'ಅದು ಮುರಿದುಬಿದ್ದಿರೋ ಮನೆ'.. ಗೋವಿಂದ-ಸುನೀತಾ ಸಂಸಾರದ ಬಗ್ಗೆ ಕೋಮಲ್ ರಾಣಿ ಪೋಸ್ಟ್ ವೈರಲ್

Published : Sep 27, 2026, 09:44 AM IST
Govinda Sunita Komal Rani

ಸಾರಾಂಶ

ಆಗಸ್ಟ್‌ನಲ್ಲಿ ಗೋವಿಂದ ಮತ್ತು ಕೋಮಲ್ ರಾಣಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸಂದರ್ಭದಿಂದಲೇ ಈ ವಿಚಾರ ಹೆಚ್ಚು ಚರ್ಚೆಗೆ ಬಂದಿತ್ತು. ಆ ಬಳಿಕ ಗೋವಿಂದ ಹಾಗೂ ಕೋಮಲ್ ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ, ಕೋಮಲ್ ರಾಣಿ ರಿಯಾಕ್ಟ್ ಮಾಡಿದ್ದಾರೆ..

Govinda Sunita Family Dispute, Actress Komal Rani statement post becomes Viral! ಸುನೀತಾ-ಗೋವಿಂದ ಫ್ಯಾಮಿಲಿ ಪ್ರಾಬ್ಲಂ, ನಟಿ ಕೋಮಲ್ ರಾಣಿ ಹಾಕಿರೋ ಪೋಸ್ಟ್ ಭಾರೀ ವೈರಲ್!

ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಕಲಹ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ದಾಂಪತ್ಯ ಜೀವನದ ಬಗ್ಗೆ ಹಲವು ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ನಟಿ ಕೋಮಲ್ ರಾಣಿ ಮಾಡಿರುವ ಹೇಳಿಕೆಗಳು ಈ ವಿವಾದಕ್ಕೆ ಮತ್ತಷ್ಟು ಕಾವು ನೀಡಿವೆ. ಸುನೀತಾ ಅಹುಜಾ ಅವರ ಆರೋಪಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಕೋಮಲ್ ರಾಣಿ, ತಮ್ಮ ವಿರುದ್ಧದ ಮಾತುಗಳನ್ನು ತಳ್ಳಿಹಾಕುವುದರ ಜೊತೆಗೆ ಸುನೀತಾ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೋಮಲ್ ರಾಣಿ ಸುದೀರ್ಘವಾದ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ತಮ್ಮ ಪೋಸ್ಟ್‌ನಲ್ಲಿ ಸುನೀತಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೂ ಅವರು ಮಾಡಿರುವ ಹೇಳಿಕೆಗಳು ಯಾರನ್ನು ಉದ್ದೇಶಿಸಿವೆ ಎಂಬುದು ಸ್ಪಷ್ಟವಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

