ಸೋನಿಯಾ ಗಾಂಧಿ ಮೊಟ್ಟಮೊದಲು ಭಾರತಕ್ಕೆ ಬಂದಾಗ ಕರೆತರಲು ಹೋಗಿದ್ದ ರಾಜೀವ್ ಗಾಂಧಿ ಜೊತೆಗೆ ಇದ್ದ ಅಮಿತ್ ಯಾರು?

Published : Nov 18, 2026, 10:32 PM IST
Soniya Gandhi Rajiv Gandhi

ಸಾರಾಂಶ

13 ಜನವರಿ 1968, ಮುಂಜಾನೆ 5-15ಕ್ಕೆ, ಮೊಟ್ಟಮೊದಲ ಬಾರಿಗೆ ರಾಜೀವ್ ಗಾಂಧಿ ಕುಟುಂಬದ ಮನೆಗೆ ಬಂದಿದ್ದರು ಸೋನಿಯಾ. ಅಂದು ಅವರನ್ನು ಸ್ವಾಗತಿಸಿ, ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ರಾಜೀವ್ ಗಾಂಧಿ ಅವರೊಂದಿಗೆ ಸಂಜಯ್ ಗಾಗೂ ಅಮಿತ್ ಇದ್ದರು. ಯಾರು ಈ ಅಮಿತ್? ನೋಡಿ ಈ ಸ್ಟೋರಿ..

ಮೊದಲು ಭಾರತಕ್ಕೆ ಬಂದ ಸೋನಿಯಾ ಅವರನ್ನು ಸ್ವಾಗತಿಸಿ, ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ರಾಜೀವ್ ಗಾಂಧಿ ಅವರೊಂದಿಗೆ ಸಂಜಯ್ ಗಾಗೂ ಅಮಿತ್ ಇದ್ದರು. ಯಾರು ಈ ಅಮಿತ್?

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ನೂತನ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕ ಭಾರತದಲ್ಲೂ ಬಿಡುಗಡೆ ಆಗಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದರಲ್ಲಿ ಸೋನಿಯಾ ಗಾಂಧಿ ಇಟಲಿಯಿಂದ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಬಂದಾಗ, ದೆಹಲಿ ಏರ್‌ಪೋರ್ಟ್‌ನಲ್ಲಿ ಅವರನ್ನು ಬರಮಾಡಿಕೊಳ್ಳಲು ಯಾರೆಲ್ಲಾ ಬಂದಿದ್ದರು ಎಂಬುದನ್ನು ಬರೆಯಲಾಗಿದೆ. ಅದನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಗರೊಬ್ಬರು ಬರೆದಿದ್ದು ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.

ಹಾಗಿದ್ದರೆ ಸೋನಿಯಾ ಗಾಂಧಿ ಅವರನ್ನು ಬರಮಾಡಿಕೊಳ್ಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಸ್ವತಃ ರಾಜೀವ್ ಗಾಂಧಿ ಅವರೊಂದಿಗೆ ಯಾರೆಲ್ಲಾ ಹೋಗಿದ್ದರು?

