
ಮುಂಬೈ[ಜೂ. 03] ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಬಿಗ್ ಬಿ ಜೋಡಿ ಯಾರಿಗೂ ಗೊತ್ತಿರದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಭಾನುವಾರ ತಡರಾತ್ರಿಯೇ ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಸಂಗತಿಯೊಂದನ್ನು ಶೇರ್ ಮಾಡಿದ್ದಾರೆ.
1973ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಮತ್ತು ಅವರ ಗಳೆಯರು ಲಂಡನ್ ನಲ್ಲಿ ರಜಾ ದಿನ ಕಳೆಯುವ ಪ್ಲ್ಯಾನ್ ಮಾಡಿದ್ದರು. ಆದರೆ ಮದುವೆಗೆ ಮುನ್ನ ಈ ರೀತಿ ತೆರಳಬೇಡಿ ಎಂದು ಅಮಿತಾಬ್ ಅಪ್ಪ ಹರಿವಂಶ್ ರೈ ಬಚ್ಚನ್ ಹೇಳಿದ್ದರು.
ಇಂಗ್ಲೆಂಡ್ ಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದಲ್ಲದೇ ಸ್ನೇಹಿತರೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತಂದೆಗೆ ಜಯಾ ಹೆಸರು ಗೊತ್ತಾದಾಗ ನಿಮಗೆ ಹೋಗಲೇ ಬೇಕು ಅಂಥ ಇದ್ದರೆ ಮದುವೆ ಮಾಡಿಕೊಂಡು ಹೋಗಿ ಅಂದರು. ಇದಾದ ಮರುದಿನವೇ ನಾವಿಬ್ಬರು ತರಾತುರಿಯಲ್ಲಿ ಮದುವೆಯಾಗಿ ಲಂಡನ್ ವಿಮಾನ ಏರಿದ್ದೇವು ಎಂದು ಬಿಗ್ ಬಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.