'ನನ್ನ ಆ 2 ಸಿನಿಮಾಗಳನ್ನು ನೋಡು ಸಾಕು'.. ಸಹನಟಿಗೆ ಹೀಗ್ಯಾಕೆ ಹೇಳಿದ್ದು ಕೀರ್ತಿ ಸುರೇಶ್? ಹಿಂದಿರೋ ಅಸಲಿಯತ್ತೇನು?

Published : Oct 28, 2026, 09:13 PM IST
Keerthy Suresh Radhika Apte

ಸಾರಾಂಶ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಕೀರ್ತಿ ಸುರೇಶ್, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ತಮ್ಮ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಆ 2 ಸಿನಿಮಾಗಳನ್ನೇ ನೋಡುವಂತೆ ಹೇಳಿದ್ಯಾಕೆ?

Keerthy Suresh movie recommendation herself only for 2 movies: ರಾಧಿಕಾ ಆಪ್ಟೆಗೆ ಕೀರ್ತಿ ಸುರೇಶ್ ಕೊಟ್ಟ ಸಿನಿಮಾ ಸಲಹೆ ಏನು? ಈ ಎರಡು ಚಿತ್ರಗಳನ್ನು ನೋಡಲು ನಟಿ ಹೇಳಿದ್ದೇಕೆ? 

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಕೀರ್ತಿ ಸುರೇಶ್, ನಟನೆ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ತಮ್ಮ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಈಗ ಕೀರ್ತಿ ಸುರೇಶ್ ಅವರ ಸಿನಿಮಾಗಳ ಕುರಿತಾದ ಒಂದು ಕುತೂಹಲಕಾರಿ ಸಂಗತಿ ಸುದ್ದಿಯಾಗಿದೆ. ತಮ್ಮ ಸಿನಿಮಾಗಳನ್ನೇ ನೋಡಿರದ ನಟಿ ರಾಧಿಕಾ ಆಪ್ಟೆಗೆ, ಕೀರ್ತಿ ತಮ್ಮ ಅಭಿನಯದ ಎರಡು ಚಿತ್ರಗಳನ್ನು ಮಾತ್ರ ನೋಡುವಂತೆ ಸಲಹೆ ನೀಡಿದ್ದಾರೆ!

ಸದ್ಯ ಕೀರ್ತಿ ಸುರೇಶ್ ಮತ್ತು ರಾಧಿಕಾ ಆಪ್ಟೆ ‘ಅಕ್ಕ’ ಎಂಬ ಕ್ರೈಂ ಥ್ರಿಲ್ಲರ್ ವೆಬ್ ಸರಣಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸರಣಿಯ ಪ್ರಚಾರದ ಭಾಗವಾಗಿ ಇಬ್ಬರೂ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಮಾತುಕತೆಯ ವೇಳೆ ರಾಧಿಕಾ ಆಪ್ಟೆ ಅಭಿನಯದ ಚಿತ್ರಗಳ ಬಗ್ಗೆ ಕೀರ್ತಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಅಂಧಾಧುನ್’, ‘ಕಬಾಲಿ’, ‘ಸೇಕ್ರೆಡ್ ಗೇಮ್ಸ್’, ‘ಬದ್ಲಾಪುರ್’ ಸೇರಿದಂತೆ ರಾಧಿಕಾ ನಟಿಸಿರುವ ಹಲವು ಸಿನಿಮಾಗಳು ತಮಗೆ ಇಷ್ಟವೆಂದು ತಿಳಿಸಿದರು.

ಆದರೆ ಮಾತಿನ ನಡುವೆ ರಾಧಿಕಾ ಆಪ್ಟೆ, ಕೀರ್ತಿ ಸುರೇಶ್ ಅಭಿನಯದ ಯಾವುದೇ ಸಿನಿಮಾವನ್ನೂ ತಾವು ಇನ್ನೂ ನೋಡಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದರು. ಇದನ್ನು ಕೇಳಿದ ಕೀರ್ತಿ ಅಚ್ಚರಿಪಡುವುದರ ಜೊತೆಗೆ ತಮಾಷೆಯಾಗಿ ಪ್ರತಿಕ್ರಿಯಿಸಿದರು. ನಿಮಗೆ ಸಾಕಷ್ಟು ಸಮಯವಿದೆ, ಲಂಡನ್‌ಗೆ ಹೋದ ಬಳಿಕ ಆರಾಮವಾಗಿ ಸಿನಿಮಾಗಳನ್ನು ನೋಡಬಹುದು ಎಂದು ಹೇಳಿದರು.

“ನಿಮ್ಮ ಯಾವ ಸಿನಿಮಾ ನೋಡಬೇಕು?”

