Published : Jun 23, 2025, 07:19 AM ISTUpdated : Jun 23, 2025, 09:14 PM IST

Entertainment News Live: ಇಂಗ್ಲಿಷ್​ಗೇ ಹುಟ್ಟಿದೋಳು ಅಂದ್ರು, ಇನ್​ಸ್ಟಾದಲ್ಲಿ ಹೊಸ ಕಾರು ಹಾಕ್ಬಾರ್ದು ಅಂದ್ರು - ಮಜಾ ಭಾರತ ನಟಿ ನೋವಿನ ಕಥೆ...

ಸಾರಾಂಶ

ರಸ್ತೆ ದುರಸ್ತಿ, ಕೆರೆ ಅಭಿವೃದ್ಧಿ ಸೇರಿ ಬೆಂಗಳೂರು ಸಮಸ್ಯೆ ಬಗೆಹರಿಸಲು ನಟ ಅನಿರುದ್ಧ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿರುವ ಅನಿರುದ್ಧ್ ಜಟ್ಕರ್, ಮನವಿ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರಿನ ನಗರದಾದ್ಯಂತ ಮೂಲಭೂತ ಸೌಕರ‍್ಯಗಳ ಕೊರತೆ ಎದ್ದು ಕಾಣುತ್ತಿದ್ದು ದಯಮಾಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ – ಬಹುತೇಕ ರಸ್ತೆಗಳ ಡಾಂಬರೀಕರಣ ಆಗಬೇಕು, ಬೀದಿ ದೀಪಗಳ ಸಮಸ್ಯೆ, ರಸ್ತೆಗಳ ತುಂಬಾ ಕಸದ ಸಮಸ್ಯೆ, ಫುಟ್‌ಪಾತ್‌ ಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದಿದ್ದಾರೆ. ಇದೇ ವೇಳೆ ಕೆರೆಗಳ ಅಭಿವೃದ್ಧಿಗೂ ಮನವಿ ಸಲ್ಲಿಲಿಸಿದ್ದಾರೆ.

Sushmitha Gowda

09:14 PM (IST) Jun 23

ಇಂಗ್ಲಿಷ್​ಗೇ ಹುಟ್ಟಿದೋಳು ಅಂದ್ರು, ಇನ್​ಸ್ಟಾದಲ್ಲಿ ಹೊಸ ಕಾರು ಹಾಕ್ಬಾರ್ದು ಅಂದ್ರು - ಮಜಾ ಭಾರತ ನಟಿ ನೋವಿನ ಕಥೆ...

ಮಜಾಭಾರತ ಕಾಮಿಡಿ ಶೋ ಮೂಲಕ ಫೇಮಸ್​ ಆಗಿರೋ ನಟಿ ಸುಶ್ಮಿತಾ ಗೌಡ ತಮ್ಮ ಬದುಕಿನ ಕಹಿ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಏನದು ನೋಡಿ!

 

Read Full Story

07:08 PM (IST) Jun 23

ಮರಳಿ ಬಂದ ಈ 7 ಜನ ಟಿವಿ ಸ್ಟಾರ್‌ಗಳು, ಏನಾಯ್ತು ನೋಡಿ..! ಟಿಆರ್‌ಪಿ ಹವಾ, ಇದೇನು ಶಿವಾ...!

ಗೌರವ್ ಖನ್ನಾರಿಂದ ಅವಿಕಾ ಗೌರ್‌ವರೆಗೆ, ಹಲವು ಪ್ರಸಿದ್ಧ ಮುಖಗಳು ಮತ್ತೆ ಟಿವಿಯಲ್ಲಿ ರಾರಾಜಿಸಲು ಬರ್ತಿದ್ದಾರೆ. ಹೊಸ ಶೋಗಳು, ಹೊಸ ಪಾತ್ರಗಳು, ಮತ್ತು ಹೊಸ ಮನರಂಜನೆ, ನಿಮ್ಮ ನೆಚ್ಚಿನ ನಟರು ಯಾರು ವಾಪಸ್ ಬರ್ತಿದ್ದಾರೆ ನೋಡಿ.

