ಅಷ್ಟೊಂದು ಕೋಟಿ ರೂ. ಆಸ್ತಿ ಇದ್ದರೂ ಬಾಡಿಗೆ ಮನೆಯಲ್ಲಿ ಇರೋದ್ಯಾಕೆ ನಟಿ ವಿದ್ಯಾ ಬಾಲನ್? ಶಾಕಿಂಗ್ ಕಾರಣವಿದೆ!

Published : Sep 28, 2026, 03:47 PM IST
Vidya Balan

ಸಾರಾಂಶ

ವಿದ್ಯಾ ಬಾಲನ್ ಇತ್ತೀಚಿನ ದಿನಗಳಲ್ಲಿ ‘ಜೈಲರ್ 2’ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಕಾಂತಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀಗಾಗಿ ಒಂದೆಡೆ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ವಿದ್ಯಾ, ಮತ್ತೊಂದೆಡೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ..

Vidya Balan rented house shocking news-ಬಾಲಿವುಡ್‌ನಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿಯರಲ್ಲಿ ವಿದ್ಯಾ ಬಾಲನ್ ಹೆಸರು ಮುಂಚೂಣಿಯಲ್ಲಿದೆ. ‘ಕಹಾನಿ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರು, ಸಿನಿಮಾ ಜಗತ್ತಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ವರದಿಗಳ ಪ್ರಕಾರ ವಿದ್ಯಾ ಬಾಲನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹136 ಕೋಟಿ ಎನ್ನಲಾಗಿದೆ. ಆದರೆ ಇಷ್ಟೊಂದು ದೊಡ್ಡ ಆಸ್ತಿ ಹೊಂದಿದ್ದರೂ ಅವರು ಸ್ವಂತ ಮನೆಯಲ್ಲಿ ವಾಸಿಸುತ್ತಿಲ್ಲ ಎಂಬ ವಿಚಾರವೇ ಇದೀಗ ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಹೌದು, ವಿದ್ಯಾ ಬಾಲನ್ ಮತ್ತು ಅವರ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಆಯ್ಕೆ ಮಾಡಿಕೊಂಡಿರುವುದು ಬಾಡಿಗೆ ಮನೆ!

“ಕೋಟ್ಯಂತರ ರೂಪಾಯಿ ಆಸ್ತಿ ಇರುವ ನಟಿಗೆ ಸ್ವಂತ ಮನೆ ಇಲ್ಲವೇ?” ಎಂಬ ಪ್ರಶ್ನೆ ಸಹಜವಾಗಿಯೇ ಮೂಡಬಹುದು. ಆದರೆ ಇದರ ಹಿಂದೆ ವಿದ್ಯಾ ಬಾಲನ್ ಅವರದೇ ಆದ ಒಂದು ಆಸಕ್ತಿದಾಯಕ ಕಾರಣವಿದೆ. ಕೆಲವು ವರ್ಷಗಳ ಹಿಂದೆ ಅವರು ತಮ್ಮ ಬಾಡಿಗೆ ಮನೆಯ ಆಯ್ಕೆಯ ಹಿಂದಿರುವ ಕಥೆಯನ್ನು ಸ್ವತಃ ಹಂಚಿಕೊಂಡಿದ್ದರು.

ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 1,100ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳ ಮುಂದೆ ಮಾತನಾಡಿದ್ದ ವಿದ್ಯಾ ಬಾಲನ್, ಕನಸಿನ ಮನೆ ಖರೀದಿಸುವುದು ಕೇವಲ ಹಣದ ವಿಚಾರವಲ್ಲ, ಅದಕ್ಕೆ ಅದೃಷ್ಟವೂ ಬೇಕು ಎಂದು ಹೇಳಿದ್ದರು. ತಮಗೆ ಇಷ್ಟವಾಗುವ ಮನೆ ಸಿಗುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ತಮ್ಮ ಅನುಭವದ ಮೂಲಕ ವಿವರಿಸಿದ್ದರು.

ಸುಮಾರು 15 ವರ್ಷಗಳ ಹಿಂದೆ ತಾಯಿಯೊಂದಿಗೆ ಮನೆ ಹುಡುಕಾಟ ಆರಂಭಿಸಿದ್ದ ವಿದ್ಯಾ, ಮುಂಬೈನ ಚೆಂಬೂರಿನಿಂದ ಶೂಟಿಂಗ್ ಸ್ಥಳಗಳಿಗೆ ಪ್ರತಿದಿನ ಪ್ರಯಾಣಿಸುವ ಕಷ್ಟವನ್ನು ತಪ್ಪಿಸಲು ಬಾಂದ್ರಾ ಅಥವಾ ಜುಹು ಸುತ್ತಮುತ್ತ ಮನೆ ಖರೀದಿಸಲು ಬಯಸಿದ್ದರು. ಆದರೆ ತಮಗೆ ಇಷ್ಟವಾದ ಮನೆಯ ಬೆಲೆ ತಮ್ಮ ಬಜೆಟ್‌ಗಿಂತ ಹೆಚ್ಚಾಗಿತ್ತು. ಆದರೂ ತಾಯಿಯ ಪ್ರೋತ್ಸಾಹದಿಂದ EMI ಮೂಲಕ ಆ ಮನೆಯನ್ನು ಖರೀದಿಸಿದ್ದಾಗಿ ವಿದ್ಯಾ ಹೇಳಿಕೊಂಡಿದ್ದರು.

