ಹೋಳಿ ಫ್ರಾಂಕ್‌: ಬಕೆಟ್ ಹಿಡಿದು ಬಂದ ಹುಡುಗರು, ಎದ್ನೋಬಿದ್ನೋ ಎಂದು ಓಡಿದ ಹುಡುಗಿರು

Suvarna News   | Asianet News
Published : Mar 19, 2022, 11:17 AM IST
ಹೋಳಿ ಫ್ರಾಂಕ್‌: ಬಕೆಟ್ ಹಿಡಿದು ಬಂದ ಹುಡುಗರು, ಎದ್ನೋಬಿದ್ನೋ ಎಂದು ಓಡಿದ ಹುಡುಗಿರು

ಸಾರಾಂಶ

ಹೋಳಿಯ ರಂಗು ಹೆಚ್ಚಿಸಿದ ಯುವಕರ ತುಂಟಾಟ ಖಾಲಿ ಬಕೆಟ್‌ನೊಂದಿಗೆ ಬಣ್ಣದ ಬೆದರಿಕೆ ಬಕೆಟ್ ನೋಡಿ ಓಡಿ ದಿಕ್ಕುಪಾಲಾಗಿ ಓಡಿದ ಯುವತಿಯರು

ಹೋಳಿಯನ್ನು ಸಂಭ್ರಮ ಸಡಗರದಿಂದ ದೇಶಾದ್ಯಂತ ಆಚರಿಸಲಾಯಿತು. ದೇಶದ ವಿವಿಧೆಡೆ ವಿಭಿನ್ನ ಹೋಳಿ ಆಚರಣೆಗಳಿದ್ದು, ಸ್ನೇಹಿತರು, ಬಂಧುಗಳು ಹಾಗೂ ಆತ್ಮೀಯರೊಂದಿಗೆ ಸೇರಿ ಜನ ಹೋಳಿ ಹಬ್ಬ ಆಚರಣೆ ಮಾಡಿದರು.ಹೋಳಿ ಹಬ್ಬದ ಆಚರಣೆ ವೇಳೆ ಅನೇಕರು ಹಲವು ತುಂಟಾಟ ತರಲೆಗಳನ್ನು ಮಾಡುತ್ತಾರೆ. ಈ ತರಲೆಗಳು ಖುಷಿ ನೀಡುವುದರ ಜೊತೆಗೆ ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. 

ಹೀಗೆ ಯುವಕರ ಗುಂಪೊಂದು ವಿಭಿನ್ನವಾಗಿ ಹೋಳಿ ಆಚರಣೆ ಮಾಡಲು ನಿರ್ಧರಿಸಿ ರಸ್ತೆಗಿಳಿದಿದ್ದು, ಯುವಕರ ಈ ಹೋಳಿ ಆಚರಣೆಯ ವಿಡಿಯೋ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿರುವುದು ಸುಳ್ಳಲ್ಲ. ಯಾರಿಗೂ ಹಾನಿಯಾಗದಂತೆ ಖಾಲಿ ಬಕೆಟ್‌ಗಳನ್ನು ಹಿಡಿದು ಯುವಕರು ರಸ್ತೆಗಿಳಿದಿದ್ದರೆ ಆದರೆ ಇದರಲ್ಲಿ ಬಣ್ಣದ ನೀರಿದೆ ಎಂದು ಭಾವಿಸಿದ ದಾರಿಯಲ್ಲಿ ಹೋಗುವವರು ಇದನ್ನು ನೋಡುತ್ತಿದ್ದಂತೆ ಬಣ್ಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎದ್ನೋ ಬಿದ್ನೋ ಎಂಬುದನ್ನು ನೋಡದೆ ಓಡಲು ಶುರು ಮಾಡುತ್ತಾರೆ. ಅವರು ಓಡುತ್ತಿದ್ದಂತೆ ಸುಮ್ಮನಿರದ ಯುವಕರ ಗುಂಪು ಬಣ್ಣದ ನೀರನ್ನು ತುಂಬಿಕೊಂಡ ಬಕೆಟ್‌ ತಮ್ಮ ಕೈಯಲ್ಲಿದೆ ಎಂದು ನೋಡುಗರಿಗೆ ಎನಿಸುವಂತೆ ಖಾಲಿ ಬಕೆಟ್‌ನ್ನು ಹಿಡಿದು ಓಡಲು ಶುರು ಮಾಡುತ್ತಾರೆ. 