Read Full Story

07:00 PM (IST) Jun 23

ನಿಹಾರಿಕ ಮದುವೆಯಲ್ಲಿ ನನ್ನ ನಿರ್ಧಾರ ತಪ್ಪಾಯ್ತು, ಅದು ನಮ್ಮದೇ ತಪ್ಪು - ನಾಗಬಾಬು ಹೇಳಿಕೆ ಮರ್ಮವೇನು?

ಮೆಗಾ ಡಾಟರ್ ನಿಹಾರಿಕ ಮತ್ತೆ ಮದುವೆ ಆಗೋ ಬಗ್ಗೆ ಮೆಗಾ ಬ್ರದರ್ ನಾಗಬಾಬು ಮಾತಾಡಿದ್ದಾರೆ. ಈ ಸಲ ನಾವು ಸೇರಲ್ಲ ಅಂತ ಹೇಳಿದ್ದಾರೆ.

 

Read Full Story

06:48 PM (IST) Jun 23

'ರಶ್ಮಿಕಾ ನೋಡಿ ಶ್ರೀದೇವಿ ನೆನಪಾಯ್ತು' ಎಂದ ನಾಗಾರ್ಜುನ; ನ್ಯಾಷನಲ್‌ ಕ್ರಶ್‌ಗೆ ಇನ್ನೇನು ಬೇಕು? ನೆಟ್ಟಿಗರ ಪ್ರಶ್ನೆ..!

'ಪುಷ್ಪ' ಮತ್ತು 'ಅನಿಮಲ್' ಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಭಾರಿ ಯಶಸ್ಸು ಗಳಿಸಿ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ ಅವರಿಗೆ ನಾಗಾರ್ಜುನ ಅವರ ಈ ಪ್ರಶಂಸೆಯು ಮತ್ತಷ್ಟು ಹುಮ್ಮಸ್ಸು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. 

Read Full Story

05:59 PM (IST) Jun 23

ಬಾಲಿವುಡ್ ವಿರುದ್ಧ ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಕೋಪಗೊಂಡಿದ್ದು ಯಾಕೆ? ಹಿಂದಿ ಚಿತ್ರರಂಗ ಹಾಗೆ ಮಾಡಿದ್ಯಾ?

ಬಾಲಿವುಡ್ ಅನ್ನು ಟೀಕಿಸುವುದರ ಜೊತೆಗೆ, ದಕ್ಷಿಣ ಭಾರತದ ಚಿತ್ರರಂಗಗಳಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಉದ್ಯಮಗಳನ್ನು ಅವರು ಮನಸಾರೆ ಹೊಗಳಿದರು. "ನಮ್ಮ ಚಿತ್ರಗಳು ನಮ್ಮ ನೆಲದ ಕಥೆಗಳನ್ನು ಹೇಳುತ್ತವೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ. 

Read Full Story

04:52 PM (IST) Jun 23

ರಿಲೀಸ್‌ಗೆ ರೆಡಿಯಾಗಿರೋ 'ರಾಮಾ ರಾಮಾ ರೇʼ ಸಿನಿಮಾ ನಿರ್ದೇಶಕ ಡಿ ಸತ್ಯಪ್ರಕಾಶ್‌ರ X&Y ಸಿನಿಮಾ!

"ರಾಮಾ ರಾಮಾ ರೇ" ಸಿನಿಮಾ ಮಾಡಿದ ಖ್ಯಾತಿ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾದ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರೇ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ "X&Y" ಚಿತ್ರ ರಿಲೀಸ್‌ಗೆ ರೆಡಿಯಿದೆ.

 

Read Full Story

04:45 PM (IST) Jun 23

ದೀಪಿಕಾ ಪಡುಕೊಣೆ ವಿವಾದದ ಬಗ್ಗೆ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? ಹೀಗೂ ಯೋಚ್ನೆ ಮಾಡ್ಬಹುದಾ ದೇವ್ರೇ..!?

