ನಟಿ ರಮ್ಯಾ ಕೆಣಕಿದವರಿಗೆ ಇದೆ ಮಾರಿಹಬ್ಬ, 11 ಮಂದಿಯನ್ನು ಗುರುತಿಸಿದ ಪೊಲೀಸರು

Published : Aug 03, 2025, 12:11 PM IST
Ramya Darshan Thoogudeepa

ಸಾರಾಂಶ

ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ. ಹನ್ನೊಂದು ಮಂದಿಯನ್ನು ಗುರುತಿಸಲಾಗಿದ್ದು, ೪೮ ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಐಪಿ ವಿಳಾಸ ಪತ್ತೆಗೆ ಇನ್‌ಸ್ಟಾಗ್ರಾಮ್‌ಗೆ ಪೊಲೀಸರು ಪತ್ರ ಬರೆದಿದ್ದಾರೆ.

ಬೆಂಗಳೂರು: ನಟಿ ರಮ್ಯಾಗೆ ಅಶ್ಲೀಲ ಹಾಗೂ ಅವಾಚ್ಯ ಮೆಸೇಜ್‌ಗಳನ್ನು ಕಳಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದೀಗ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಬಂಧನವಾಗಿದ್ದು, ಹನ್ನೊಂದು ಮಂದಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಬಂಧಿತ ಆರೋಪಿಗಳನ್ನು ಓಬಣ್ಣ ಮತ್ತು ಗಂಗಾಧರ್ ಎಂದು ಗುರುತಿಸಲಾಗಿದೆ. ಇವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ನಟಿ ರಮ್ಯಾ ಈಗಾಗಲೇ 43 ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದು, ಮತ್ತೂ 5 ಐಡಿಗಳ ಮಾಹಿತಿ ಕೂಡಾ ನೀಡಿದ್ದಾರೆ. ಇನ್ನು ಐಡಿಗಳನ್ನು ನಿರ್ವಹಿಸುತ್ತಿರುವ 48 ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಈ ಮೂಲಕ ಅಶ್ಲೀಲ ಕಮೆಂಟ್ ಹಾಕೋರಿಗೆ ಕಾದಿದೆ ಮಾರಿಹಬ್ಬ.  ಏನು ಮಾಡ್ಕೊಳೋಕೆ ಆಗಲ್ಲ ಅಂತಾ ಮೆರಿತಿದ್ದವರಿಗೆ ರಮ್ಯಾ ಸರಿಯಾದ ಬುದ್ದಿ ಕಲಿಸ್ತಿದ್ದಾರೆ. 

ರಮ್ಯಾ ಅವರಿಗೆ  ಕೆಟ್ಟ ರೀತಿಯಲ್ಲಿ ಮೆಸೇಜ್ ಹಾಕಿದವರ ಮಟ್ಟ ಹಾಕಲು ಮುಂದಾಗಿರುವ  ಪೊಲೀಸರು  ಇನ್‌ಸ್ಟಾಗ್ರಾಂಗೆ ಪತ್ರ ಬರೆದಿದ್ದು, ಎಲ್ಲಾ IP ಅಡ್ರೆಸ್‌ಗಳ ವಿವರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪತ್ರವನ್ನು ಮೂರು ದಿನಗಳ ಹಿಂದೆ ಕಳುಹಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಪ್ರತಿಕ್ರಿಯೆ ಬರುವ ಸಾಧ್ಯತೆ ಇದೆ.

ಅಶ್ಲೀಲ ಚಿಹ್ನೆಗಳನ್ನು ಬಳಸಿರುವ, ಕೀಳು ಮಟ್ಟದ ಶಬ್ದಗಳನ್ನು ಬರೆದಿರುವ ಐಡಿಗಳ ಬಗ್ಗೆ ವಿಶೇಷವಾಗಿ ನಿಗಾ ಇಡಲಾಗಿದೆ. ಕೆಲವು ಐಡಿಗಳನ್ನು ಅಡ್ಮಿನ್‌ಗಳು ಈಗಾಗಲೇ ಡಿಲೀಟ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆದರೂ ಕೂಡ, ಐಡಿ ಕ್ರಿಯೇಷನ್ ಸಮಯದಲ್ಲಿ ಬಳಸಲಾದ IP ಅಡ್ರೆಸ್ ಮೂಲಕ ಅವರ ಸ್ಥಳ ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಸದ್ಯದಲ್ಲೇ IP ಅಡ್ರೆಸ್‌ಗಳ ಮಾಹಿತಿಯು ಸೈಬರ್ ಕ್ರೈಂ ಅಧಿಕಾರಿಗಳ ಕೈಗೆ ಸಿಗುವ ನಿರೀಕ್ಷೆಯಿದೆ. ಅದರಿಂದ ಮತ್ತಷ್ಟು ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ಸಾಧ್ಯತೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!