ಕ್ಯಾಮೆರಾಗೆ ಪೋಸ್‌ ಕೊಡ್ತಿದ್ದ ಏಕ್ತಾ ಕಪೂರ್‌ ಕಿಡ್ನ್ಯಾಪ್, ಗನ್‌ ಹಿಡಿದ ಮುಸುಕುಧಾರಿಗಳಾರು?

Published : Feb 22, 2022, 02:28 PM IST
ಕ್ಯಾಮೆರಾಗೆ ಪೋಸ್‌ ಕೊಡ್ತಿದ್ದ ಏಕ್ತಾ ಕಪೂರ್‌ ಕಿಡ್ನ್ಯಾಪ್, ಗನ್‌ ಹಿಡಿದ ಮುಸುಕುಧಾರಿಗಳಾರು?

ಸಾರಾಂಶ

* ಬಾಲಾಜಿ ಕಚೇರಿಯಿಂದ ಹೊರಬರುತ್ತಿದ್ದ ಏಕ್ತಾ ಕಪೂರ್ ಕಿಡ್ನ್ಯಾಪ್ * ಏಕಾಏಕಿ ನಡೆದ ಘಟನೆ ಕಂಡು ನೆಟ್ಟಿಗರು ಶಾಕ್ * ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಯಲಾಯ್ತು ಸತ್ಯ

ಮುಂಬೈ(ಫೆ.22): ಏಕ್ತಾ ಕಪೂರ್ ಟಿವಿಯಿಂದ OTT ಪ್ಲಾಟ್‌ಫಾರ್ಮ್‌ಗೆ ಕಂಟೆಂಟ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಸೋಮವಾರ ಸಂಜೆ, ಅವರು ಬಾಲಾಜಿ ಕಚೇರಿಯಿಂದ ಹೊರಬಂದು ಕ್ಯಾಮೆರಾಗಳ ಮುಂದೆ ಪೋಸ್ ನೀಡಲು ಬಂದಿದ್ದಾರೆ. ಈ ವೇಳೆ ಯಾರೂ ನಿರೀಕ್ಷಿಸದ ಘಟನೆಯೊಂದು ನಡೆದಿದೆ. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಬಳಕೆದಾರರೆಲ್ಲರೂ ಏನಿದು ವಿಚಾರ? ಏಕ್ತಾಗೆ ಏನಾಗಿದೆ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ. ಇನ್ನು ಮುಸುಕುಧಾರಿಗಳಲ್ಲಿ ಒಬ್ಬಾತ ಏಕ್ತಾ ತಲೆಗೆ ಗನ್‌ಪಾಯಿಂಟ್ ಮಾಡಿದ್ದರೆ, ಇನ್ನೊಬದಬಾತ ಕ್ಯಾಮೆರಾಗಳನ್ನು ಆಫ್ ಮಾಡಲು ಸೂಚಿಸಿರುವುದು ಮತ್ತಷ್ಟು ಆತಂಕ ಹುಟ್ಟುಹಾಕಿದೆ.

ದುಷ್ಕರ್ಮಿಗಳು ಕೈಯಲ್ಲಿ ಪಿಸ್ತೂಲ್ ಹಿಡಿದು ಬಂದಿದ್ದರು

ಅಷ್ಟರಲ್ಲಿ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಕೈಯಲ್ಲಿ ಪಿಸ್ತೂಲ್ ಹಿಡಿದು ಬಂದಿದ್ದಾರೆ. ಅವರಲ್ಲಿ ಒಬ್ಬರು ಫೋಟೋ ಕ್ಲಿಕ್ಕಿಸುತ್ತಿದ್ದವರಿಗೆ ಬೆದರಿಕೆ ಹಾಕಿದರೆ, ಇನ್ನೊಬ್ಬರು ಏಕ್ತಾ ಅವರರಿಗೆ ಗನ್ ತೋರಿಸಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಏಕ್ತಾ ಕಪೂರ್‌ಗೆ ಏನಾಯಿತು ಎಂಬುದು ದೃಢೀಕರಿಸಲ್ಪಟ್ಟಿಲ್ಲವಾದರೂ, ಇದು ಮುಂಬರುವ ಶೋ ಲಾಕ್ ಅಪ್‌ನ ಪ್ರೋಮೋ ಎಂದು ಪ್ರೇಕ್ಷಕರು ಊಹಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ವಿಡಿಯೋಗೆ ಅನೇಕರ ಕಮೆಂಟ್

ಈ ವಿಡಿಯೋವನ್ನು ಛಾಯಾಗ್ರಾಹಕ ಮಾನವ್ ಮಂಗಳಾನಿ ಶೇರ್ ಮಾಡಿದ್ದಾರೆ. ಇದಕ್ಕೆ ಒಬ್ಬಾತ 'ಇದು ನಿಜವೇ?' ಎಂದು ಪ್ರಶ್ನಿಸಿದರೆ - 'ಲಾಕ್ ಅಪ್ ಪ್ರೊಮೋಷನ್ ಗಿಮಿಕ್' ಎಂದಿದ್ದಾರೆ. ಇನ್ನು ಅನೇಕರು ಇದು ನಕಲಿ ವಿಡಿಯೋ ಎಂದಿದ್ದಾರೆ. 

ಶೀಘ್ರದಲ್ಲೇ ಬರಲಿದೆ ರಿಯಾಲಿಟಿ ಶೋ

ವೀಡಿಯೋ ನೋಡಿ ನಿಮಗೂ ಗೊಂದಲವಾಗಿದ್ದರೆ, ನಿಜ ವಿಚಾರ ಏನೆಂಬ ಕಡೆ ಗಮನ ಹರಿಸೋಣ. ವಾಸ್ತವವಾಗಿ ಏಕ್ತಾ ಕಪೂರ್ ಅವರ ರಿಯಾಲಿಟಿ ಶೋ 'ಲಾಕ್ ಅಪ್' ಶೀಘ್ರದಲ್ಲೇ ಬರಲಿದೆ. ಪ್ರದರ್ಶನವನ್ನು ಉತ್ತೇಜಿಸಲು ಅವರು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. 'ಲಾಕ್ ಅಪ್' ಫೆಬ್ರವರಿ 27 ರಿಂದ OTT ಪ್ಲಾಟ್‌ಫಾರ್ಮ್‌ಗಳಾದ MX ಪ್ಲೇಯರ್ ಮತ್ತು ಆಲ್ಟ್ ಬಾಲಾಜಿಯಲ್ಲಿ ಸ್ಟ್ರೀಮ್ ಆಗಲಿದೆ. ಇದರ ನಿರ್ಮಾಪಕಿ ಏಕ್ತಾ ಕಪೂರ್ ಆಗಿದ್ದು, ಕಂಗನಾ ರಣಾವತ್ ಹೋಸ್ಟ್ ಮಾಡಲಿದ್ದಾರೆ. ಈ ಪ್ರದರ್ಶನಕ್ಕಾಗಿ ಏಕ್ತಾ ಕಪೂರ್ ಬಸ್ ಪ್ರಚಾರದ ವಿಧಾನವನ್ನು ಅಳವಡಿಸಿಕೊಂಡಿದ್ದರು. 1 ಗಂಟೆಯ ಸಂಚಿಕೆಯನ್ನು ತೋರಿಸಲಾಗುತ್ತದೆ. ಶೋನಲ್ಲಿ 16 ವಿವಾದಾತ್ಮಕ ಸ್ಪರ್ಧಿಗಳನ್ನು ಲಾಕ್ ಅಪ್ ಲಾಕ್ ಮಾಡಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!