ಕಲಾವಿದರಿಗೆ ಗಾಯಕಿ ಗಿರಿಜಾ ನೆರವು!

By Kannadaprabha NewsFirst Published May 24, 2020, 10:55 AM IST
Highlights

ಇತರ ಕ್ಷೇತ್ರಗಳಂತೆ ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಲ್ಲಿ ಕೆಲಸ ಮಾಡುವವರೂ ತೊಂದರೆ| ಕಲಾವಿದರಿಗೆ ಗಾಯಕಿ ಗಿರಿಜಾ ನೆರವು| ಸ್ವರ-ಲಯ ಸಂಗೀತ ಶಾಲೆ ಹಾಗೂ ಆನೂರು ಅನಂತಶರ್ಮ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಆರ್ಥಿಕ ನೆರವು| 

ಬೆಂಗಳೂರು(ಮೇ.24): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ನೂರಾರು ಕಲಾವಿದರಿಗೆ ಹಿರಿಯ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್‌ ಅವರು ತಮ್ಮ ಸ್ವರ-ಲಯ ಸಂಗೀತ ಶಾಲೆ ಹಾಗೂ ಆನೂರು ಅನಂತಶರ್ಮ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದ್ದಾರೆ.

ಇತರ ಕ್ಷೇತ್ರಗಳಂತೆ ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಲ್ಲಿ ಕೆಲಸ ಮಾಡುವವರೂ ತೊಂದರೆಗೆ ಒಳಗಾಗಿದ್ದಾರೆ. ಮದುವೆಗಳು, ಧಾರ್ಮಿಕ ಉತ್ಸವಗಳು, ಸಾಮಾಜಿಕ ಮತ್ತು ಇತರ ಕಾರ್ಯಕ್ರಮಗಳ ನಿರ್ಬಂಧದಿಂದ ಹಾಗೂ ಧ್ವನಿಮುದ್ರಣ ಮತ್ತಿತರ ಚಟುವಟಿಕೆಗಳು ರದ್ದಾಗಿರುವುದರಿಂದ ರಾಜ್ಯದ ಬಹುತೇಕ ಸಂಗೀತ ಕಲಾವಿದರು ಕಳೆದ ಮೂರು ತಿಂಗಳಿಂದ ಯಾವುದೇ ಕಾರ್ಯಕ್ರಮ-ಸಂಭಾವನೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಕಷ್ಟದಲ್ಲಿರುವ ಮತ್ತು ಉದಯೋನ್ಮುಖ ಕಲಾವಿದರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಕಲಾ ಸಹೋದ್ಯೋಗಿಗಳು ಯುವ ಕಲಾವಿದರಿಗೆ ನೆರವು ನೀಡಬೇಕು ಎಂದು ಸ್ವರ-ಲಯ ಸಂಗೀತ ಶಾಲೆಯ ಮುಖ್ಯಸ್ಥೆ ಗಿರಿಜಾ ನಾರಾಯಣ್‌ ಮನವಿ ಮಾಡಿದ್ದಾರೆ.

ಈ ಕೋವಿಡ್‌ 19ರ ಸಂದರ್ಭದಲ್ಲಿ ಅಷ್ಟೇ ಅಲ್ಲದೆ, ನಂತರವೂ ಅವರ ಜೀವನ ಬಂಡಿಯನ್ನು ಬಳಿಗೆ ತರಲು ಹಿರಿಯ ಕಲಾವಿದರ ಸಹಾಯಹಸ್ತದ ಅವಶ್ಯಕತೆ ಇದೆ ಎಂದು ಆನೂರು ಅನಂತಶರ್ಮ ಸಂಗೀತ ಪ್ರತಿಷ್ಠಾನದ ಮುಖ್ಯಸ್ಥ ಆನೂರು ಅನಂತಕೃಷ್ಣ ಶರ್ಮ ಹೇಳಿದ್ದಾರೆ.

click me!