
ಪಂಚ ಭಾಷಾ ನಟಿ ಪ್ರಿಯಾ ಮಣಿ ಅವರು ತಮ್ಮ 56ನೇ ಸಿನಿಮಾ ಮಾಡ್ತಿದ್ದಾರೆ. ಇದ್ರಲ್ಲೇನು ವಿಶೇಷ ಅಂತೀರಾ..? ಪ್ರಿಯಾ ಮಣಿಯವರ 56ನೇ ಸಿನಿಮಾದ ಹೆಸರೇ ವಿಶೇಷ. ಸಿನಿಮಾ ಲೋಕದಲ್ಲಿ 5 ಭಾಷೆಗಳಲ್ಲಿ ನಟಿಸುವ ಪ್ರಿಯಾ ಮಣಿ ಪಂಚ ಭಾಷಾ ತಾರೆ ಎಂದೇ ಪ್ರಸಿದ್ಧ. ನ್ಯಾಷನಲ್ ಫಿಲ್ಡ್ ಅವಾರ್ಡ್ ಕೂಡಾ ಗೆದ್ದಿರುವ ಪ್ರಿಯಾ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿದ್ದಾರೆ.
'ತಲೈವಿ' ಗೆಳತಿ ಶಶಿಕಲಾ ಪಾತ್ರಕ್ಕೆ ಕನ್ನಡದ ನಟಿ; ನೆಟ್ಟಿಗರ ಗರಂ!
ಇತ್ತೀಚೆಗಷ್ಟೇ ಅರ್ಥ ಶತಕ ಸಿನಿಮಾಗಳನ್ನು ಉಗಿಸಿದ ನಟಿ ಇದೀಗ ತಮ್ಮ 56ನೇ ಸಿನಿಮಾದ ತಯಾರಿಯಲ್ಲಿದ್ದಾರೆ. ತಮ್ಮ ಮುಂದಿನ ಕನ್ನಡ ಸಿನಿಮಾ ಸಿದ್ಧತೆಯಲ್ಲಿರುವ ಪ್ರಿಯಾ ಅವರ ಮೂವಿ ಟೈಟಲ್ ಇಂಟ್ರೆಸ್ಟಿಂಗ್ ಆಗಿರೋದು ಮಾತ್ರವಲ್ಲ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಆಕಷ್ಮಿಕವಾಗಿ ಆಗಿದ್ದರೂ ಪ್ರಿಯಾ ಮಣಿ ಅವರ 56ನೇ ಸಿನಿಮಾ ಹೆಸರು. 'Dr 56'. ಸಿನಿಮಾ ರೆಡಿಯಾಗಿದ್ದು, ರಿಲೀಸಿಂಗ್ ಡೇಟ್ ಮಾತ್ರ ನಿಗದಿಯಾಗುವುದು ಬಾಕಿ ಇದೆ ಎನ್ನುತ್ಥಾರೆ ಪ್ರಿಯಾ.
ಟ್ರೇಲರ್ ಹಾಗೂ ಟೀಸರ್ ನಿಂದ ಕುತೂಹಲ ಮೂಡಿಸಿತ್ತು 'ನನ್ನ ಪ್ರಕಾರ'!
ಸಿನಿಮಾ ಥಿಯೇಟರ್‌ಗಳು ಕ್ಲೋಸ್ ಆಗಿರುವುದರಿಂದ ಈ ವರ್ಷ ಕೊನೆಯ ಅವಧಿಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಹಾಗೆಯೇ ಬಾಲಿವುಡ್ ಸಿನಿಮಾ ಮೈದಾನ್ ತಯಾರಿಯಲ್ಲಿಯೂ ಬ್ಯುಸಿ ಇರುವ ಪ್ರಿಯಾ ಅಜಯ್ ದೇವಗನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.