35 ವರ್ಷದ ಪ್ರಖ್ಯಾತ ಸೀರಿಯಲ್‌ ನಟಿ ಹಠಾತ್‌ ನಿಧನ, ಇಂಡಸ್ಟ್ರೀಗೆ ಶಾಕ್‌!

Published : Oct 30, 2023, 04:03 PM ISTUpdated : Oct 30, 2023, 04:11 PM IST
35 ವರ್ಷದ ಪ್ರಖ್ಯಾತ ಸೀರಿಯಲ್‌ ನಟಿ ಹಠಾತ್‌ ನಿಧನ, ಇಂಡಸ್ಟ್ರೀಗೆ ಶಾಕ್‌!

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ಪ್ರಖ್ಯಾತ ಸೀರಿಯಲ್‌ ನಟಿ ಸೋಮವಾರ ಹಠಾತ್‌ ಸಾಲು ಕಂಡಿದ್ದಾರೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.  

ತಿರುವನಂತಪುರಂ (ಅ.30): 'ಸ್ತ್ರೀ', 'ನಿಜಾಲಟ್ಟಂ' ಧಾರವಾಗಿ ಹಾಗೂ ಇನ್ನೂ ಅನೇಕ ಚಿತ್ರಗಳ ಮೂಲಕ ಹೆಸರುವಾಸಿಯಾಗಿದ್ದ ಮಲಯಾಳಂ ನಟಿ ರೆಂಜೂಶಾ ಮೆನನ್ ಅವರು ಸೋಮವಾರ ನಿಧನರಾದರು. ತಮ್ಮ 35ನೇ ವರ್ಷದಲ್ಲಿ ರೆಂಜೂಶಾ ಸಾವು ಕಂಡಿದ್ದಾರೆ.  ಅವರು ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ರೆಂಜೂಶಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ರೆಂಜೂಶಾ ಪತಿ, ತಾಯಿ ಮತ್ತು ತಂದೆಯನ್ನು ಅಗಲಿದ್ದಾರೆ. ಆಕೆಯ ಹಠಾತ್ ನಿಧನದ ಕುರಿತು ಹೆಚ್ಚಿನ ವಿವರಗಳು ಇನ್ನೂ ಬರಬೇಕಿದೆ. ಅಕ್ಟೋಬರ್ 30 ರಂದು ರೆಂಜೂಷಾ ಮೆನನ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೇರಳ ಪೊಲೀಸ್ ಅಧಿಕಾರಿಗಳು ಇದೀಗ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಕೆಯ ಸಾವು ಆಕೆಯ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಏಷ್ಯಾನೆಟ್‌ ನ್ಯೂಸ್‌ ವರದಿಯ ಪ್ರಕಾರ,  ಕಳೆದ ಕೆಲವು ತಿಂಗಳುಗಳಿಂದ ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ವರದಿಗಳ ಪ್ರಕಾರ ಅವರು ಮಲಯಾಳಂ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಟಿವಿ ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ. ಆಕೆಯ ಅಂತ್ಯಕ್ರಿಯೆಯ ಕುರಿತು ವಿವರಗಳನ್ನು ಕುಟುಂಬ ಇನ್ನಷ್ಟೇ ನೀಡಬೇಕಿದೆ.

ಟಿವಿ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಾಲಿಡುವ ಮೊದಲು ರೆಂಜೂಶಾ ಟಿವಿ ವಾಹನಿಗಳಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೆಲೆಬ್ರಿಟಿ ಟಿವಿ ಶೋನಲ್ಲಿ ಭಾಗವಹಿಸಿದ್ದು ಅವಳಿಗೆ ಮನ್ನಣೆ ತಂದುಕೊಟ್ಟಿತು. ಅವರು ಟಿವಿ ಧಾರಾವಾಹಿಗಳಾದ 'ಸ್ತ್ರೀ', 'ನಿಜಾಲಟ್ಟಂ', 'ಮಗಳುದೆ ಅಮ್ಮ' ಮತ್ತು 'ಬಾಲಾಮಣಿ' ಭಾಗವಾಗಿದ್ದರು. ನಟಿ 'ಸಿಟಿ ಆಫ್ ಗಾಡ್', 'ಬಾಂಬೆ ಮಾರ್ಚ್ 12', 'ಲಿಸಮ್ಮಾಯುಡೆ ವೀಡು', 'ಅದ್ಭುತ ದ್ವೀಪ', ಮತ್ತು 'ಕಾರ್ಯಸ್ಥಾನ' ಮುಂತಾದ ಚಿತ್ರಗಳ ಭಾಗವಾಗಿದ್ದರು.

ಮಗನ ಬರ್ತ್‌ಡೇ ಜೊತೆಯಾಗಿ ಆಚರಿಸಿದ ಸಾನಿಯಾ-ಶೋಯೆಬ್‌, 'ಡೈವೋರ್ಸ್‌ ಆಗಿರೋ ಬಗ್ಗೆ ಡೌಟೇ ಇಲ್ಲ' ಎಂದ ಫ್ಯಾನ್ಸ್‌!

ಶ್ರೀಕಾರ್ಯ ಹೆಸರಿನ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸ ಮಾಡುತ್ತಿದ್ದ ರೆಂಜೂಶಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ರೆಂಜೂಶಾ ಮತ್ತು ಅವರ ಪತಿ ಕಳೆದ ಕೆಲವು ವರ್ಷಗಳಿಂದ ಶ್ರೀಕಾರ್ಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

ಪಡ್ಡೆ ಹುಡುಗರ ನಿದ್ದೆ ಕದ್ದ ಮಾಳವಿಕಾ ಮೋಹನನ್‌ ಒದ್ದೆ ಸೀರೆಯ ಹಾಟ್‌ ಫೋಟೋಸ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!