ರಿಯಾಲಿಟಿ ಶೋ ವೇದಿಕೆಯಲ್ಲಿ ಹಾಡುತ್ತಲೇ ಅಸ್ವಸ್ಥಳಾದ ಗಾಯಕಿ

By Suvarna NewsFirst Published Mar 10, 2022, 6:21 PM IST
Highlights
  • ದಿ ಮಾಸ್ಕ್ಡ್ ಸಿಂಗರ್‌ನ ಸೀಸನ್ ಏಳರ ಪ್ರಥಮ ಪ್ರದರ್ಶನದಲ್ಲಿ ಘಟನೆ
  • ಫಾಕ್ಸ್ ಟೀವಿಯಲ್ಲಿ ಬರುವ ರಿಯಾಲಿಟಿ ಶೋ
  • ಕೆಮ್ಮುತ್ತಾ ಕುಸಿದ ಗಾಯಕಿ ಫೈರ್‌ಫ್ಲೈ 
     

ಫಾಕ್ಸ್ ಟೀವಿಯಲ್ಲಿ ಬರುವ ರಿಯಾಲಿಟಿ ಶೋ ದಿ ಮಾಸ್ಕ್ಡ್ ಸಿಂಗರ್‌ನ ಸೀಸನ್ ಏಳನೆಯ ಪ್ರಥಮ ಪ್ರದರ್ಶನದಲ್ಲಿ ಭಾಗವಹಿಸಿದ ಗಾಯಕಿಯೊಬ್ಬರಿಗೆ ಹಾಡು ಹಾಡುತ್ತಿದ್ದಂತೆ ವೇದಿಕೆಯಲ್ಲಿ  ಕೆಮ್ಮಲು ಶುರು ಮಾಡಿ ಉಸಿರುಗಟ್ಟಿದಂತಾಗಿದ್ದು, ಅಲ್ಲಿ ನೆರೆದಿದ್ದವರನ್ನೆಲ್ಲಾ ಆತಂಕಕ್ಕೀಡು ಮಾಡಿತ್ತು. ಸ್ಪರ್ಧೆಯ ಹೊಸ "ದಿ ಗುಡ್ ದಿ ಬ್ಯಾಡ್ ಅಂಡ್ ದಿ ಕಡ್ಲಿ" ಫಾರ್ಮ್ಯಾಟ್‌ನಲ್ಲಿ "ಟೀಮ್ ಗುಡ್" ಅನ್ನು ಪ್ರತಿನಿಧಿಸಲು ಹೊಳೆಯುವ ಕೀಟದ ವೇಷಭೂಷಣವನ್ನು ಈ ಗಾಯಕಿ ಫೈರ್‌ಫ್ಲೈ ಹಾಕಿದ್ದರು.

ಅವರು  ಚಾಕಾ ಖಾನ್ (Chaka Khan) ಅವರ 'ಯಾರೂ ಅಲ್ಲ' ಎಂಬ ಹಾಡನ್ನು ಹಾಡಲು ವೇದಿಕೆಯನ್ನು ಏರಿದರು. ಆದರೆ ಹಾಡನ್ನು ಹಾಡಲು ಶುರು ಮಾಡಿದ ಕೆಲವು ಸೆಕೆಂಡುಗಳಲ್ಲಿ, ಅವರು ಕೆಮ್ಮಲು ಪ್ರಾರಂಭಿಸಿದರು ಮತ್ತು ಅವರಿಗೆ ಉಸಿರುಗಟ್ಟಿಸಿದಂತಾಗಿದೆ. ಇದನ್ನು ಗಮನಿಸಿದ ಕಾರ್ಯಕ್ರಮದ ತೀರ್ಪುಗಾರರು ವೈದ್ಯಕೀಯ ನೆರವು ಪಡೆಯಲು ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಗಾಯಕಿ ಫೈರ್‌ಫ್ಲೈಗೆ ತೊಂದರೆಯಾಗಿದೆ ಎಂಬುದು ಗಮನಕ್ಕೆ ಬರುತ್ತಿದ್ದಂತೆ ತೀರ್ಪುಗಾರರಾದ ಕೆನ್ ಜಿಯಾಂಗ್ (Ken Jeong), ಜೆನ್ನಿ ಮೆಕಾರ್ಥಿ(Jenny McCarthy), ನಿಕೋಲ್ ಶೆರ್ಜಿಂಜರ್ (Nicole Scherzinger) ಮತ್ತು ರಾಬಿನ್ ಥಿಕ್ (Robin Thicke) ಅವರೆಲ್ಲರೂ ಫೈರ್ ಫ್ಲೈಗೆ ಸಹಾಯ ಮಾಡಲು  ಬಂದರು.

