ನಟ ಕಮಲ್ ಹಾಸನ್‌ಗೆ ಭಾರೀ ಹಿನ್ನಡೆ; ತುರ್ತು ವಿಚಾರಣೆಗೆ ನಕಾರ, ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್!

Published : Jun 09, 2025, 11:46 AM IST
Kamal Haasan

ಸಾರಾಂಶ

ಸುಪ್ರಿಂ ಕೋರ್ಟ್‌ನಲ್ಲಿ ನಟ ಕಮಲ್ ಹಾಸನ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕಾರಣ, ಅವರ ಪರವಾದ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾ ಮಾಡಿದ್ದು, ನಿಮ್ಮದೇನಿದ್ದರೂ ಹೈ ಕೋರ್ಟ್‌ನಲ್ಲಿ ನೋಡಿಕೊಳ್ಳಿ' ಎಂದು ತಾಕೀತು ಮಾಡಿದೆ. 'ನಿಮ್ಮ ಕೇಸ್‌ಅನ್ನು ತ್ವರಿತವಾಗಿ ವಿಚಾರಣೆ ಮಾಡಲು ಸಾಧ್ಯವಿಲ್ಲ' ಎಂದು ಹೇಳಿ

ತಮಿಳು ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಅವಹೇಳನ ಮಾಡಿ, ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದಿರುವುದು ಬಹುತೇಕ ಎಲ್ಲರಿಗೂ ಗೊತ್ತಿರೋ ಸಂಗತಿ. ಕ್ಷಮೆ ಕೇಳದ ಕಮಲ್ ಹಾಸನ್‌ ಅವರಿಗೆ, ಕರ್ನಾಟಕದ ಕನ್ನಡಪರ ಸಂಘಟನೆಗಳು ಹಾಗೂ ಫಿಲಂ ಚೇಂಬರ್ ಇಲ್ಲಿ ಅವರ ನಿರ್ಮಾಣ ಹಾಗೂ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕಡಿವಾಣ ಹಾಕಿತ್ತು. ಕನ್ನಡಿಗರ ಈ ನಿರ್ಧಾರದ ಪರ ನಟ-ನಿರ್ಮಾಪಕ ಕಮಲ್ ಹಾಸನ್ಅವರು ಸುಪ್ರಿಂ ಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಆದರೆ, ಅಲ್ಲಿಘ ಅವರು ಹಿನ್ನಡೆ ಅನುಭವಿಸಿದ್ದಾರೆ.

ಹೌದು, ಸುಪ್ರಿಂ ಕೋರ್ಟ್‌ನಲ್ಲಿ ನಟ ಕಮಲ್ ಹಾಸನ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕಾರಣ, ಅವರ ಪರವಾದ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾ ಮಾಡಿದ್ದು, ನಿಮ್ಮದೇನಿದ್ದರೂ ಹೈ ಕೋರ್ಟ್‌ನಲ್ಲಿ ನೋಡಿಕೊಳ್ಳಿ' ಎಂದು ತಾಕೀತು ಮಾಡಿದೆ. ಕಮಲ್ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್, 'ನಿಮ್ಮ ಕೇಸ್‌ಅನ್ನು ತ್ವರಿತವಾಗಿ ವಿಚಾರಣೆ ಮಾಡಲು ಸಾಧ್ಯವಿಲ್ಲ' ಎಂದು ಹೇಳಿ ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ತುರ್ತು ವಿಚಾರಣೆ ಗೆ ನಿರಾಕರಿಸಿದ್ದಾರೆ.

ಚಿತ್ರಮಂದಿರಗಳ ಮಾಲೀಕರ ಸಂಘ 'ಸುಪ್ರೀಂ ಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ಇದೀಗ ಸುಪ್ರಿಂ ಕೋರ್ಟ್ 'ನೀವು ನಿಮ್ಮದೇನಿದ್ದರೂ ಅಲ್ಲಿಯೇ ನೋಡಿಕೊಳ್ಳಿ.. 'ಕರ್ನಾಟಕ ಹೈಕೋರ್ಟ್'ಗೆ ಹೋಗಿ ಎಂದಿದೆ. ಕಮಲ್ ಹಾಸನ್ ಅವರ ಪರವಾಗಿ 'ಥಗ್ ಲೈಫ್ ಚಿತ್ರದ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಬೆದರಿಕೆಗಳು ಬರುತ್ತಿವೆ' ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಹಾಗೇ, 'ತುರ್ತು ವಿಚಾರಣೆ ಮಾಡುವಂತೆ ಕೋರಲಾಗಿತ್ತು' ಆದರೆ ಈಗ ಎಲ್ಲವೂ ಅವರಿಗೇ ಉಲ್ಟಾ ಹೊಡೆದಿದೆ.