ನಂತರ ರಾಧಿಕಾ, “ನಿಮ್ಮ ಯಾವ ಸಿನಿಮಾ ನೋಡಬೇಕು?” ಎಂದು ಕೇಳಿದಾಗ ಕೀರ್ತಿ ಎರಡು ಚಿತ್ರಗಳ ಹೆಸರನ್ನು ಸೂಚಿಸಿದರು. ಮೊದಲನೆಯದು ಕೀರ್ತಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ಮಹಾನಟಿ’. ಎರಡನೆಯದು ಇತ್ತೀಚೆಗೆ ಬಿಡುಗಡೆಯಾದ ‘ಡೋರ್ತಿ’. ಈ ಎರಡೂ ಸಿನಿಮಾಗಳನ್ನು ನೋಡಿದರೆ ಸಾಕು ಎಂದು ಕೀರ್ತಿ ಹೇಳಿದ್ದು, ವಿಶೇಷವಾಗಿ ‘ಡೋರ್ತಿ’ ಸಿನಿಮಾ ರಾಧಿಕಾಗೆ ಇಷ್ಟವಾಗಬಹುದು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ರಾಧಿಕಾ ಆಪ್ಟೆ ಕೂಡ ಈ ಸಲಹೆಯನ್ನು ಸ್ವೀಕರಿಸಿದ್ದು, ಸಿನಿಮಾಗಳ ಹೆಸರುಗಳನ್ನು ಸಂದೇಶದ ಮೂಲಕ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಇಲ್ಲದಿದ್ದರೆ ಹೆಸರುಗಳನ್ನು ಮರೆತುಬಿಡುವ ಸಾಧ್ಯತೆ ಇದೆ ಎಂದು ನಗುತ್ತಲೇ ಹೇಳಿದ ಅವರು, ಖಂಡಿತವಾಗಿಯೂ ಚಿತ್ರಗಳನ್ನು ವೀಕ್ಷಿಸುವುದಾಗಿ ಭರವಸೆ ನೀಡಿದ್ದಾರೆ. ‘ಮಹಾನಟಿ’ಯಿಂದ ‘ಡೋರ್ತಿ’ವರೆಗೆ: ಕೀರ್ತಿಯ ವಿಭಿನ್ನ ಆಯ್ಕೆ ಕೀರ್ತಿ ಸುರೇಶ್ ಅವರ ವೃತ್ತಿಜೀವನದಲ್ಲಿ ‘ಮಹಾನಟಿ’ ಮಹತ್ವದ ಸ್ಥಾನ ಹೊಂದಿದೆ. ಖ್ಯಾತ ನಟಿ ಸಾವಿತ್ರಿ ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಕೀರ್ತಿ, ಸಾವಿತ್ರಿ ಪಾತ್ರಕ್ಕೆ ಜೀವ ತುಂಬಿದ್ದರು. ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ದೊರೆತಿದ್ದು, ಇದೇ ಚಿತ್ರದ ಮೂಲಕ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಈ ಚಿತ್ರದ ವಿಚಾರಗಳು ಕೆಲವೆಡೆ ಚರ್ಚೆ ಮತ್ತು ವಿರೋಧಕ್ಕೂ ಕಾರಣವಾಗಿದೆ!

ಇನ್ನೊಂದೆಡೆ, ‘ಡೋರ್ತಿ’ ವಿಭಿನ್ನ ಕಥಾವಸ್ತುವಿನ ಮೂಲಕ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ LGBTQ+ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗಿದೆ. ಚಿತ್ರದ ವಿಚಾರಗಳು ಕೆಲವೆಡೆ ಚರ್ಚೆ ಮತ್ತು ವಿರೋಧಕ್ಕೂ ಕಾರಣವಾಗಿದ್ದರೂ, ಹಲವು ಚಿತ್ರರಂಗದ ಗಣ್ಯರು ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ರಜನಿಕಾಂತ್, ಉಪೇಂದ್ರ, ಸೂರ್ಯ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಹಲವು ಕಲಾವಿದರು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವುದಾಗಿ ವರದಿಗಳು ತಿಳಿಸಿವೆ.

ಒಟ್ಟಿನಲ್ಲಿ, ರಾಧಿಕಾ ಆಪ್ಟೆಗೆ ಕೀರ್ತಿ ಸುರೇಶ್ ನೀಡಿದ ಈ ಸಿನಿಮಾ ಸಲಹೆ ಈಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಒಂದೆಡೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಅಭಿನಯ ಪ್ರಧಾನ ಸಿನಿಮಾ, ಮತ್ತೊಂದೆಡೆ ವಿಭಿನ್ನ ವಿಷಯವನ್ನು ಆಯ್ದುಕೊಂಡ ಚಿತ್ರ—ಈ ಎರಡು ಸಿನಿಮಾಗಳ ಮೂಲಕ ತಮ್ಮ ನಟನೆಯ ವಿಭಿನ್ನ ಮುಖಗಳನ್ನು ರಾಧಿಕಾಗೆ ಪರಿಚಯಿಸಲು ಕೀರ್ತಿ ಬಯಸಿದಂತಿದೆ. ಈಗ ರಾಧಿಕಾ ಈ ಚಿತ್ರಗಳನ್ನು ವೀಕ್ಷಿಸಿದ ಬಳಿಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆಯೇ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳಿಗೆ ಮೈಮಾಟ ಹಾಡು ಉತ್ತರವಲ್ಲ, ಸ್ಪಷ್ಟನೆ ನೀಡಿದ ರ‍್ಯಾಪರ್ ಚಂದನ್‌ ಶೆಟ್ಟಿ
‘ಬನ’ ಸಿನಿಮಾ ನೋಡಿದ ಬಳಿಕ ಜಯಪ್ರಕಾಶ್ ಶೆಟ್ಟಿ ಜೊತೆ ಫೋಟೋಗೆ ಮುಗಿಬಿದ್ದ ವಿದ್ಯಾರ್ಥಿಗಳು: ಕಾರಣವೇನು?