ಕೇವಲ ನಟರ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ನಿರ್ಮಾಪಕರ ಬಜೆಟ್, ಸ್ಥಳದ ಲಭ್ಯತೆ, ಮತ್ತು ಚಿತ್ರೀಕರಣದ ವೇಳಾಪಟ್ಟಿಯಂತಹ ಅನೇಕ ಸವಾಲುಗಳೂ ಇರುತ್ತವೆ. ಕೆಲವೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತದಂತಹ ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕಾಗುತ್ತದೆ.

Read Full Story

04:35 PM (IST) Jun 23

Celebrity Schoolmate - ಶಾಲಾ ದಿನಗಳಿಂದಲೇ ಪರಿಚಿತರಾಗಿರೋ ಸೆಲೆಬ್ರಿಟಿ ಜೋಡಿಗಳಿವು!

ತಮಿಳು ಸಿನಿಮಾದ ಕೆಲವು ಸ್ಟಾರ್‌ಗಳು ಶಾಲೆಯಲ್ಲಿ ಒಟ್ಟಿಗೆ ಓದಿದ್ದಾರೆ. ಅವರು ಯಾರು ಯಾರು?

Read Full Story

04:28 PM (IST) Jun 23

ದಳಪತಿ ವಿಜಯ್‌ ಜೊತೆ ನಟಿಸಿದ್ದ ಪ್ರಖ್ಯಾತ ನಟ ಡ್ರಗ್‌ ಕೇಸ್‌ನಲ್ಲಿ ಬಂಧನ!

ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.

 

Read Full Story

04:02 PM (IST) Jun 23

2026ರ ಚುನಾವಣೆಯಲ್ಲಿ ಗೆದ್ರೆ ಮಾತ್ರ ಸಿನಿಮಾ ಬಿಟ್ಟು ರಾಜಕೀಯ? ದಳಪತಿ ವಿಜಯ್ ಸೀಕ್ರೆಟ್ ಬಾಯ್ಬಿಟ್ಟ ಮಮಿತಾ!

‘ಜನ ನಾಯಕನ್‌’ ಸಿನಿಮಾ ವಿಜಯ್‌ಗೆ ಕೊನೆಯ ಸಿನಿಮಾ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ನಟಿ ಮಮಿತಾ ಬೈಜು ವಿಜಯ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಹೊಸ ವಿಷ್ಯ ಹೇಳಿದ್ದಾರೆ.

Read Full Story

03:50 PM (IST) Jun 23

ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಮಾಡಿರೋ ವಿಶ್ ಯಾಕಿಷ್ಟು ವೈರಲ್ ಆಗ್ತಿದೆ..?

ನಟ ವಿಜಯ್ ಅವರ 51ನೇ ಹುಟ್ಟುಹಬ್ಬದಂದು ನಟಿ ತ್ರಿಷಾ ಅವರ ಶುಭಾಶಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Read Full Story

03:41 PM (IST) Jun 23

ವಿಜಯ್ GOAT ಚಿತ್ರದ ದಾಖಲೆ ಮುರಿದ ಧನುಷ್; ಕುಬೇರಾ ಅಬ್ಬರ ಬಲು ಜೋರು!

ವಿಜಯ್ ಅಭಿನಯದ GOAT ಚಿತ್ರದ ಲೈಫ್ ಟೈಮ್ ಕಲೆಕ್ಷನ್ ದಾಖಲೆಯನ್ನು ಧನುಷ್ ಅವರ ಕುಬೇರಾ ಚಿತ್ರ ಮುರಿದಿದೆ.

