವೆ. ಈ ಸಂಸ್ಥೆಗಳು ದೊಡ್ಡ ಪ್ರಮಾಣದ ವಾಟ್ಸಪ್‌ ಮತ್ತು ಇ-ಮೇಲ್‌ ಬಳಕೆದಾರರನ್ನು ಹೊಂದಿದ್ದು, ವ್ಯಕ್ತಿಯ ಚಾರಿತ್ರ್ಯ ಹರಣ, ವದಂತಿ ಅಥವಾ ನಿರ್ದಿಷ್ಟಸಂದೇಶಗಳನ್ನು ಹರಿಬಿಡುವ ಕೆಲಸವನ್ನೂ ಮಾಡುತ್ತಿವೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಕರನ್ನು ಹೆಚ್ಚಿಸಿಕೊಳ್ಳಲು ಪ್ರತಿ ಹಿಂಬಾಲಕರನ್ನು ಪಡೆಯ 5 ರು. ಶುಲ್ಕ ವಿಧಿಸಲಾಗುತ್ತದೆ. 50 ಲಕ್ಷ ಹಿಂಬಾಲಕರನ್ನು ಪಡೆಯಲು 2.5 ಲಕ್ಷ ರು.ವರೆಗೂ ಹಣವನ್ನು ನೀಡಬೇಕು.

ಮಾನ ಹರಣಕ್ಕೂ ದುಡ್ಡು

ನಕಲಿ ಹಿಂಬಾಲಕರ ಸೇವೆ ಒದಗಿಸುವ ಸಂಸ್ಥೆಗಳು ದೊಡ್ಡ ಪ್ರಮಾಣದ ವಾಟ್ಸಪ್‌ ಮತ್ತು ಇ-ಮೇಲ್‌ ಬಳಕೆದಾರರನ್ನು ಹೊಂದಿವೆ. ಈ ಮೂಲಕ ಯಾವುದೆ ವ್ಯಕ್ತಿ ನಿರ್ದಿಷ್ಟಹಣ ಕೊಟ್ಟರೆ ಇನ್ಯಾವುದೋ ವ್ಯಕ್ತಿಯ ಚಾರಿತ್ರ್ಯ ಹರಣ, ವದಂತಿ ಅಥವಾ ನಿರ್ದಿಷ್ಟಸಂದೇಶಗಳನ್ನು ಹರಿಬಿಡುವ ಕೆಲಸವನ್ನೂ ಮಾಡುತ್ತಿವೆ.

ದಂಧೆ ನಡೆಯುವುದು ಹೇಗೆ?

ಈ ಜಾಲದಲ್ಲಿ ಒಬ್ಬ ವ್ಯಕ್ತಿ 25-30 ನಕಲಿ ಖಾತೆಗಳನ್ನು ನಿರ್ವಹಿಸುತ್ತಾನೆ. ಇಂಥ ಹಲವಾರು ಜನ ನಿಗೂಢ ಸ್ಥಳದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಾರೆ. ಅವರು ಪ್ರಾಕ್ಸಿ ಸರ್ವರ್‌ಗಳನ್ನು ಬಳಕೆ ಮಾಡುವ ಕಾರಣ ಅವರು ಕಾರ್ಯನಿರ್ವಹಿಸುವ ಸ್ಥಳವನ್ನು ಪತ್ತೆಹಚ್ಚುವುದು ಕಷ್ಟಕರ.

ಇಲ್ಲಿದೆ ರೇಟ್‌ ಕಾರ್ಡ್‌

ಪ್ರತಿ ವೀಕ್ಷಣೆ, ಲೈಕ್‌ಗೆ 50 ಪೈಸೆ

ಕಮೆಂಟ್‌, ರೀಟ್ವೀಟ್‌ಗೆ 1 ರು.

ಪೋಸ್ಟ್‌ ವೈರಲ್‌ಗೆ 3 ಲಕ್ಷ ರು.

ಒಂದು ಹಿಂಬಾಲಕನಿಗೆ 5 ರು.

click me!