ರಿದಂ ಆಫ್ ಬಿಎಲ್‌ಆರ್: ವಿಶಿಷ್ಟ ಧ್ವನಿ ಗುರುತು ಅನಾವರಣಗೊಳಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

Published : Aug 04, 2025, 07:00 PM IST
Rhythm of BLR BrandMusiq

ಸಾರಾಂಶ

ಬೆಂಗಳೂರು ವಿಮಾನ ನಿಲ್ದಾಣವು ತನ್ನದೇ ಆದ ವಿಶಿಷ್ಟ ಸಂಗೀತ ಗುರುತನ್ನು 'ರಿದಂ ಆಫ್ ಬಿಎಲ್‌ಆರ್' ಅನ್ನು ಬಿಡುಗಡೆ ಮಾಡಿದೆ. ರಿಕ್ಕಿ ಕೇಜ್ ಸಂಯೋಜಿಸಿರುವ ಈ ಸಂಗೀತವು ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತನ್ನ ವಿಶಿಷ್ಟ ಧ್ವನಿ ಗುರುತಾದ "ರಿದಂ ಆಫ್ ಬಿಎಲ್‌ಆರ್"ನ್ನು ಅನಾವರಣಗೊಳಿಸಿದೆ. ಸೋನಿಕ್ ಬ್ರ್ಯಾಂಡಿಂಗ್ ತಜ್ಞ "ಬ್ರಾಂಡ್‌‌ ಮ್ಯೂಸಿಕ್" ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ವಿಶಿಷ್ಟ ಸಂಗೀತ ಅಭಿವ್ಯಕ್ತಿಯು "ಫೀಲ್ಸ್ ಲೈಕ್ ಬಿಎಲ್‌ಆರ್" ಅಭಿಯಾನದ ಕೇಂದ್ರ ಭಾಗವಾಗಿದೆ. ವಿಮಾನ ನಿಲ್ದಾಣವನ್ನು ಕೇವಲ ಪ್ರಯಾಣ ಕೇಂದ್ರವಷ್ಟೇ ಆಗಿರದೇ, ಪ್ರಯಾಣಿಕರ ನಾಡಿಮಿಡಿತದ ತಾಣವನ್ನಾಗಿ ಪರಿವರ್ತಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಸಂಗೀತವು ಪ್ರತಿ ವ್ಯಕ್ತಿಯಲ್ಲೂ ಭಾವನಾತ್ಮಕ ಬಾಂಧವ್ಯ ಬೆಸೆಯುವ ಶಕ್ತಿಯನ್ನು ಹೊಂದಿದೆ. “ರಿದಂ ಆಫ್ ಬಿಎಲ್‌ಆರ್‌”ನ್ನು ಆತ್ಮೀಯ ಅನುಭೂತಿ, ಪರಿಚಿತತೆ ಮತ್ತು ಭಾವನಾತ್ಮಕ ಅನುರಣನದ ಭಾವನೆಯನ್ನು ಹುಟ್ಟುಹಾಕುವಂತೆ ವಿನ್ಯಾಸಗೊಳಿಸಲಾಗಿದ್ದು, ಬೆಂಗಳೂರಿನ ಚೈತನ್ಯವನ್ನು ಸೆರೆಹಿಡಿಯುತ್ತದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಹಾಗೂ ಪದ್ಮಶ್ರೀ ಪುರಸ್ಕೃತ ರಿಕ್ಕಿ ಕೇಜ್ ಅವರು ಸಂಯೋಜಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಅಧಿಕೃತ ಗೀತೆಯ ಸುಮಧುರ ಚೌಕಟ್ಟಿನಲ್ಲಿ ಬೇರೂರಿರುವ “ರಿದಂ ಆಫ್ ಬಿಎಲ್‌ಆರ್”, ಸಂಪ್ರದಾಯ ಮತ್ತು ಜಾಗತಿಕತೆಯ ಸಮ್ಮಿಲನವಾಗಿದೆ.

ಕರ್ನಾಟಕ ಸಂಗೀತದಿಂದ ಮೃದಂಗ ಮತ್ತು ಮ್ಯಾಂಡೋಲಿನ್ ವಾದ್ಯಗಳು, ಪಾಶ್ಚಾತ್ಯ ಸಂಗೀತದ ಅಕೌಸ್ಟಿಕ್, ಎಲೆಕ್ಟ್ರಿಕ್ ಗಿಟಾರ್‌ ಮತ್ತು ಪಿಯಾನೋಗಳಂತಹ ವಾಧ್ಯಗಳು ಸಮೂಹ ಗಾಯನದೊಂದಿಗೆ ಸಮ್ಮಿಲನಗೊಂಡಿವೆ. ಈ ಮೂಲಕ “ರಿದಂ ಆಫ್‌ ಬಿಎಲ್‌ಆರ್‌” ಪರಂಪರೆ ಮತ್ತು ಆಧುನಿಕತೆಯ ಶ್ರೀಮಂತ ಜುಗಲ್‌ಬಂದಿಯಾಗಿ ಹೊರಹೊಮ್ಮಿದೆ. 