Read Full Story

03:29 PM (IST) Jun 23

07.08.09 ಕೋಡ್ ವರ್ಡ್ ಇರುವ 'ಉಸಿರು' - ಇನ್‌ವೆಸ್ಟಿಗೇಟಿವ್ ಥ್ರಿಲ್ಲರ್‌ನಲ್ಲಿ ತಿಲಕ್ ಶೇಖರ್

ತಿಲಕ್‌ ಶೇಖರ್‌ ಹಾಗೂ ಪ್ರಿಯಾ ಹೆಗ್ಡೆ ನಟನೆಯ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ‘ಉಸಿರು’ ಚಿತ್ರದ ಟೀಸರನ್ನು ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ರವಿ ಆರ್‌ ಗರಣಿ ಬಿಡುಗಡೆ ಮಾಡಿದರು.

Read Full Story

02:54 PM (IST) Jun 23

ಅಪ್ಸರಾ ಅಭಿನಯದ ಕೊನೆಯ ಚಿತ್ರ ರಾಜ ರತ್ನಾಕರ ಟ್ರೇಲರ್ ರಿಲೀಸ್ - ಜೂ.27ರಂದು ಬಿಡುಗಡೆ

ಚಂದನ್‌ ರಾಜ್‌ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜಯರಾಮ ಸಿ.ಮಾಲೂರು ಈ ಸಿನಿಮಾ ನಿರ್ಮಿಸಿದ್ದಾರೆ.

Read Full Story

02:40 PM (IST) Jun 23

ತಾರೆ ಜಮೀನ್ ಪರ್ ಸಿನಿಮಾಗಿಂತ ಮೊದಲಿನ ಆಮಿರ್ ಖಾನ್ ರೀಮೇಕ್ ಸಿನಿಮಾಗಳು..!?

ಆಮಿರ್ ಖಾನ್ ಅವರ 'ಸಿತಾರೆ ಜಮೀನ್ ಪರ್' ಸ್ಪ್ಯಾನಿಷ್ ಚಿತ್ರ 'ಚಾಂಪಿಯನ್ಸ್' ನ ಹಿಂದಿ ರಿಮೇಕ್. ಆಮಿರ್ ಈ ಹಿಂದೆಯೂ ಹಲವು ವಿದೇಶಿ ಚಿತ್ರಗಳ ರಿಮೇಕ್‌ಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ 8 ಚಿತ್ರಗಳನ್ನು ನೋಡೋಣ...

Read Full Story

02:19 PM (IST) Jun 23

PHOTOS - ಮಾಲ್ಡೀವ್ಸ್‌ನಲ್ಲಿ 40ನೇ ವರ್ಷದ ಜನ್ಮದಿನ ಸೆಲೆಬ್ರೇಟ್‌ ಮಾಡಿದ Actress Kajal Aggarwal!

ನಟಿ ಕಾಜಲ್ ಅಗರ್ವಾಲ್ ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ಸೋಶಿಯಲ್‌ ಮೀಡಿಯಾ ಮೂಲಕ ಧನ್ಯವಾದ ತಿಳಿಸಿದ್ದಾರೆ.

Read Full Story

01:42 PM (IST) Jun 23

Anupama - ಸೀರಿಯಲ್‌ ಸೆಟ್‌ನಲ್ಲಿ ಭಾರಿ ಅಗ್ನಿದುರಂತ - ಕ್ಷಣ ಮಾತ್ರದಲ್ಲಿ ಧಗಧಗಿಸಿ ಉರಿದ ಸೆಟ್‌

ಹಿಂದಿಯ ಅನುಪಮಾ ಸೀರಿಯಲ್‌ ಸೆಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ್ದು, ಸಂಪೂರ್ಣ ಸೆಟ್‌ ಧಗಧಗಿಸಿ ಉರಿದಿದೆ. ಆಗಿದ್ದೇನು?

 

Read Full Story

01:25 PM (IST) Jun 23

ಆಮೀರ್ ಖಾನ್ 'ತಾರೆ ಜಮೀನ್ ಪರ್' ಸಿನಿಮಾ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಹೇಳಿದ್ದೇನು?