ನಂತರ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವಿವಾಹವಾದ ಬಳಿಕ ದಂಪತಿ ಮತ್ತೊಮ್ಮೆ ತಮ್ಮ ಕನಸಿನ ಮನೆಗಾಗಿ ಹುಡುಕಾಟ ಆರಂಭಿಸಿದರು. ಒಂದಲ್ಲ, ಎರಡಲ್ಲ ಬರೋಬ್ಬರಿ 25 ಮನೆಗಳನ್ನು ನೋಡಿದರೂ ಯಾವುದೂ ಇಬ್ಬರಿಗೂ ಸಂಪೂರ್ಣವಾಗಿ ಇಷ್ಟವಾಗಲಿಲ್ಲ. ಕೊನೆಗೆ ತಮ್ಮ ಮನಸ್ಸಿಗೆ ಹಿಡಿಸಿದ ಒಂದು ಮನೆ ಸಿಕ್ಕಿತು. ಆದರೆ ಅಲ್ಲಿ ಒಂದು ಸಣ್ಣ ಟ್ವಿಸ್ಟ್ ಇತ್ತು—ಆ ಮನೆ ಮಾರಾಟಕ್ಕಿರಲಿಲ್ಲ, ಬಾಡಿಗೆಗೆ ಮಾತ್ರ ಲಭ್ಯವಿತ್ತು!

ಆರಂಭದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಬಗ್ಗೆ ವಿದ್ಯಾ ಅವರಿಗೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ ಆ ಮನೆಯ ವಿಶೇಷತೆಗಳನ್ನು ನೋಡಿದ ಬಳಿಕ ಅವರ ಅಭಿಪ್ರಾಯವೇ ಬದಲಾಯಿತು. ಜನನಿಬಿಡ ಮುಂಬೈ ನಗರದಲ್ಲಿ ಸುಂದರವಾದ ತೋಟ, ನೆಮ್ಮದಿಯ ವಾತಾವರಣ ಹಾಗೂ ಸಮುದ್ರದ ದೃಶ್ಯ ಕಾಣುವ ಮನೆ ಸಿಗುವುದು ಬಹಳ ಅಪರೂಪ. ಹೀಗಾಗಿ ದಂಪತಿ ಈ ಮನೆಯನ್ನೇ ತಮ್ಮ ನಿವಾಸವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು.

ಇದೀಗ ಈ ಮನೆಯೊಂದಿಗೆ ವಿದ್ಯಾ ಮತ್ತು ಸಿದ್ಧಾರ್ಥ್ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ. ಪ್ರತಿ ತಿಂಗಳು ದೊಡ್ಡ ಮೊತ್ತದ ಬಾಡಿಗೆ ಸಿಗುತ್ತಿರುವುದರಿಂದ ಮನೆಯ ಮಾಲೀಕರೂ ಸಂತೋಷವಾಗಿದ್ದಾರೆ ಎನ್ನುವ ವಿದ್ಯಾ, “ಈ ಮನೆ ನಮಗೆ ಸೂಟ್ ಆಗಿದೆ” ಎಂಬರ್ಥದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು.

ಹೀಗಾಗಿ ₹136 ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗುವ ವಿದ್ಯಾ ಬಾಲನ್ ಸ್ವಂತ ಮನೆಗಿಂತ ತಮಗೆ ಇಷ್ಟವಾಗುವ ಮನೆಯಲ್ಲಿ ವಾಸಿಸುವುದಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ ಎನ್ನಬಹುದು. ಹಣವಿದ್ದರೆ ಮಾತ್ರ ಕನಸಿನ ಮನೆ ಸಿಗುವುದಿಲ್ಲ, ಮನಸ್ಸಿಗೆ ಇಷ್ಟವಾಗುವ ಜಾಗ ಸಿಗುವುದೂ ಮುಖ್ಯ ಎಂಬುದು ಅವರ ಮಾತಿನ ಸಾರ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ವಿದ್ಯಾ ಬಾಲನ್ ಇತ್ತೀಚಿನ ದಿನಗಳಲ್ಲಿ ‘ಜೈಲರ್ 2’ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಕಾಂತಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀಗಾಗಿ ಒಂದೆಡೆ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ವಿದ್ಯಾ, ಮತ್ತೊಂದೆಡೆ ತಮ್ಮ ಜೀವನಶೈಲಿಯ ಸರಳವಾದ ಆದರೆ ಕುತೂಹಲಕಾರಿ ಆಯ್ಕೆಗಳಿಂದಲೂ ಸುದ್ದಿಯಾಗುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಿಗ್ ಬಾಸ್'ನಲ್ಲಿ ಒಂದೇ ದಿನಕ್ಕೆ 15 ಲಕ್ಷ ರೂ. ಗಿಟ್ಟಿಸಿ ಹೊರನಡೆದ ವೈಲ್ಡ್ ಕಾರ್ಡ್ ಸ್ಪರ್ಧಿ! ಹೇಗೆ ಸಾಧ್ಯವಾಯ್ತು!?
ದಳಪತಿ ವಿಜಯ್, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರನ್ನೂ ಸೈಡ್ ಮಾಡಿ 'ನ್ಯೂ ರೆಕಾರ್ಡ್' ಸೃಷ್ಟಿಸಿದ ಶ್ರೀಲೀಲಾ!