ಬುಕ್ ಮೈ ಶೋ ಹೆಸರಿನಲ್ಲಿ ಇದೆಂಥಾ ವಂಚನೆ ಜಾಲ!

By Web DeskFirst Published Mar 19, 2019, 6:04 PM IST
Highlights

ನೀವು ಸಿನಿಮಾ ನೋಡಲು ಏನು ಮಾಡುತ್ತೀರಿ.. ಬದಲಾದ ಕಾಲದಲ್ಲಿ ಬುಕ್ ಮೈ ಶೋ ಗೆ ತೆರಳಿ ಟಿಕೆಟ್ ಬುಕ್ ಮಾಡುವ ವಾಡಿಕೆ ಬೆಳೆಸಿಕೊಂಡಿದ್ದೀರಿ.  ಅಲ್ಲಿಯ ಕಮೆಂಟ್ ಗಳೆ ನಿಮಗೆ ಆಧಾರ. ಆದರೆ ಇದೆಲ್ಲದರ ಹಿಂದೆ ಕರಾಳ  ದಂಧೆಯೊಂದು ಸದ್ದಿಲ್ಲದೆ ನಡೆಯುತ್ತಿದ್ದು ಬಯಲಿಗೆ ಬಂದಿದೆ.

ಬೆಂಗಳೂರು[ಮಾ. 19]  ಸ್ಯಾಂಡಲ್ ವುಡ್ ಗೆ ಪೈರಸಿ ಕಾಟದ ಜತೆಗೆ ಇದೊಂದು ಹೊಸ ಸಮಸ್ಯೆ ಎದುರಾಗಿದೆ. ಇದು ಉದ್ದೇಶ ಪೂರ್ವಕವಾಗಿ ಹಣ ಮಾಡಲು ಹುಟ್ಟಿಕೊಂಡ ದಂಧೆಯ ಕರಾಳ ಮುಖ.

ಬುಕ್ ಮೈ ಶೋ ಹೆಸರೇಳಿಕೊಂಡು ರೇಟಿಂಗ್ ವಿಚಾರವಾಗಿ ಸಿನಿಮಾ ನಿರ್ಮಾಪಕರಿಗೆ ದೋಖಾ ನಡೆಸುತ್ತಿರುವ ವಿಚಾರ ಬಹಿರಂಗವಾಗಿದೆ. ಕಳೆದವಾರ ಬಿಡುಗಡೆ ಆದ ಒಂದ್ ಕಥೆ ಹೇಳ್ಲಾ . ರಾಜಣ್ಣನ‌ಮಗ ಹಾಗೂ ಫೇಸ್ ಟು ಫೇಸ್ ಸಿನಿಮಾಗಳಿಗೆ ಸಮಸ್ಯೆ ಕಾಣಿಸಿಕೊಂಡಿದೆ.

ಹೇಗೆ ವಂಚನೆ? ಉತ್ತರ ಸಿನಿಮಾವಾಗಿದ್ದರೂ  ಬಿಡುಗಡೆಯಾದ ಚಿತ್ರದ ನಿರ್ಮಾಪಕರಿಗೆ ಕರೆ ಮಾಡುವ ತಂಡ ನಿಮ್ಮ ಚಿತ್ರದ ರೇಟಿಂಗ್ ಜಾಸ್ತಿ ಮಾಡಿಕೊಡುತ್ತೇವೆ. ಇಂತಿಷ್ಟು ಹಣ ನೀಡಿ ಎಂದು ಡೀಲ್ ಗೆ ಇಳಿಯುತ್ತಾರೆ.  ನಂಬಿ ದುಡ್ಡು ಹಾಕಿದರೆ ಯಾವ ಬದಲಾವಣೆ ಆಗುವುದಿಲ್ಲ. ಆದರೆ ನಿರ್ಮಾಪಕ ಹಣ ಕಳೆದುಕೊಳ್ಳಬೇಕಾಗುತ್ತದೆ.

ರಾಗಿಣಿ ಬಾಯ್ ಫ್ರೆಂಡ್ಸ್ ಕಿತ್ತಾಡಿಕೊಂಡ ಕತೆ

ದೂರು ದಾಖಲು: ಈ ರೀತಿಯ ವಂಚನೆ ನಡೆಯುತ್ತಿರುವ ಬಗ್ಗೆ  ನಿರ್ದೇಶಕ ಗಿರೀಶ್  ಕರ್ನಾಟಕ ಚಲನ ಚಿತ್ರ ಮಂಡಳಿಗೆ ದೂರು ನೀಡಿದ್ದಾರೆ. ಪೊಲೀಸ್ ಕಮೀಷನರ್ ಗೆ ಈ ಸಂಬಂಧ ದೂರು ನೀಡವುದಾಗಿ ವಾಣಿಜ್ಯ ಮಂಡಳಿ ಕಾರ್ಯದರ್ಶಿ  ಭಾಮಾ ಹರೀಶ್ ತಿಳಿಸಿದ್ದಾರೆ.

"

click me!