'ತಾರೆ ಜಮೀನ್ ಪರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುವುದರ ಜೊತೆಗೆ ಮಹೇಶ್ ಬಾಬು ಅವರಂತಹ ಸೂಪರ್‌ಸ್ಟಾರ್‌ಗಳ ಮನಗೆದ್ದಿದೆ. ಜಾವೇದ್ ಅಖ್ತರ್ ಕೂಡ ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
Read Full Story

01:17 PM (IST) Jun 23

ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್‌ ಅವರು ನಿಶ್ಚಿತಾರ್ಥಕ್ಕೆ ಕಾಲಿಟ್ಟಿದ್ದಾರೆ.

 

Read Full Story

01:08 PM (IST) Jun 23

OTTಗೆ ಬರ್ತಿದೆ 3,000 ಕೋಟಿ ಕಲೆಕ್ಷನ್ ಮಾಡಿದ ಹಾರರ್ ಸಿನಿಮಾ

300 ಕೋಟಿಗೂ ಹೆಚ್ಚು ಗಳಿಕೆ ಕಂಡ ಹಾರರ್ ಸಿನಿಮಾ ಒಟಿಟಿಗೆ ಬರುತ್ತಿದೆ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಚಿತ್ರ  ಇಬ್ಬರು ಅವಳಿ ಸೋದರರ 1930ರ ಘಟನೆಯನ್ನಾಧರಿಸಿದ ಕಥೆಯನ್ನು ಹೊಂದಿದೆ.

Read Full Story

01:05 PM (IST) Jun 23

ಮೆಗಾಸ್ಟಾರ್‌ ಚಿರಂಜೀವಿ ಜತೆಗೆ ನಟಿ ನಿಶ್ವಿಕಾ ನಾಯ್ಡು - ಆ ಡ್ಯಾನ್ಸ್ ನೋಡಿಯೇ ವಿಶ್ವಂಭರಕ್ಕೆ ಆಯ್ಕೆ

ಈಗಾಗಲೇ ಆಶಿಕಾ ರಂಗನಾಥ್‌ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ.

Read Full Story

12:57 PM (IST) Jun 23

ಕಮಲ್ ಹಾಸನ್ ಮುಂದಿನ ಸಿನಿಮಾ ನಿರ್ದೇಶಕ ಯಾರು..? ಯಶಸ್ವೀ ನಿರ್ದೇಶಕನಿಗೆ ಒಲಿದ ಅದೃಷ್ಟ..!?

ತಗ್ ಲೈಫ್ ಸಿನಿಮಾ ನಂತರ ಕಮಲ್ ಹಾಸನ್ ಅವರ ಮುಂದಿನ ಚಿತ್ರವನ್ನು ಎಸ್.ಯು. ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ. ರಾಜ್‌ಕಮಲ್ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರಕಥೆ ಕೆಲಸ ಪ್ರಗತಿಯಲ್ಲಿದೆ.
Read Full Story

12:35 PM (IST) Jun 23

ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ?

ಸಾಮಾನ್ಯವಾಗಿ ಡಿವೋರ್ಸ್ ಆದ ಬಳಿಕ ಪತಿ ಹಾಗು ಮುಂದಿನ ಸಂಬಂಧಗಳ ಜೊತೆ ಅನ್ಯೋನ್ಯತೆಯನ್ನು ಬಯಸುವುದು ತುಂಬಾ ಅಪರೂಪ. ಅನ್ಯೋನ್ಯತೆ ಹಾಗಿರಲಿ, ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಹಾಗೂ ಹಾಲಿ ಪತಿ-ಪತ್ನಿ ನಡುವೆ ವೈಮನಸ್ಯ ಇರುವುದೇ ಹೆಚ್ಚು. ಆದರೆ, ಕರಿಷ್ಮಾ ಕುಟುಂಬ ಹಾಗೂ ಪ್ರಿಯಾ ಕುಟುಂಬಗಳ ಮಧ್ಯೆ..

