ಪೋಲೆಂಡ್ ಸುಂದರಿಗೆ ಒಲಿದ ವಿಶ್ವ ಸುಂದರಿ ಪಟ್ಟ: ಭಾರತೀಯ ಮೂಲದ ಶ್ರೀ ಸೈನಿ ರನ್ನರ್ ಅಪ್

By Suvarna NewsFirst Published Mar 17, 2022, 11:30 AM IST
Highlights
  • 2021ರ ವಿಶ್ವ ಸುಂದರಿ ಸ್ಪರ್ಧೆ
  • ಭಾರತೀಯ ಮೂಲದ  ಶ್ರೀ ಸೈನಿ ರನ್ನರ್ ಅಪ್
  • ಪೋಲೆಂಡ್ ಸುಂದರಿಗೆ ಒಲಿದ ವಿಶ್ವ ಸುಂದರಿ ಪಟ್ಟ

2021ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ವಿಜೇತರಾಗಿದ್ದು ಇಂದು ಮಾರ್ಚ್ 17 ರಂದು ಅವರನ್ನು ವಿಶ್ವ ಸುಂದರಿ 2021 ಎಂದು ಘೋಷಿಸಲಾಗಿದೆ. 2019ರ ವಿಶ್ವ ಸುಂದರಿ  ಜಮೈಕಾದ ಟೋನಿ ಆನ್ ಸಿಂಗ್ ಅವರು ಪೋರ್ಟೊರಿಕೊದ (Puerto Rico) ಸ್ಯಾನ್ ಜುವಾನ್‌ನಲ್ಲಿರುವ ಕೋಕಾ-ಕೋಲಾ ಮ್ಯೂಸಿಕ್ ಹಾಲ್‌ನಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ (Karolina Bielawska) ಅವರಿಗೆ  ಕಿರೀಟಧಾರಣೆ ಮಾಡಿದರು.ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನಸಾ ವಾರಣಾಸಿ ಟಾಪ್ 13ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ಅಮೆರಿಕಾ ನಿವಾಸಿಯಾಗಿರುವ ಭಾರತೀಯ ಮೂಲದ ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಅಪ್ ಆದರು. ಸಿಟಿ ಡಿ ಐವೊಯಿರ್ (Cte d'Ivoire) ನ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಆದರು.

ಈ ಸುದ್ದಿಯನ್ನು ವಿಶ್ವ ಸುಂದರಿಯರ ಅಧಿಕೃತ ಟ್ವಿಟರ್ ಪುಟದಲ್ಲಿ ಪ್ರಕಟಿಸಲಾಗಿದೆ.'ನಮ್ಮ ಹೊಸ ವಿಶ್ವ ಸುಂದರಿ ಕಿರೀಟವನ್ನು ಪೋಲೆಂಡ್‌ನ ಕರೋಲಿನಾ ಬೈಲಾವ್ಸ್ಕಾ  ಧರಿಸಿದ್ದಾರೆ. ಮತ್ತು ಯುನೈಟೆಡ್ ಸ್ಟೇಟ್ಸ್‌ನ  ಶ್ರೀ ಸೈನಿ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ ಹಾಗೂ 2 ನೇ ರನ್ನರ್ ಅಪ್ ಆಗಿ ಸಿಟಿಡಿ ಐವೊಯಿರ್ ನ ಒಲಿವಿಯಾ ಯೇಸ್  ಆಯ್ಕೆಯಾಗಿದ್ದಾರೆ ಎಂದು ಮಿಸ್‌ ವರ್ಲ್ಡ್‌ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಟ್ವಿಟ್ ಮಾಡಿದೆ.

Our newly crowned Miss World Karolina Bielawska from Poland with 1st Runner Up Shree Saini from United States 2nd Runner up Olivia Yace from Côte d’Ivoire pic.twitter.com/FFskxtk0KO

— Miss World (@MissWorldLtd)

Latest Videos

 

ಶ್ರೀ ಸೈನಿ ಯಾರು?