ರಾಜೀವ್ ಗಾಂಧಿಯವರು (Rajiv Gandhi) ಇಟಲಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿಯೇ ಓದುತ್ತಿದ್ದ ಇಟಲಿಯ ಸೋನಿಯಾ ಅವರನ್ನು ಪ್ರೀತಿಸುತ್ತಿದ್ದರು. ಬಳಿಕ, ಅವರಿಬ್ಬರೂ ಮದುವೆಯಾಗಿ ಭಾರತಕ್ಕೆ ಖಾಯಂ ಆಗಿ ನೆಲೆಸಿದ್ದು, ಅವರಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಎಂಬ ಮಕ್ಕಳು ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಭಾರತದ ರಾಜೀವ್ ಗಾಂಧಿ ಅವರನ್ನು ಲವ್ ಮಾಡಿ, ಮೊಟ್ಟಮೊದಲ ಬಾರಿಗೆ ಅಂದು (13 ಜನವರಿ 1968, ಮುಂಜಾನೆ 5-15ಕ್ಕೆ) ರಾಜೀವ್ ಗಾಂಧಿ ಅಮ್ಮ ಇಂದಿರಾ ಗಾಂದಿ ಅವರನ್ನು ಭೇಟಿಯಾಗಲು ಗಾಂಧಿ ಕುಟುಂಬದ ಮನೆಗೆ ಬಂದಿದ್ದರು ಸೋನಿಯಾ. ಅಂದು ಅವರನ್ನು ಸ್ವಾಗತಿಸಿ, ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಸೋನಿಯಾರ ಪ್ರಿಯತಮ, ಅಂದರೆ ರಾಜೀವ್ ಗಾಂಧಿ ಅವರೊಂದಿಗೆ ಅವರ 'ಸಹೋದರ ಸಂಜಯ್ ಹಾಗೂ ಅಮಿತ್' ಎಂಬವರು ಬಂದಿದ್ದರು ಎಂದು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನಲ್ಲಿ ಬರೆಯಲಾಗಿದೆ.

ಸೋನಿಯಾ ಗಾಂಧಿ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆ

ವೈರಲ್ ಆಗಿರುವ ಸುದ್ದಿಯ ಪ್ರಕಾರ, ಸೋನಿಯಾ ಗಾಂಧಿ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆಯಲ್ಲಿ ಬರೆದಂತೆ, ಅಂದು ರಾಜೀವ್ ಅವರೊಂದಿಗೆ ಬಂದಿರುವ ಅಮಿತ್ ಎಂಬವರು ಯಾರು? ಈ ಬಗ್ಗೆ ನೀವೇನಾದರೂ ಊಹೆ ಮಾಡಬಲ್ಲಿರಾ?

ಈ ಸುದ್ದಿಯನ್ನು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್‌ ಮೂಲಕ ವೈರಲ್ ಮಾಡಿರುವ ಓದುಗರೊಬ್ಬರು, 'ಇದೊಂದು ತಮಗೆ ತುಂಬಾ ತಮಾಷೆಯ ಸಂಗತಿ ಎಂದೆನಿಸಿತು' ಎಂದು ಹೇಳಿದ್ದು, ಆ ಅಮಿತ್ ಎಂಬವರು ರಾಜೀವ್ ಗಾಂಧಿ ಅವರ ಯಾರೋ ಒಬ್ಬರು ಸ್ನೇಹಿತ ಅಲ್ಲ, ಬದಲಿಗೆ ಆ ಅಮಿತ್ ಎಂಬವರು ಅಮಿತಾಭ್ ಬಚ್ಚನ್ ಆಗಿದ್ದಾರೆ ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಕಾರಣ, ಸೋನಿಯಾ ಗಾಂಧಿ ಬರೆದ ಪುಸ್ತಕದಲ್ಲಿ ದಾಖಲಾಗಿರುವಂತೆ, ಅಮಿತ್ ಎಂಬವರು ರಾಜೀವ್ ಗಾಂಧಿ ಮನೆಯಿರುವ ಅದೇ ರಸ್ತೆಯಲ್ಲಿರುವ ಮನೆ, ಹಿಂದಿಯ ಪ್ರಸಿದ್ಧ ಕವಿ (ಅಮಿತಾಭ್ ಬಚ್ಚನ್ ತಂದೆ) ಹರಿವಂಶರಾಯ್ ಬಚ್ಚನ್ ಅವರ ಮಗ. ಅಂದರೆ, ನಿಸ್ಸಂದೇಹವಾಗಿ ಅವರು ಬೇರೆ ಯಾರೂ ಅಲ್ಲ, ಸ್ವತಃ ಇಂದು ಬಾಲಿವುಡ್ ಸ್ಟಾರ್ ನಟರಾಗಿರುವ ಬಿಗ್ ಬಿ ಅಮಿತಾಭ್ ಬಚ್ಚನ್!

