ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನ| 2018ರಲ್ಲಿ ಅಪರೂಪದ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದ ಇರ್ಫಾನ್| ಸೋಮವಾರಷ್ಟೇ ಕರುಳಿನ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಟ
ಮುಂಬೈ(ಏ.29): ಕರುಳಿನ ಸೋಂಕು ಕಾಣಿಸಿಕೊಂಡು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್(54) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕೊಲೊನ್ ಇನ್‌ಫೆಕ್ಷನ್(ಕರುಳಿನ ಸೋಂಕು)ನಿಂದಾಗಿ ಕೋಕಿಲಬೆನ್ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
T 3516 - .. just getting news of the passing of Irfaan Khan .. this is a most disturbing and sad news .. 🙏
An incredible talent .. a gracious colleague .. a prolific contributor to the World of Cinema .. left us too soon .. creating a huge vacuum ..
Prayers and duas 🙏
ನಾನ್ ಹೆಂಡತಿಗೋಸ್ಕರನಾದ್ರೂ ಬದುಕಬೇಕು: ಇರ್ಫಾನ್ ಖಾನ್
ಮೂರು ದಿನದ ಹಿಂದಷ್ಟೇ ತಾಯಿ ನಿಧನ
ಮೂರು ದಿನಗಳ ಹಿಂದಷ್ಟೇ ಜೈಪುರದಲ್ಲಿ ಇರ್ಫಾನ್ ತಾಯಿ ಸಯೀದಾ ಬೇಗಂ (95) ನಿಧನರಾಗಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರು ಅಂತ್ಯಕ್ರಿಯೆಗೆ ಹೋಗಿರಲಿಲ್ಲ. ಈ ವಿಚಾರದಿಂದ ಇರ್ಫಾನ್ ಬಹಳಷ್ಟು ನೊಂದಿದ್ದರು.
ಇನ್ನು 2018ರಲ್ಲಿ ನ್ಯೂರೋಎಂಡೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ಗೆ ತುತ್ತಾಗಿದ್ದರು ಈ ಕುರಿತು ಖುದ್ದು ನಟ ಇರ್ಫಾನ್ ಖಾನ್ ಮಾಹಿತಿ ನೀಡಿದ್ದರು. ಈ ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ವಿದೇಶಕ್ಕೂ ಕೂಡ ಹೋಗಿದ್ದರು. ಹೀಗಾಗಿ ಸುಮಾರು ಒಂದು ವರ್ಷದಿಂದ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರು. ಚಿಕಿತ್ಸೆ ಬಳಿಕ ಇದನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದ ಇರ್ಫಾನ್ ಭಾರತಕ್ಕೆ ಮರಳಿ ಸಿನಿಮಾದತ್ತ ಮುಖ ಮಾಡಿದ್ದರು..
ಭಯ, ಆಘಾತ ನನ್ನನ್ನು ಆಳಲಾರವು: ಎಮೋಶನಲ್ ಇರ್ಫಾನ್..!
ಆರಂಭದಲ್ಲಿ ಚಾಣಕ್ಯ, ಬನೇಗಿ ಅಪ್ನಿ ಬಾತ್, ಭಾರತ್ ಏಕ್ ಕೋಜ್ ಮತ್ತು ಚಂದ್ರಕಾಂತ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಇರ್ಫಾನ್ ಖಾನ್ ಬಳಿಕ ಸಿನಿಮಾದತ್ತ ಮುಖ ಮಾಡಿದ್ದರು. ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ಲೈಫ್ ಆಫ್ ಪೈ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು ಅಂಗ್ರೇಜಿ ಮೀಡಿಯಂ ಅವರ ಕೊನೆಯ ಸಿನಿಮಾವಾಗಿತ್ತು.