ಏನಿದು ವಿಚಿತ್ರ... ಇಲ್ಲಿ ನಡೆಯುತ್ತೆ ಚಪ್ಪಲಿ ಏಟಿನ ಹೋಳಿ

ಯುವಕರ ಈ ತರಲೆ ಎಲ್ಲರಲ್ಲಿ ನಗು ಉಕ್ಕಿಸುವಂತೆ ಮಾಡಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮೂವರು ಚಡ್ಡಿ ಹಾಕಿದ ಯುವಕರು ಕೈಯಲ್ಲಿ ಬಕೆಟ್ ಹಿಡಿದಿರುತ್ತಾರೆ. ಇದೇ ವೇಳೆ ರಸ್ತೆಯಲ್ಲಿ ಇಬ್ಬರು ಮೂವರು ಅಥವಾ ಗುಂಪು ಗುಂಪಾಗಿ ಯುವತಿಯರು ಮಹಿಳೆಯರು ನಡೆದು ಬರುತ್ತಿರುತ್ತಾರೆ. ಈ ವೇಳೆ ಅವರನ್ನು ಅಡ್ಡಗಟ್ಟುವ ಒಬ್ಬ ಅವರನ್ನು ಮಾತನಾಡಿಸಲು ಶುರು ಮಾಡುತ್ತಾನೆ. ಈ ವೇಳೆ ಇನ್ನಿಬ್ಬರು ಬಕೆಟ್‌ನೊಂದಿಗೆ ಅಲ್ಲಿಗೆ ಎಂಟ್ರಿಯಾಗುತ್ತಾರೆ. ಆದರೆ ಬಕೆಟ್ ನೋಡುತ್ತಿದ್ದಂತೆ ಯುವತಿಯರು ದಿಕ್ಕುಪಾಲಾಗಿ ಓಡಲು ಶುರು ಮಾಡುತ್ತಾರೆ. ಒಟ್ಟಿನಲ್ಲಿ ಈ ವಿಡಿಯೋ ಬಣ್ಣಗಳ ಹಬ್ಬ ಹೋಳಿಗೆ ಮತ್ತಷ್ಟು ರಂಗು ನೀಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಇತ್ತ ಬಿಹಾರದ ವಾಟರ್‌ ಪಾರ್ಕೊಂದರಲ್ಲಿ ಜನ ವಿಚಿತ್ರವಾಗಿ ಹೋಳಿ ಆಚರಿಸಿದ್ದಾರೆ. ಪರಸ್ಪರ ಒಬ್ಬರ ಮೇಲೊಬ್ಬರು ಚಪ್ಪಲಿ ಎಸೆಯುವ ಮೂಲಕ ಜನ ಹೋಳಿ ಆಚರಣೆ ಮಾಡಿದ್ದು ವಿಚಿತ್ರ ಎನಿಸಿತ್ತು. ಬಣ್ಣಗಳ ಹಬ್ಬವಾದ ಹೋಳಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ವಿಧ ವಿಧದ ಸಿಹಿತಿಂಡಿಗಳನ್ನು ಸವಿಯುತ್ತಾ, ಪಾನೀಯಗಳನ್ನು ಸೇವಿಸುತ್ತಾ 'ಹೋಳಿ ಹೈ' ಎಂದು ಹಾಡುತ್ತಾ ಬಣ್ಣಗಳನ್ನು ಎಲ್ಲರ ಮೇಲೆ ಎರಚುತ್ತಾ ಹೋಳಿ ಆಚರಿಸುತ್ತಾರೆ. ಮಕ್ಕಳು ವೃದ್ಧರಾದಿಯಾಗಿ ವಾಟರ್ ಗನ್‌ಗಳಿಂದ ಪರಸ್ಪರ ದಾಳಿ ಮಾಡುತ್ತಾ ನೀರಿನ ಬಲೂನ್‌ಗಳನ್ನು ಎಸೆಯುವ ಮೂಲಕ ಹಬ್ಬವನ್ನು ಆಚರಿಸುವುದನ್ನು ನೀವು ನೋಡಿರಬಹುದು. ಆದರೆ  ಒಬ್ಬರ ಮೇಲೊಬ್ಬರು ಚಪ್ಪಲಿ ಎಸೆದುಕೊಳ್ಳುವುದನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ.