Sending our love to . 🙏 pic.twitter.com/3h5lGXkNYD

— The Masked Singer (@MaskedSingerFOX)

Latest Videos

 

ಅವಳಿಗೆ ಉಸಿರುಗಟ್ಟುತ್ತಿದೆ. ವೈದ್ಯರನ್ನು ಕರೆಸಿ ಎಂದು  ವೈದ್ಯ ಜಿಯಾಂಗ್ ಹೇಳುತ್ತಿರುವುದು  ವಿಡಿಯೋದಲ್ಲಿ ಕಾಣಿಸುತ್ತಿದೆ. ನಂತರ ಆಕೆ ಧರಿಸಿದ್ದ ಮುಖವಾಡವನ್ನು ತೆಗೆದು ಹಾಕಿದ ಕಾರ್ಯಕ್ರಮದ ಸಿಬ್ಬಂದಿ ವೇದಿಕೆಯಿಂದ ಆಕೆಯನ್ನು ಕೆಳಗಿಳಿಸಿದರು ಮತ್ತು ವೈದ್ಯಕೀಯ ಅಧಿಕಾರಿ ಬಂದು ಆಕೆಗೆ ಚಿಕಿತ್ಸೆ ನೀಡಿದರು. ಕಾರ್ಯಕ್ರಮ ನಿರೂಪಕ ನಿಕ್ ಕ್ಯಾನನ್ (Nick Cannon) ಅವರು ಘಟನೆಯ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡಿದರು.

ಬೀದಿ ಬದಿಯ ಪ್ರತಿಭೆ... ಮಧುರ ಕಂಠಕ್ಕೆ ಮನಸೋತ ಜನ..ವಿಡಿಯೋ ವೈರಲ್‌

ಹೀಗಾಗಿ ಫೈರ್‌ಫ್ಲೈ ವಿರಾಮಕ್ಕೂ ಮೊದಲೇ ತನ್ನ ಪ್ರದರ್ಶನವನ್ನು ಇದ್ದಕ್ಕಿದ್ದಂತೆ ನಿಲ್ಲಿಸಬೇಕಾಯಿತು. ಅವಳು ಇದೀಗ ತೆರೆಮರೆಯಲ್ಲಿದ್ದು, ನಮ್ಮ ಸೆಟ್‌ನ ವೈದ್ಯರು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಯೋಗಕ್ಷೇಮ ನಮ್ಮ ಮೊದಲ ಆದ್ಯತೆಯಾಗಿದೆ. ಆದರೆ ಇದೀಗ, ಪ್ರದರ್ಶನವು ಮುಂದುವರಿಯಬೇಕು ಎಂದು ಕ್ಯಾನನ್ ಹೇಳಿದರು. ಅದರ ನಂತರ, ಕ್ಯಾನನ್ ಮುಂದಿನ ಗಾಯಕನನ್ನು ಪರಿಚಯಿಸಿದರು ಮತ್ತು ಫೈರ್‌ಫ್ಲೈ ಅವರ ಆರೋಗ್ಯದ ಬಗ್ಗೆ ವಿವರ ನೀಡಿದರು. ಇದಾಗಿ ಸ್ವಲ್ಪ ಹೊತ್ತಿನ ನಂತರ ಹುಷಾರಾಗಿ ಮತ್ತೆ ವೇದಿಕೆಗೆ ಬಂದ ಫೈರ್ ಫ್ಲೈಗೆ ತಮ್ಮ ಗಾಯನವನ್ನು ಪೂರ್ಣಗೊಳಿಸಿದರು. ತೀರ್ಪುಗಾರರಾದ ಥಿಕ್, ಮೆಕ್‌ಕಾರ್ಥಿ ಮತ್ತು ಜಿಯಾಂಗ್ ಆಕೆಯ ಹಾಡಿನ ನಂತರ ಎದ್ದು ನಿಂತು ಚಪ್ಪಾಳೆ ತಟ್ಟಿದರು. ನಾನು ಸಂಪೂರ್ಣ ಹಾಡನ್ನು ಹಾಡಿದೆ ಮತ್ತು ಕೊನೆಯಲ್ಲಿ ನನಗೆ ನನ್ನ ಪಾದದ ಕೆಳಗೆ ಯಾವುದೇ ವೇದಿಕೆಯಿಲ್ಲ ಎಂದು ಅನಿಸಿತು ಎಂದು ಗಾಯಕಿ ಹೇಳಿದರು.

ಕೆಲಸ ಹುಡುಕಿ ಬಂದಾತನಿಗೆ ತಮ್ಮನ ಸ್ಥಾನ, 27 ವರ್ಷ ಲತಾ ದೀದೀ ಸೇವೆ ಮಾಡಿದ ರಾಥೋಡ್‌ ಕಣ್ಣೀರು
ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳಿಂದ ಅನೇಕ ಪ್ರತಿಭಾವಂತ ಮಕ್ಕಳು ಮತ್ತು ಯುವ ಪ್ರತಿಭಾವಂತರು ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ 'ಎದೆತುಂಬಿ ಹಾಡುವೆನು' ಅಂತಹ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಅನೇಕ ಪ್ರತಿಭೆಗಳು ಇಂದು ಗಾಯಕ-ಗಾಯಕಿಯರಾಗಿ ಸಿನಿಮಾ ರಂಗಗಳಲ್ಲಿ ಮಿಂಚುತ್ತಿದ್ದಾರೆ. ಖಾಸಗಿ ವಾಹಿನಿಗಳು ಇಂದು ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶನ ಮಾಡಲು ಒಂದು ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

click me!