Read Full Story

12:27 PM (IST) Jun 23

ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ - ಬಾಹುಬಲಿ ನಿರ್ದೇಶನ

ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು.

Read Full Story

12:03 PM (IST) Jun 23

PHOTOS - ಬೆಸ್ಟ್‌ ಫ್ರೆಂಡ್‌ ಜೊತೆ ಎಂಗೇಜ್‌ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸುಗ್ಗಿ ಶುರು ಆದಂತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ, ಮದುವೆ ಆಗ್ತಿದೆ. ಅಷ್ಟೇ ಅಲ್ಲದೆ ಕಲಾವಿದರ ಮನೆಗೆ ಹೊಸ ಸದಸ್ಯರ ಆಗಮನವೂ ಆಗುತ್ತಿದೆ.

 

Read Full Story

11:36 AM (IST) Jun 23

ರಚಿತಾ ರಾಮ್ ದೊಡ್ಡೋರು, ನಾನೇ ಕೆಟ್ಟವನು - ನಿರ್ದೇಶಕ ನಾಗಶೇಖರ್

ಯಾರು ಒಳ್ಳೆಯವರು, ಕೆಟ್ಟವರು ಅಂತ ಭಗವಂತ ನೋಡಿಕೊಳ್ಳಲಿ ಬಿಡಿ. ಅವರು ಅಷ್ಟೆಲ್ಲಾ ಹೇಳಿದ್ದಾರೆ, ಅವರೇ ದೊಡ್ಡೋರು, ನಾನೇ ಕೆಟ್ಟವನು ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.

Read Full Story

11:30 AM (IST) Jun 23

OTT Release This Week - ಒಟಿಟಿಗೆ ಬಂದ ಕಾಡುವ ರೊಮ್ಯಾನ್ಸ್‌, ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳಿವು!

ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ZEE5, ಸನ್ NXT ವೇದಿಕೆಗಳಲ್ಲಿ ಹೊಸ ಕಂಟೆಂಟ್ ಬಿಡುಗಡೆಯಾಗಲಿದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಮತ್ತು ವೆಬ್ ಸೀರೀಸ್‌ಗಳ ವಿವರ ಇಲ್ಲಿದೆ.

Read Full Story

11:10 AM (IST) Jun 23

ಪ್ರೀತಿಯಲ್ಲಿ ಮೋಸ ಹೋಗಿ ಏಕಾಂಗಿಯಾದೆ, ಅಭಿಷೇಕ್ ಬಚ್ಚನ್ ದೂರವಾದ ನೋವು ತೋಡಿಕೊಂಡ ಕರೀಷ್ಮಾ

ಮಾಜಿ ಪತಿ ನಿಧನದಿಂದ ಕರಿಷ್ಮಾ ಹೃದಯ ಮತ್ತಷ್ಟು ಭಾರವಾಗಿದೆ. ಪತಿಯಿಂದ ದೂರವಾಗಿರುವ ಕರೀಷ್ಮಾ ವೈಯುಕ್ತಿಕ ಬದುಕಿನಲ್ಲಿ ಕಣ್ಣೀರ ಕತೆಗಳೇ ಹೆಚ್ಚು. ಈ ಪೈಕಿ ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೀತಿ , ಬಿರುಕು ತನ್ನನ್ನು ಏಕಾಂಗಿಯಾಗಿಸಿತು. ಈ ನೋವುಮಾತ್ರ ಘನಘೋರ ಎಂದಿದ್ದಾರೆ. ಅಷ್ಟಕ್ಕೂ ಏನಾಗಿತ್ತು?