ವಿಶ್ವ ಸುಂದರಿ ಸ್ಪರ್ಧೆಯ ಫಲಿತಾಂಶ ಹೊರ ಬರುತ್ತಿದ್ದಂತೆ  ಈಗ ರನ್ನರ್‌ ಅಪ್ ಆಗಿರುವ ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಶ್ರೀ ಸೈನಿ ಯಾರೂ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಇವರು ವಿಶ್ವ ಸುಂದರಿ 2021ರ ಸ್ಪರ್ಧೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾವನ್ನು ಪ್ರತಿನಿಧಿಸಿದರು. ಅವರು ವಿಶ್ವ ಸುಂದರಿ ಪ್ರಶಸ್ತಿಗಾಗಿ ಟಾಪ್ 6 ರಲ್ಲಿ ಬಂದು ನಂತರ ಮೊದಲ ರನ್ನರ್ ಅಪ್ ಆದರು. ಈ ಸಮಾರಂಭದಲ್ಲಿ ಶ್ರೀಸೈನಿ ಬ್ಯೂಟಿ ವಿತ್ ಎ ಪರ್ಪಸ್ ಸ್ಪರ್ಧೆಯನ್ನು ಸಹ ಗೆದ್ದರು. ಮಿಸ್ ವರ್ಲ್ಡ್ ಅಮೆರಿಕಾ 2021ರ ಕಿರೀಟವನ್ನು ಗೆದ್ದ ಮೊದಲ ಭಾರತೀಯ ಅಮೆರಿಕನ್ ಕೂಡ  ಇವರಾಗಿದ್ದಾರೆ. 

Miss Universe 2021: ಭಾರತದ ಹರ್ನಾಜ್ ಸಂಧು ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿಗಳು!

 ಶ್ರೀ ಸೈನಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ವಕೀಲರಾಗಿದ್ದಾರೆ. ಅವರು ತಮ್ಮ 12ನೇ  ವಯಸ್ಸಿನಿಂದಲೂ ಶಾಶ್ವತ ಪೇಸ್‌ಮೇಕರ್ (A pacemaker signals the heart to beat when the heartbeat is too slow or irregular) ಹೊಂದಿದ್ದರು. ಆಕೆಯ ಮುಖದ ಮೇಲೆ ಸುಟ್ಟಗಾಯಗಳನ್ನು ಉಂಟುಮಾಡಿದ ಒಂದು ದೊಡ್ಡ ಕಾರು ಅಪಘಾತವನ್ನೂ ಕೂಡ ಶ್ರೀಶೈನಿ ಜಯಿಸಿದ್ದರು. 26ರ ಹರೆಯದ ಇವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ತನ್ನ ತಂದೆಯ ಕಂಪನಿಯಲ್ಲಿ ಬಿಸಿನೆಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

Miss World 2021: ಭಾರತ ಸ್ಪರ್ಧಿಗೆ ಕೊರೋನಾ ಪಾಸಿಟಿವ್, ವಿಶ್ವ ಸುಂದರಿ ಸ್ಪರ್ಧೆ ಮುಂದೂಡಿಕೆ
ವಿಶ್ವ ಸುಂದರಿ ಸಂಸ್ಥೆಯ ಪ್ರಕಾರ, ಈ ಸೌಂದರ್ಯ ರಾಣಿಯ ಕನಸು ಅಮೆರಿಕಾದ ಶಿಕ್ಷಣ ಕಾರ್ಯದರ್ಶಿಯಾಗುವುದು. ಅಲ್ಲದೇ ಈಕೆ ಅತ್ಯಾಸಕ್ತಿಯ ಓದುಗ ಮತ್ತು ನೃತ್ಯಗಾರ್ತಿಯೂ ಆಗಿದ್ದಾರೆ. ಸಂಗೀತ ರಂಗಭೂಮಿಯ ಬಗ್ಗೆ ಒಲವು ಹೊಂದಿದ್ದಾರೆ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಗೆ ಹಾಜರಾಗುವುದನ್ನು ಆನಂದಿಸುತ್ತಾರೆ

ಇನ್ನು ಹೆಚ್ಚು ಹೇಳಬೇಕೆಂದರೆ ಶ್ರೀ ಸೈನಿ ಅವರ ಬ್ಯೂಟಿ ವಿತ್ ಎ ಪರ್ಪಸ್ (Beauty with a Purpose) ಪ್ರಾಜೆಕ್ಟ್ ಸಂಪೂರ್ಣ ಹೃದಯಾಘಾತಕ್ಕೆ ಒಳಗಾಗಿದ್ದ ಅವರ  ಸ್ವಂತ ಅನುಭವದಿಂದ ಬಂದಿದೆ. ಅವರ ಯೋಜನೆಯು 'ಹೃದಯ ಆರೋಗ್ಯ: ದೈಹಿಕ ಹೃದಯ ಮತ್ತು ಭಾವನಾತ್ಮಕ ಹೃದಯ ಎರಡನ್ನೂ ಗುಣಪಡಿಸುವುದು. ಅಲ್ಲದೇ ಶ್ರೀ ಅವರು ಕೋವಿಡ್ ಇಂಡಿಯಾ ರಿಲೀಫ್ ಫಂಡ್‌ಗಳಿಗಾಗಿ  5,60,000 ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಇನ್‌ಸ್ಟಾಗ್ರಾಮ್ ಪುಟ ಬಹಿರಂಗಪಡಿಸಿದೆ.
 

click me!