ಹೌದು, ಇತಿಹಾಸದಲ್ಲಿ ಹಾಗೂ ಹಾಗೂ ಹಲವು ಬರಹಗಳಲ್ಲಿ, ದೆಹಲಿಯಲ್ಲಿ ನೆರೆಹೊರೆಯವರಾಗಿದ್ದ ಅಮಿತಾಭ್ ಬಚ್ಚನ್ ಅವರ ತಂದೆ ಹರಿವಂಶರಾಯ್ ಬಚ್ಚನ್ ಅವರಿಗೂ ನೆಹರೂ ಕುಟುಂಬಕ್ಕೂ ತುಂಬಾ ಆತ್ಮೀಯತೆ ಇತ್ತು ಎಂಬುದು ಉಲ್ಲೇಖವಾಗಿದೆ. ಅದೇ ಕಾರಣಕ್ಕೆ ರಾಜೀವ್ ಗಾಂಧಿಗೂ ಅಮಿತಾಭ್ ಬಚ್ಚನ್‌ಗೂ ಬಾಲ್ಯದಲ್ಲಿ ಗಾಢವಾದ ಸ್ನೇಹ ಇತ್ತು ಎನ್ನಲಾಗಿದೆ. ಆದ್ದರಿಂದಲೇ ರಾಜೀವ್ ಗಾಂಧಿಯವರು ಮೊಟ್ಟಮೊದಲು ತಮ್ಮ ಪ್ರಿಯತಮೆ ಸೋನಿಯಾ ಗಾಂಧಿಯವರು ಭಾರತದ ತಮ್ಮ ಮನೆಗೆ ಆಗಮಿಸುವ ಸಮಯದಲ್ಲಿ ತಮ್ಮ ಸಹೋದರ ಹಾಗೂ ಅಮಿತಾಭ್ ಬಚ್ಚನ್ ಅವರನ್ನೂ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಅವರು ಅಮಿತಾಭ್ ಬಚ್ಚನ್ ಮನೆಯ ದಾರಿಯಲ್ಲೇ (ಹರಿವಂಶರಾಯ್ ಬಚ್ಚನ್) ರಾಜೀವ್ ಗಾಂಧಿಯವರ ಮನೆಗೆ ಬಂದಿದ್ದಾರೆ.

ಹೀಗೆ, ರಾಜೀವ ಗಾಂಧಿಯವರು ಸೋನಿಯಾ ಅವರನ್ನು ಮೊಟ್ಟಮೊದಲು ಭಾರತದ ತಮ್ಮ ಮನೆಗೆ ಆಹ್ವಾನಿಸಿ, ಕುಟುಂಬಕ್ಕೆ ಪರಿಚಯಿಸುವ ಸಮಯದಲ್ಲಿ ಅವರೊಂದಿಗೆ ಅವರೊಂದಿಗೆ ಅಮಿತಾಭ್ ಬಚ್ಚನ್ ಇದ್ದರು ಎಂಬ ವಿಷಯವೀಗ ಸಖತ್ ವೈರಲ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮುಂದಿನ ಅಧ್ಯಕ್ಷ ಮಹಿಳೆಯೇ ಆಗಬೇಕು: ಕವಿತಾ ಲಂಕೇಶ್‌ಗೆ ಬೆಂಬಲ ನೀಡಿದ ರಮ್ಯಾ
'ಮತ್ತೊಮ್ಮೆ ಹುಟ್ಟಿದರೂ..' ನಯನತಾರಾಗೆ ಪತಿ ಬರೆದ ರೊಮ್ಯಾಂಟಿಕ್ ಸಾಲುಗಳು ವೈರಲ್! ಬೆನ್ನಲ್ಲೇ ಕಾಮೆಂಟ್ ಆಫ್ ಮಾಡಿ ಅಚ್ಚರಿ