Read Full Story

11:07 AM (IST) Jun 23

ರಶ್ಮಿಕಾ ಮಂದಣ್ಣ ಈಗ ನ್ಯಾಶನಲ್‌ ಕ್ರಶ್‌ ಅಲ್ಲ, ನಾಗ್‌ ಕ್ರಶ್‌, 40 ವರ್ಷ ನಂಗೆ ಯಾರೂ ಸರಿಸಾಟಿ ಇಲ್ಲ - Nagarjuna

`ಕುಬೇರ` ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ನಾಗಾರ್ಜುನ ಮಾಡಿದ್ದ ಕಾಮೆಂಟ್ಸ್ ಟ್ರೋಲ್ಸ್‌ಗೆ ಗುರಿಯಾಗಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. `ಕುಬೇರ` ಸಕ್ಸಸ್‌ ಈವೆಂಟ್‌ನಲ್ಲಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ.

 

Read Full Story

11:05 AM (IST) Jun 23

ಯಶ್ ನಿರ್ಮಾಣದ ರಾಮಾಯಣಕ್ಕೆ ಕೈಜೋಡಿಸಿದ ಚಾರ್ಲ್ಸ್ ರೋವನ್

ಹಾಲಿವುಡ್‌ ನಿರ್ಮಾಪಕನ ಸಾಥ್‌ನಿಂದ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಹೆಚ್ಚಿನ ಬಲ ಬಂದಿದ್ದು ಈ ಸಿನಿಮಾ ಕಲ್ಪನೆಯನ್ನೂ ಮೀರಿ ಅದ್ದೂರಿತನದಿಂದ ತೆರೆಗೆ ಬರುವ ಸಾಧ್ಯತೆ ಇದೆ.

Read Full Story

10:38 AM (IST) Jun 23

ನಟ ನಾಗಾರ್ಜುನರನ್ನು ಫಾಲೋ ಮಾಡ್ತೀನಿ - ಎಲ್ಲರ ಮುಂದೆ ಸತ್ಯ ಒಪ್ಕೊಂಡ Mega Star Chiranjeevi!

ಮೆಗಾಸ್ಟಾರ್‌ ಚಿರಂಜೀವಿ ಸೆನ್ಸೇಷನಲ್‌ ಹೇಳಿಕೆ ಕೊಟ್ಟಿದ್ದಾರೆ. ನಾಗಾರ್ಜುನ್‌ ಹಾದಿಯಲ್ಲೇ ತಾವೂ ಹೋಗ್ತೀವಿ ಅಂತ ಹೇಳಿದ್ದಾರೆ. ಹಾಗೇ ಪಾತ್ರಗಳು ಮಾಡೋಕೆ ರೆಡಿ ಅಂತಿದ್ದಾರೆ.

 

Read Full Story

10:22 AM (IST) Jun 23

ಕ್ಯಾನ್ಸರ್‌ನಿಂದ ಬಳಲ್ತಿರುವವರಿಗೆ ಗುಡ್‌ ನ್ಯೂಸ್‌ ಕೊಟ್ಟ ನಟ! ಇಂಥ ಒಳ್ಳೆಯನತಕ್ಕೆ ಜೈ ಬಾಲಯ್ಯ ಎಂದ ಜನರು

ಅಮರಾವತಿಯಲ್ಲಿ ಹೊಸದಾಗಿ ಸಾವಿರ ಹಾಸಿಗೆಗಳ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಹಿಂದೂಪುರ ಶಾಸಕ, ಚಿತ್ರನಟ ನಂದಮೂರಿ ಬಾಲಕೃಷ್ಣ ತಿಳಿಸಿದ್ದಾರೆ. ಶೀಘ್ರದಲ್ಲೇ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
Read Full Story

07:19 AM (IST) Jun 23

ಬೆಂಗಳೂರು ಸಮಸ್ಯೆ ಬಗೆಹರಿಸಲು ಅನಿರುದ್ಧ್ ಹೋರಾಟ

ಬೆಂಗಳೂರಿನ ಹಲವು ಸಮಸ್ಯೆಗಳ ಕುರಿತು ಈಗಾಗಲೇ ವಿಡಿಯೋ ಮೂಲಕ ಹೋರಾಟ ಮಾಡುತ್ತಿರುವ ನಟ ಅನಿರುದ್ಧ ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

 

 


More Trending News