ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಒದಗಿಸಲು ಹೆಚ್ಚಿದ ಒತ್ತಾಯ| ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ ವೈರಲ್ ಆಯ್ತು ಹಳೆ ವಿಡಿಯೋ| ವೃದ್ಧ ಮಹಿಳೆಯ ತಲೆ ಪ್ರೀತಿಯಿಂದ ನೇವರಿಸುತ್ತಿರುವ ಸುಶಾಂತ್
ಮುಂಬೈ(ಜೂ.28): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಠಾತ್ ನಿಧನದಿಂದ ಬಾಲಿವುಡ್ ಕ್ಷೇತ್ರವೇ ಶಾಕ್‌ನಲ್ಲಿದೆ. ಪೊಲೀಸರು ಕೂಡಾ ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, ಅವರ ಆಪ್ತ ಸ್ನೇಹಿತರ ವಿಚಾರಣೆಯನ್ನೂ ನಡೆಸುತ್ತಿದ್ದಾರೆ.
ಸುಶಾಂತ್ ನಿಧನದ ಬಳಿಕ ಜನರು ಆಕ್ರೋಶ ಹೊರಹಾಕಿದ್ದು, ನಟನಿಗೆ ನ್ಯಾಯ ಒದಗಿಸಬೇಕೆಂಬ ಧ್ವನಿ ಎತ್ತಿದ್ದಾರೆ. ಹೀಗಿರುವಾಗ ಸುಶಾಂತ್ ಸಿಂಗ್ ಹಳೆ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಇದರಲ್ಲಿ ಸುಶಾಂತ್ ಸಿಂಗ್ ಹೃದಯವಂತಿಕೆ ಬಹಿರಂಗವಾಗಿದೆ. ಇಲ್ಲಿ ಸುಶಾಂತ್ ಸಿಂಗ್ ಓರ್ವ ವೃದ್ಧ ಮಹಿಳೆಯ ತಲೆ ನೇವರಿಸುವ ದೃಶ್ಯಗಳಿವೆ.
undefined
A post shared by Voompla (@voompla) on Jun 27, 2020 at 10:39pm PDT
ಸುಶಾಂತ್ ಸಿಂಗ್ ಈ ವಿಡಿಯೋವನ್ನು ವೂಂಪ್ಲಾದ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಲಾಗಿದೆ. ಇಲ್ಲಿ ನಟ ಸುಶಾಂತ್ ಸಿಂಗ್ ಆ ವೃದ್ಧ ಮಹಿಳೆಯ ಕೈ ಹಿಡಿದು ಮುತ್ತು ಕೊಟ್ಟು ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಪ್ರೀತಿಯಿಂದ ಆ ವೃದ್ಧ ಮಹಿಳೆಯ ತಲೆ ಪ್ರೀತಿಯಿಂದ ನೇವರಿಸುತ್ತಿರುವ ದೃಶ್ಯಗಲೂ ಇವೆ. ಈ ವಿಡಿಯೋ ಸದ್ಯ ಎಲ್ಲರ ಹೃದಯ ಕದ್ದಿದೆ.