
ಟಾಲಿವುಡ್ ಚಿತ್ರರಂಗದ ಅಕ್ಕಿನೇನಿ (Akkineni) ಕುಟುಂಬದ ಬಗ್ಗೆ ಬಹುತೇಕರಿಗೆ ಗೊತ್ತು. ಈ ಕುಟುಂಬದಲ್ಲಿ ನಟರಾಗಿ ಎಂಟ್ರಿ ಕೊಟ್ಟಿರುವುದು ಅಕ್ಕಿನೇನಿ ನಾಗೇಶ್ವರ ರಾವ್ ಅವರು ಮೊದಲಿಗರು. ಅವರ ಬಳಿಕ ಅವರ ಮಗನಾದ ನಾಗಾರ್ಜುನ ಅವರು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಮಿಂಚಿದ್ದಾರೆ. ಇದೀಗ ನಾಗಾರ್ಜುನ ಅವರು ಚಿತ್ರರಂಗದಲ್ಲಿ ಚಾಲ್ತಿಯಲ್ಲಿ ಇರುವಂತೆಯೇ ಅವರ ಮಕ್ಕಳಾದ ನಾಗ ಚೈತನ್ಯ ಹಾಗೂ ಅಖಿಲ್ (Akhil Akkineni) ಅವರುಗಳು ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಗ ಚೈತನ್ಯ ಅವರು ನಟಿ ಸಮಂತಾ ಅವರನ್ನು ಲವ್ ಮಾಡಿ ಮದುವೆ ಆಗಿದ್ದು, ಬಳಿಕ ಸಂಸಾರ ಸಾಗಿಸಲು ಸಾಧ್ಯವಾಗದೇ ಡಿವೋರ್ಸ್ ಮಾಡಿದ್ದು ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ.
ಇತ್ತೀಚೆಗೆ ನಾಗ ಚೈತನ್ಯ (Nagachaitnaya) ಅವರು ಮತ್ತೊಬ್ಬರು ಟಾಲಿವುಡ್ ನಟಿ ಶೋಭಿತಾ ದುಲಿಪಾಲ ಅವರನ್ನು ಮದುವೆಯಾಗಿ ಸದ್ಯಕ್ಕೆ ಈ ಇಬ್ಬರೂ ಸಂಸಾರ ಮಾಡಿಕೊಂಡಿದ್ದು ಕೂಡ ಹಲವರಿಗೆ ಗೊತ್ತು. ಈಗ ಹೇಳಬೇಕಾಗಿರುವ ವಿಷಯ ಏನಪ್ಪಾ ಅಂದ್ರೆ, ನಾಗ ಚೈತನ್ಯ ಸಹೋದರ ಅಕ್ಕಿನೇನಿ ಅಖಿಲ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇನ್ನೂ ಕೂಡ ಒಂದು ಕಾಲದಲ್ಲಿ ಅತ್ತಿಗೆಯಾಗಿದ್ದ ಸಮಂತಾರ ಫೋಟೋ ಇದೆ. ಅದನ್ನು ಅವರಿನ್ನೂ ತೆಗೆದೇ ಇಲ್ಲ. ಇದು ನಿಜವಾಗಿಯೂ ಅಚ್ಚರಿಯ ಸಂಗತಿ, ಕೆಲವರಿಗೆ ಶಾಕಿಂಗ್ ಸಂಗತಿ ಕೂಡ ಆಗಿರಬಹುದು.
ಅಖಿಲ್ ಅಕ್ಕಿನೇನಿ ಅವರು ತಮ್ಮ ಅಣ್ಣ ನಾಗ ಚೈತನ್ಯ ಅವರಿಗೆ ಡಿವೋರ್ಸ್ ಕೊಟ್ಟು ಸಪರೇಟ್ ಆಗಿರುವ ಸಮಂತಾರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಟ್ಟುಕೊಳ್ಳಲೇಬಾರದು ಎಂಬ ನಿಯಮವೇನೂ ಇಲ್ಲ. ಅಂತಹ ನಿಯಮ ಭಾರತದಲ್ಲಂತೂ ಖಂಡಿತ ಇಲ್ಲ. ಆದರೆ, ಸಾಮಾನ್ಯವಾಗಿ ತಮ್ಮತಮ್ಮ ಕುಟುಂಬಗಳಲ್ಲಿ ಡಿವೋರ್ಸ್ ಆದಾಗ, ಎಲ್ಲರೂ ಮುಗಿದ ಹೋದ ಸಂಬಂಧದ ವ್ಯಕ್ತಿಯ ಫೋಟೋವನ್ನು ತಮ್ಮ ಅಧಿಕೃತ ಖಾತೆಯಿಂದ ಡಿಲೀಟ್ ಮಾಡುತ್ತಾರೆ. ಆದರೆ, ಅಖಿಲ್ ಅಕ್ಕಿನೇನಿ ಇನ್ನೂ 2 ಫೋಟೋವನ್ನು ಹಾಗೇ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
ಅದೇನೂ ಘೋರ ಅಪರಾಧವಲ್ಲ. ಆದರೆ, ಹಲವರಿಗೆ ಖಂಡಿತ ಅಚ್ಚರಿ ಆಗುವುದಂತೂ ಖಂಡಿತ.. ಈ ಸುದ್ದಿ ಹಬ್ಬಿದ ಬಳಿಕ ಅಕ್ಕಿನೇನಿ ಅಖಿಲ್ ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಹೊರಹಾಕಲೂಬಹುದು. ಆದರೆ, ನಟಿ ಸಮಂತಾ ಅವರು ಇದೀಗ ಹೊಸ ಸಂಬಂಧದಲ್ಲಿ ಬಿದ್ದಿದ್ದಾರಾ? ಹೌದೆನ್ನುತ್ತಿವೆ ಮೂಲಗಳು. ಈಗಾಗಲೇ ಮದುವೆಯಾಗಿ ತೆಲುಗು ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆ ನಟಿ ಸಮಂತಾ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಆದರೆ, ತಮ್ಮಿಬ್ಬರ ಸಂಬಂಧದ ಬಗ್ಗೆ ಸಮಂತಾ ಆಗಲೀ ರಾಜ್ ನಿಡಿಮೋರ್ ಆಗಲೀ ಅಧೀಕೃತ ಎಂಬಂತೆ ಏನನ್ನೂ ಹೇಳಿಲ್ಲ. ಆದರೆ, ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸಮಂತಾ ಹಾಗೂ ರಾಜ್ ಸಂಬಂಧದಲ್ಲಿ ಇರೋದು ಹೌದು ಎನ್ನಲಾಗುತ್ತಿದೆ. ಅದೇನೇ ಇದ್ದರೂ, ಯಾವುದನ್ನು ಕೂಡ ಸಾಕ್ಷಿ ಇಲ್ಲದೇ ಹಾಗೇ ಅಥವಾ ಹೀಗೇ ಅನ್ನೋದು ಸರಿಯಲ್ಲ. ಆದ್ದರಿಂದ ಈಗ, ಈ ವಿಷಯ ಇಲ್ಲಿಗೇ ಇರಲಿ ಬಿಡಿ..
ಅಂದಹಾಗೆ, ನಟಿ ಸಮಂತಾ ಅವರು ತೀರಾ ಇತ್ತೀಚೆಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನ್ನಾಡಿದ್ದಾರೆ. ಹಾಗಿದ್ದರೆ ನಟಿ ಸಮಂತಾ ಅಂದಿದ್ದೇನು? ಅದೂ ಬೇಡ ಬಿಡಿ..! ಏಕೆಂದರೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ನಟನೆಯಿಂದ ತಾತ್ಕಾಲಿಕ ವಿರಾಮ ಪಡೆದು, ತಮ್ಮ ಆರೋಗ್ಯದ ಕಡೆಗೆ ಸಂಪೂರ್ಣ ಗಮನ ಹರಿಸಿದ್ದ ಸಮಂತಾ, ಈಗ ಮತ್ತೆ ಹೊಸ ಹುರುಪಿನೊಂದಿಗೆ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ವಿರಾಮದ ಅವಧಿಯಲ್ಲಿಯೂ ಅವರು ತಮ್ಮ ಚೇತರಿಕೆಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾ, ಸಕಾರಾತ್ಮಕ ಮನೋಭಾವವನ್ನು ಪ್ರದರ್ಶಿಸಿದ್ದರು.
"ಈ ಕಷ್ಟದ ದಿನಗಳು ನನ್ನನ್ನು ಇನ್ನಷ್ಟು ಬಲಗೊಳಿಸಿವೆ. ಜೀವನದಲ್ಲಿ ಯಾವುದು ಮುಖ್ಯ, ಯಾವುದು ಅಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ, ಮತ್ತು ನಾನು ಮೊದಲಿನಂತೆಯೇ ಅಥವಾ ಅದಕ್ಕಿಂತಲೂ ಉತ್ತಮವಾಗಿ ಕೆಲಸ ಮಾಡಲು ಸಿದ್ಧಳಾಗಿದ್ದೇನೆ," ಎಂಬಂತಹ ಮಾತುಗಳು ಅವರ ಆತ್ಮವಿಶ್ವಾಸವನ್ನು ತೋರಿಸುತ್ತವೆ.
ಇತ್ತೀಚೆಗೆ, ಸಮಂತಾ ಅವರು 'ತ್ರಲಲಾ ಮೂವಿಂಗ್ ಪಿಕ್ಚರ್ಸ್' (Tralala Moving Pictures) ಎಂಬ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ನಿರ್ಮಾಪಕಿಯಾಗಿಯೂ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಇದರ ಮೂಲಕ ಅವರು ವಿಭಿನ್ನ ಕಥಾವಸ್ತುಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶ ಹೊಂದಿದ್ದಾರೆ.
ಅಲ್ಲದೆ, ವರುಣ್ ಧವನ್ ಅವರೊಂದಿಗೆ 'ಸಿಟಾಡೆಲ್' ವೆಬ್ ಸರಣಿಯ ಭಾರತೀಯ ಅವತರಣಿಕೆಯಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಸಮಂತಾ ಅವರ ಈ ಹೋರಾಟದ ಪಯಣ ಮತ್ತು ಅವರ "ಯಾರನ್ನೂ ನಿರಾಸೆಗೊಳಿಸಬಾರದು" ಎಂಬ ತತ್ವವು ಅನೇಕರಿಗೆ ಸ್ಫೂರ್ತಿಯಾಗಿದೆ. ಜೀವನದಲ್ಲಿ ಎಂತಹದ್ದೇ ಅಡೆತಡೆಗಳು ಬಂದರೂ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಅವುಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಅವರು ಜ್ವಲಂತ ಉದಾಹರಣೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.