ಸುಪ್ರಿಂ ಕೋರ್ಟ್ ಇದೀಗ 'ಅರ್ಜಿದಾರರು ಹೈಕೋರ್ಟ್‌ಗೆ ಹೋಗಿ' ಎಂದು ಸೂಚಿಸಿದ್ದು, ಮುಂದಿನ ಹೆಜ್ಜೆ ಏನಿರಬಹದು ಎಂಬ ಕುತೂಹಲ ಮೂಡಿದೆ. ಕಾರಣ, ಕಮಲ್ ಹಾಸನ್ ನಟನೆ-ನಿರ್ಮಾಣದ 'ಥಗ್ ಲೈಫ್' ಸಿನಿಮಾ ತಮಿಳುನಾಡು ಸೇರಿದಂತೆ, ಬಿಡುಗಡೆಯಾಗಿರುವ ಎಲ್ಲಾ ಕಡೆ ನೀರಸ ಪ್ರದರ್ಶನ ಕಾಣುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂರು ದಿನದ ಕಲೆಕ್ಷನ್ ಕೇವಲ 30 ಕೋಟಿ ಆಸುಪಾಸಿನಲ್ಲಿ ಓಡಾಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

ಭಾಷಾ ವಿವಾದಗಳು ಮತ್ತು ಹಲವಾರು ಪ್ರತಿಭಟನೆಗಳ ನಂತರ, ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರ ಜೂನ್ 5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವು ತನ್ನ ಮೊದಲ ದಿನ 15.5 ಕೋಟಿ ಗಳಿಸಿತು, ಇದನ್ನು ವ್ಯಾಪಾರ ತಜ್ಞರು ಉತ್ತಮ ಎಂದು ಪರಿಗಣಿಸಿದ್ದಾರೆ. ಆದರೆ, ಎರಡನೇ ದಿನ ಚಿತ್ರದ ಗಳಿಕೆ ಅರ್ಧಕ್ಕೆ ಇಳಿದು ಕೇವಲ 7.15 ಕೋಟಿ ಗಳಿಸಿತು. ಬಿಡುಗಡೆಯ ಮೂರನೇ ದಿನ ಚಿತ್ರ 7.50 ಕೋಟಿ ಗಳಿಸಿದೆ. ಹೀಗೆ ಚಿತ್ರ ಮೂರು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 30.15 ಕೋಟಿ ವ್ಯವಹಾರ ಮಾಡಿದೆ.

ಕಮಲ್ ಹಾಸನ್ ಅವರ ಥಗ್ ಲೈಫ್ 250-300 ಕೋಟಿ ಬಜೆಟ್‌ನಲ್ಲಿ ನಿರ್ಮಾಣ:

ನಿರ್ದೇಶಕ ಮಣಿರತ್ನಂ ಹಾಗೂ ನಟ ಕಮಲ್ ಹಾಸನ್ ಸೇರಿದಂತೆ ಒಂದು 5-6 ಜನರ ಟೀಮ್ 'ಥಗ್ ಲೈಫ್' ಸಿನಿಮಾವನ್ನು 250-300 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ. ಚಿತ್ರದ ಗಳಿಕೆಯ ವೇಗವನ್ನು ಪರಿಗಣಿಸಿ, ಅದರ ವೆಚ್ಚವನ್ನು ಮರುಪಡೆಯುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತಿದೆ. ಕಮಲ್ ಹಾಸನ್ ಮತ್ತು ಮಣಿರತ್ನಂ ಸುಮಾರು 38 ವರ್ಷಗಳ ನಂತರ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರು ಕೊನೆಯದಾಗಿ ನಾಯಕನ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಥಗ್ ಲೈಫ್ ಒಂದು ಗ್ಯಾಂಗ್‌ಸ್ಟರ್ ಚಿತ್ರವಾಗಿದ್ದು, ಕಮಲ್ ಹಾಸನ್ ಜೊತೆಗೆ ಸಿಲಂಬರಸನ್, ತ್ರಿಷಾ ಕೃಷ್ಣನ್, ಜೋಜು ಜಾರ್ಜ್, ಅಶೋಕ್ ಸೆಲ್ವನ್, ಅಭಿರಾಮಿ, ಮಹೇಶ್ ಮಂಜ್ರೇಕರ್, ಅಲಿ ಫಜಲ್ ಮತ್ತು ನಾಸರ್ ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ವರದಿಗಳ ಪ್ರಕಾರ, ಚಿತ್ರ ಬಿಡುಗಡೆಯಾದಾಗ ಭಾರೀ ಟೀಕೆಗೆ ಗುರಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಚಿತ್ರವನ್ನು ಡಿಸಾಸ್ಟರ್ ಎಂದು ಕರೆದರು. ಇಷ್ಟೇ ಅಲ್ಲ, ಮಣಿರತ್ನಂ ಅವರಂತಹ ನಿರ್ದೇಶಕರನ್ನೂ ಭಾರೀ ಟೀಕಿಸಲಾಯಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!