ತಾವಿದ್ದಲ್ಲೇ ಸಹೋದ್ಯೋಗಿಗಳೊಂದಿಗೆ ಸಂಭ್ರಮದ ಹೋಳಿ ಆಚರಿಸಿದ ಯೋಧರು
 

ಆದರೆ ಬಿಹಾರದ (Bihar) ಪಾಟ್ನಾದಲ್ಲಿರುವ (Patna) ವಾಟರ್ ಪಾರ್ಕ್‌ನಲ್ಲಿ (water park) ಹೋಳಿ ಆಡಲು ಜನರು ಪರಸ್ಪರ ಚಪ್ಪಲಿ ಎಸೆಯಲು ಪ್ರಾರಂಭಿಸಿದ್ದರು. ಛೋಟಿ ಹೋಳಿಯಲ್ಲಿ ಈ ವಿಚಿತ್ರ ಆಚರಣೆ ನಡೆದಿದೆ. ಚಪ್ಪಲಿ ಎಸೆಯುತ್ತಾ ಹೋಳಿ ಆಚರಿಸುತ್ತಿರುವ ದೃಶ್ಯದ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗಿದೆ. ವೀಡಿಯೊದಲ್ಲಿ ಜನ ಪಾಟ್ನಾದ ವಾಟರ್ ಪಾರ್ಕ್‌ಗೆ ಭೇಟಿ ನೀಡುತ್ತಿರುವುದನ್ನು ಮತ್ತು ವಾಟರ್ ಸ್ಲೈಡ್‌ಗಳ ಬಳಿ ಬಣ್ಣದ ನೀರಿನ ಬೃಹತ್ ಕೊಳದಲ್ಲಿ ಚಪ್ಪಲಿ ಎಸೆಯುತ್ತಾ ಆಡುತ್ತಿರುವುದನ್ನು ತೋರಿಸಿದೆ. ಒಬ್ಬರಿಗೊಬ್ಬರು ಬಣ್ಣ ಹಚ್ಚಿದ ನಂತರ ಜನರು ಪರಸ್ಪರ ಚಪ್ಪಲಿ ಎಸೆಯಲು ಆರಂಭಿಸಿದರು.

 

ಚಪ್ಪಲ್ ಮಾರ್ ಹೋಳಿ (ಚಪ್ಪಲಿ ಏಟಿನ ಹೋಳಿ) ಆಡುವಾಗ ಜನರು ಒಬ್ಬರನ್ನೊಬ್ಬರು ಗುರಿಯಾಗಿಸಿಕೊಂಡು ಚಪ್ಪಲಿಗಳನ್ನು ಎಸೆಯುತ್ತಿದ್ದರು. ಇದರಿಂದ ಚಪ್ಪಲಿಗಳು ಎಲ್ಲೆಂದರಲ್ಲಿ ಹಾರಾಡುತ್ತಿದ್ದವು. ಹತ್ತಾರು ಚಪ್ಪಲಿಗಳು ಗಾಳಿಯಲ್ಲಿ ಎತ್ತರದಲ್ಲಿ ಮತ್ತು ನೀರಿನಲ್ಲಿ ತೇಲುತ್ತಿರುವುದನ್ನು ಕಾಣಬಹುದು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!