
ನಾನು ಪಾಕಿಸ್ತಾನಿ ಅಲ್ಲ.. ನನ್ನ ಬಗ್ಗೆ ಸುಳ್ಳು ಹರಡಬೇಡಿ.. ಪ್ರಭಾಸ್ ಚಿತ್ರದ ನಾಯಕಿ ಇಮಾನ್ವಿ ಇಸ್ಮಾಯಿಲ್ (Imanvi Ismail) ಪೋಸ್ಟ್ ಮಾಡಿದ್ದಾರೆ. ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ನಟ-ನಟಿಯರ ಮೇಲೆ ನಿಷೇಧ ಹೇರುವಂತೆ ಹೆಚ್ಚಿದ ಒತ್ತಡಕ್ಕೆ ಪ್ರತಿಯಾಗಿ ನಟಿ ಈ ಮಾತನ್ನು ಪೋಸ್ಟ್ ಮಾಡುವ ಮೂಲಕ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಪ್ರಭಾಸ್ ನಟನೆಯ ‘ಫೌಜಿ’ ಚಿತ್ರದ ನಾಯಕಿ ಪಾಕ್ ಮೂಲದವರಾಗಿದ್ದು, ಅವರ ಮೇಲೂ ನಿಷೇಧ ಹೇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ನಾಯಕಿ ಇಮಾನ್ವಿ ಇಸ್ಮಾಯಿಲ್, ಪಹಲ್ಗಾಮ್ ದಾಳಿಯನ್ನು ಖಂಡಿಸುವುದರ ಜೊತೆಗೆ ತನ್ನ ಪಾಕ್ ನಂಟಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೆ ಈ ಬಗ್ಗೆ ಅವರೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಡೀಟೆಲ್ಸ್..
ಕಾಶ್ಮೀರದ ಸೌಂದರ್ಯ ವರ್ಣಿಸಲು ಒಂದು ಜನ್ಮ ಸಾಲದು: ರಾಮ್ ಚರಣ್ ಹಳೆಯ ಮಾತು ಮತ್ತೆ ವೈರಲ್!
'ನಾನು ಪಾಕಿಸ್ತಾನಿಯಲ್ಲ.. ಇಂಡೋ ಅಮೇರಿಕನ್. ನಾನು ಹುಟ್ಟಿರುವುದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್ನಲ್ಲಿ.. ನನ್ನ ಪೋಷಕರು ಯುವಕರಾಗಿದ್ದಾಗಲೇ ಅಮೆರಿಕಕ್ಕೆ ವಲಸೆ ಬಂದಿದ್ದರು. ಹೀಗಾಗಿ ನಾನು ನಾನು ಪಾಕಿಸ್ತಾನಿಯಲ್ಲ.. ಇಂಡೋ ಅಮೇರಿಕನ್ ಆಗಿದ್ದೇನೆ. ನಾನು ಹುಟ್ಟಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್ನಲ್ಲಿ. ನನಗೂ ಪಾಕಿಸ್ತಾನಕ್ಕೂ ಯಾವುದೇ ನಂಟಿಲ್ಲ. ನಾನು ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡಬಲ್ಲವಳಾಗಿದ್ದೇನೆ..' ಎಂದಿದ್ದಾರೆ.