“ಈಗಾಗಲೇ ಒಡೆದು ಹೋಗಿರುವ ಮನೆಯನ್ನು ಯಾರೂ ಮತ್ತೆ ಮುರಿಯಲು ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ ಕೋಮಲ್ ರಾಣಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದು, ಸಾರ್ವಜನಿಕವಾಗಿ ಕೇಳಿಬರುವ ಪ್ರತಿಯೊಂದು ಆರೋಪವನ್ನೂ ಜನರು ಕುರುಡಾಗಿ ನಂಬುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಗಂಡನಿಗೆ ಕಿರುಕುಳ ನೀಡುವ ಮತ್ತು ಆತನನ್ನು ಮಾನಸಿಕವಾಗಿ ಒತ್ತಡಕ್ಕೆ ಒಳಪಡಿಸುವ ಮಹಿಳೆಯರ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಮಲ್ ರಾಣಿ ಅವರ ಆರೋಪಗಳು ಇಲ್ಲಿಗೇ ನಿಲ್ಲಲಿಲ್ಲ. ಮನೆಯೊಳಗಿನ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಗಂಡನನ್ನು ಮನೆಯಲ್ಲೇ ಕೂರಿಸಿ ಕೆಲಸ ಮಾಡದಂತೆ ತಡೆಯುವುದು, ಆತನಿಗೆ ಒಂಟಿತನದ ಭಾವನೆ ಮೂಡಿಸುವುದು ಹಾಗೂ ಮಾನಸಿಕವಾಗಿ ಹಿಂಸಿಸುವುದು ಒಳ್ಳೆಯ ದಾಂಪತ್ಯದ ಲಕ್ಷಣವಲ್ಲ ಎಂದು ಅವರು ತಮ್ಮ ಬರಹದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅನುಕಂಪ ಪಡೆಯುವ ಉದ್ದೇಶದಿಂದ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಲಾಗುತ್ತಿದೆ ಎಂಬ ಆರೋಪವನ್ನೂ ಕೋಮಲ್ ರಾಣಿ ಮಾಡಿದ್ದಾರೆ. ತಮ್ಮ ಸ್ವಂತ ಉದ್ದೇಶ ಅಥವಾ ಕಾರ್ಯಸಾಧನೆಗಾಗಿ ಮತ್ತೊಬ್ಬರ ಹೆಸರನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿರುವ ಅವರು, ಸಾರ್ವಜನಿಕವಾಗಿ ಗಂಡನ ತೇಜೋವಧೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಈ ವಿವಾದದ ಹಿನ್ನೆಲೆ ನೋಡಿದರೆ, ಆಗಸ್ಟ್‌ನಲ್ಲಿ ಗೋವಿಂದ ಮತ್ತು ಕೋಮಲ್ ರಾಣಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸಂದರ್ಭದಿಂದಲೇ ಈ ವಿಚಾರ ಹೆಚ್ಚು ಚರ್ಚೆಗೆ ಬಂದಿತ್ತು. ಆ ಬಳಿಕ ಗೋವಿಂದ ಹಾಗೂ ಕೋಮಲ್ ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಇದೀಗ ವಿವಾದಕ್ಕೆ ಮತ್ತಷ್ಟು ಆಯಾಮ ನೀಡಿವೆ.

ಇತ್ತೀಚೆಗೆ ಸುನೀತಾ ಅಹುಜಾ ದಕ್ಷಿಣೇಶ್ವರ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಸಂಸಾರ ಉಳಿಯುವಂತೆ ಪ್ರಾರ್ಥಿಸಿದ್ದರು. ಇದೇ ವೇಳೆ ಜೆನ್-ಝಿ ಯುವಜನತೆ ಹಾಗೂ ಮಹಿಳೆಯರಿಂದ ಬೆಂಬಲ ಕೋರಿದ ಅವರ ಹೇಳಿಕೆಯೂ ಗಮನ ಸೆಳೆದಿತ್ತು. ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳ ಕುರಿತು ಸುನೀತಾ ನೀಡಿದ ಹೇಳಿಕೆಗಳ ಬೆನ್ನಲ್ಲೇ ಇದೀಗ ಕೋಮಲ್ ರಾಣಿ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.

ಗೋವಿಂದ ಮತ್ತು ಸುನೀತಾ ಅವರ ದಾಂಪತ್ಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿರುವಾಗ, ಕೋಮಲ್ ರಾಣಿ ಅವರ ಈ ಹೇಳಿಕೆಗಳು ಮತ್ತಷ್ಟು ಕುತೂಹಲ ಮೂಡಿಸಿವೆ. ಇಬ್ಬರ ನಡುವಿನ ವೈಯಕ್ತಿಕ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಬಾಲಿವುಡ್ ಅಭಿಮಾನಿಗಳ ಗಮನ ಸೆಳೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರಾವಣ' ಪಾತ್ರಕ್ಕೆ ಕನ್ನಡದ ಸ್ಟಾರ್ ಯಶ್ ಆಯ್ಕೆ ಹಿಂದಿನ ಗುಟ್ಟೇನು? 'ರಾಮಾಯಣ'ದ ಈ ಅಸಲೀ ಕಾರಣ ಈಗ ಬಹಿರಂಗ!
'ನಿಮ್ಮ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡಿ': ನೆಗಟಿವ್ ಮಾತುಗಳಿಗೆ ನಟ ಸೂರ್ಯ ಈ ಉತ್ತರ ಕೊಟ್ಟಿದ್ಯಾಕೆ?