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಹರಿ ಮಾರಾರ್ ಅವರು ಮಾತನಾಡಿ, “ಪ್ರತಿ ಪ್ರಯಾಣದ ಪ್ರಾರಂಭ ಮತ್ತು ಅಂತ್ಯ ಭಾವನೆಗಳನ್ನು ಹೊಂದಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮಾಡುವ ಪ್ರಯಾಣವು ಪ್ರಯಾಣಿಕರ ಭಾವನೆ ಮತ್ತು ನೆನಪುಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. “ರಿದಂ ಆಫ್ ಬಿಎಲ್‌ಆರ್” ಈ ನಂಬಿಕೆಯ ವಿಸ್ತರಣೆಯಾಗಿದ್ದು, ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದೆ. ಪ್ರಯಾಣಿಕರಿಗೆ ಆತ್ಮೀಯ ಅನುಭವ ಒದಗಿಸುವುದಷ್ಟೇ ಅಲ್ಲದೇ, ವಿಮಾನ ನಿಲ್ದಾಣದಿಂದ ಹೊರಬಂದ ನಂತರವೂ ನಿಮ್ಮೊಂದಿಗೆ ಸಂಗೀತದ ಗುಂಗು ಜೊತೆಗಿದ್ದು, ನಮ್ಮ ಗುರುತಿನ ಭಾಗವಾಗಿದೆ” ಎಂದರು. 

ಬ್ರಾಂಡ್ ಮ್ಯೂಸಿಕ್‌ನ ಸಂಸ್ಥಾಪಕ, ಸಂಗೀತಗಾರ ರಾಜೀವ್ ರಾಜಾ ಅವರು ಮಾತನಾಡಿ, ವಿಮಾನ ನಿಲ್ದಾಣದ ವ್ಯಕ್ತಿತ್ವದ ಅಧ್ಯಯನ ನಡೆಸಿ, ಚಿಂತನಶೀಲವಾದ ಮೂರು ಹಂತದ ಸೃಜನಶೀಲ ಪ್ರಕ್ರಿಯೆಯ ಮೂಲಕ ಧ್ವನಿ ಗುರುತನ್ನು ರೂಪಿಸಲಾಗಿದೆ. ನವರಸಗಳಂತಹ ಭಾರತೀಯ ಅಂಶಗಳಿಂದ ಮಾರ್ಗದರ್ಶನ ಪಡೆದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಅನುಭವದ ಕೇಂದ್ರಬಿಂದುವಾಗಿರುವ ಶೃಂಗಾರ, ವೀರ ಮತ್ತು ಹಾಸ್ಯವನ್ನು ವ್ಯಕ್ತಪಡಿಸುವ ಧ್ವನಿಪಥವಾಗಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಇದರ ಫಲಿತಾಂಶವೇ 'ಮೊಗೊ' (Musical Logo)” ಎಂದು ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಾಲಿನಿ ರಾವ್ ಅವರು ಮಾತನಾಡಿ, "ವಿಮಾನ ನಿಲ್ದಾಣಗಳು ಭಾವನೆಗಳನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಸ್ಥಳಗಳಾಗಿವೆ. ಆತ್ಮೀಯರ ಪುನರ್ಮಿಲನದಂತಹ ಹಲವು ಕತೆಗಳು ವಿಮಾನ ನಿಲ್ದಾಣದಲ್ಲಿ ಪ್ರಾರಂಭಗೊಳ್ಳುತ್ತವೆ. ರಿದಂ ಆಫ್ ಬಿಎಲ್‌ಆರ್‌ನ ಮೂಲಕ ಜನರ ಭಾವನೆಗಳ ಎಳೆಯನ್ನು ಹೆಣೆಯಲು ನಾವು ಬಯಸಿದ್ದೇವೆ. ಇದು ಧ್ವನಿ ಗುರುತಷ್ಟೇ ಆಗಿರದೇ, ಪ್ರತಿ ಪ್ರಯಾಣಿಕರು ಎಲ್ಲಿಗೆ ಹೋದರೂ, ಬೆಂಗಳೂರಿನ ಬಾಂಧವ್ಯವನ್ನು ನೆನಪಿಸಲಿದೆ.

ಸಿಗ್ನೇಚರ್ ಸುಗಂಧ ಅಥವಾ ನೆಚ್ಚಿನ ರಾಗದಂತೆ, ಇದು ಪ್ರತಿ ಪ್ರಯಾಣಿಕರ ಬೆಂಗಳೂರು ವಿಮಾನ ನಿಲ್ದಾಣದ ನೆನಪಿನ ಭಾಗವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಧ್ವನಿ ಗುರುತನ್ನು ಬಿಡುಗಡೆ ಮಾಡುವ ಮೂಲಕ ಪ್ರಯಾಣವನ್ನು ಬಹು-ಸಂವೇದನಾ ಅನುಭವವಾಗಿ ಮರುಕಲ್ಪಿಸಿಕೊಳ್ಳುವುದನ್ನು ಮುಂದುವರೆಸಿದೆ” ಎಂದು ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!