'ನಾನು ಕಲೆ, ನಟನೆ ಮತ್ತು ನೃತ್ಯದ ಅಭ್ಯಾಸ ಮಾಡಿದ್ದೇನೆ. ನನ್ನ ಜೀವನದ ಮೇಲೆ ಭಾರತೀಯ ಸಿನಿಮಾದ ಪ್ರಭಾವ ಸಾಕಷ್ಟಿದೆ. ಈಗ ಅದೇ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ಇದೆ. ನನ್ನ ಬಗ್ಗೆ ಹರಡಿರುವ ಸುಳ್ಳು ಮಾಹಿತಿಗಳನ್ನು ನಂಬಬೇಡಿ ಅಂತ ನಟಿ ಇಮಾನ್ವಿ ಮನವಿ ಮಾಡಿದ್ದಾರೆ. ಅವರ ಈ ಮನವಿಯನ್ನು ಚಿತ್ರತಂಡ ಪುಸ್ಕರಿಸುತ್ತಾ ಅಥವಾ ತಿರಸ್ಕರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟಕ್ಕೂ ಅವರು ಪಾಕಿಸ್ತಾನದವರೋ ಅಥವಾ ಅಮೆರಿಕದ ಪ್ರಜೆಯೋ ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಚಿತ್ರತಂಡದ್ದು. ಏನಾಗುತ್ತೆ ಅಂತ ಕಾದು ನೋಡಬೇಕಿದೆ.
ನಗೆಪಾಟಲಿಗೆ ಈಡಾದ ಪಾಕಿಸ್ತಾನಿ ತಾರೆಯರು: 'ಭಯೋತ್ಪಾದನೆಗೆ ಧರ್ಮವಿಲ್ಲ, ರಾಷ್ಟ್ರೀಯತೆಯಿಲ್ಲ'..!
ಸದ್ಯಕ್ಕೆ, ಪಾಕಿಸ್ತಾನದ ಕೈವಾಡದಲ್ಲಿ ನಡೆದಿರುವ ಈ ಉಗ್ರರ ದಾಳಿಯನ್ನು ಇಡೀ ಜಗತ್ತೇ ಖಂಡಿಸತೊಡಗಿದೆ. ಇಷ್ಟು ದಿನ ಭಯೋತ್ಪಾದನೆಗೆ ಧರ್ಮವಿಲ್ಲ, ರಾಷ್ಟ್ರೀಯತೆ ಇಲ್ಲ ಎಂದು ಬಾಯಿಬಡಿದುಕೊಳ್ಳುತ್ತಿದ್ದ ಭಾರತದ ಕೆಲವು ಜನರು ಈಗ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ. ಕಾರಣ, ಮೊನ್ನೆ ನಡೆದ ದಾಳಿ ಧರ್ಮಾಧಾರಿತ ಆಗಿದ ಎಂಬುದು ಇಡೀ ಜಗತ್ತಿಗೇ ಗೊತ್ತು. ಹೀಗಿರುವಾಗ ಒಂದು ನಿರ್ಧಿಷ್ಟ ರಾಷ್ಟ್ರ ಹಾಗೂ ನಿರ್ಧಿಷ್ಟ ಧರ್ಮಕ್ಕೆ ಜಾಗತಿಕವಾಗಿ ಮುಜುಗರದ ಸನ್ನಿವೇಶ ಸೃಷ್ಟಿಯಾಗಿದೆ. 'ಯಾರೇನೇ ಹೇಳಿದರು ಸತ್ಯ ಒಂದು ದಿನ ಹೊರಗೆ ಬರುತ್ತದೆ..' ಎಂದು ಇಡೀ ಭಾರತ ಮಾತನಾಡತೊಡಗಿದೆ.
ಅಂದಹಾಗೆ, ಫೌಜಿ ಚಿತ್ರವನ್ನು ಹನು ರಾಘವಪುಡಿ ನಿರ್ದೇಶನಮಾಡುತ್ತಿದ್ದು, ಈ ಚಿತ್ರದಲ್ಲಿ ಪ್ರಭಾಸ್, ಇಮಾನ್ವಿ ಇಸ್ಲಾಮಿ, ಜಯಪ್ರದಾ, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮುಂತಾದವರು ನಟಿಸುತ್ತಿದ್ದಾರೆ, ಈ ಚಿತ್ರವು ಬಿಗ್ ಬಜೆಟ್ ಹೊಂದಿದ್ದು, ಪ್ಯಾನ್ ಇಂಡಿಯಾ ಚಿತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.