'ನಾನು ಸತ್ತರೆ ನೋಡಲು ಬರುತ್ತೀಯಾ?" ಆ ಪ್ರಶ್ನೆ ಕೇಳಿದ್ದ ನಟಿ ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಗೆ ಹೋಗಿದ್ರಾ ಈ ಸ್ಟಾರ್?

Shriram Bhat   | ANI
Published : Nov 14, 2026, 06:55 PM IST
Silk Smitha

ಸಾರಾಂಶ

ನಟಿ ಸಿಲ್ಕ್ ಸ್ಮಿತಾ ಬರೆದ ಆ ಕೊನೆಯ ಪತ್ರದಲ್ಲಿ ಆಕೆ ಜೀವನದಲ್ಲಿ ಒಂದು ರೀತಿಯ ಶೂನ್ಯತೆಯನ್ನು ಅನುಭವಿಸುತ್ತಿದ್ದ ಬಗ್ಗೆ ಬರೆದಿದ್ದರಂತೆ. ಆ ಒಂಟಿತನ ಮತ್ತು ಮಾನಸಿಕ ನೋವನ್ನು ಸಹಿಸಲಾಗದೆ ಈ ನಿರ್ಧಾರಕ್ಕೆ ಬಂದಿರಬಹುದಾ? ಅಥವಾ, ಬೇರೆ ಇನ್ನೇನಾದರೂ..?!

ಸಾಯುವ ಮೊದಲು ತನ್ನ ಕೊನೆಯ ಸಿನಿಮಾ ಚಿತ್ರೀಕರಣದ ವೇಳೆ ನಟಿ ಸಿಲ್ಕ್ ಸ್ಮಿತಾ ಆ ಸ್ಟಾರ್‌ ನಟನಿಗೆ ಅದೇನು ಹೇಳಿದ್ರು?

Silk Smitha Painful Story: ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನೇ ತನ್ನ ಗ್ಲಾಮರ್ ಹಾಗೂ ನೃತ್ಯದ ಮೂಲಕ ಆಳಿದ ನಟಿ ಸಿಲ್ಕ್ ಸ್ಮಿತಾ. ಸ್ಟಾರ್ ನಟಿಯರಿಗಿಂತಲೂ ಹೆಚ್ಚಿನ ಕ್ರೇಜ್ ಹೊಂದಿದ್ದ ಈ ಸುಂದರಿಗೆ ಅಪಾರ ಅಭಿಮಾನಿಗಳಿದ್ದರು. ಆಕೆಯ ಹೆಸರೇ ಸಿನಿಮಾಗಳಿಗೆ ದೊಡ್ಡ ಆಕರ್ಷಣೆಯಾಗಿತ್ತು. ಸಿಲ್ಕ್ ಸ್ಮಿತಾ (Silk Smitha) ಬಳಿಕ ಚಿತ್ರರಂಗಕ್ಕೆ ಸಾಕಷ್ಟು ಡ್ಯಾನ್ಸರ್‌ಗಳು, ಗ್ಲಾಮರ್ ನಟಿಯರು ಬಂದರೂ ಯಾರಿಗೂ ಆಕೆಯ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಆದರೆ, ಇಷ್ಟೊಂದು ಜನಪ್ರಿಯತೆ ಹೊಂದಿದ್ದ ನಟಿಯ ಅಂತ್ಯಕ್ರಿಯೆಗೆ ಚಿತ್ರರಂಗದಿಂದ ಬಂದಿದ್ದು ಮಾತ್ರ ಒಬ್ಬರೇ ಒಬ್ಬರು ಎಂದರೆ ಅಚ್ಚರಿಯಾಗಬಹುದು!

ದಿವಂಗತ ನಟಿ ಸಿಲ್ಕ್ ಸ್ಮಿತಾ ಅವರ ಜೀವನ ಮತ್ತು ನಿಗೂಢ ಸಾವಿನ ಹಿಂದೆ ಹಲವು ಘಟನೆಗಳು ಅಡಗಿವೆ. ಇದೀಗ ಹಿರಿಯ ಪತ್ರಕರ್ತ ತೋಟ ಭಾವನಾರಾಯಣ ಅವರು ಸಿಲ್ಕ್ ಸ್ಮಿತಾ ಅವರ ಕೊನೆಯ ದಿನಗಳ ಬಗ್ಗೆ ಹಾಗೂ ಆಕೆ ಮೃತಪಟ್ಟ ದಿನ ನಡೆದ ಘಟನೆಗಳ ಕುರಿತು ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆಕೆ ಬರೆದಿದ್ದ ಕೊನೆಯ ಪತ್ರದಲ್ಲಿನ ಅಂಶಗಳ ಬಗ್ಗೆಯೂ ಮಾತನಾಡಿದ್ದಾರೆ.

ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಗೆ ಬಂದಿದ್ದು ನಟ ಅರ್ಜುನ್ ಸರ್ಜಾ ಮಾತ್ರ!

'ಜನಪ್ರಿಯತೆ, ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ದೊಡ್ಡ ಹೆಸರಿದ್ದರೂ ಸಿಲ್ಕ್ ಸ್ಮಿತಾ ಮೃತಪಟ್ಟಾಗ ಅವರ ಅಂತ್ಯಕ್ರಿಯೆಗೆ ಚಿತ್ರರಂಗದ ಗಣ್ಯರು ಯಾರೂ ಬಂದಿರಲಿಲ್ಲವಂತೆ. ವಿಶೇಷವಾಗಿ ತಮಿಳು ಚಿತ್ರರಂಗದಿಂದ ಒಬ್ಬರೂ ಹಾಜರಾಗಿರಲಿಲ್ಲ' ಎಂದು ಹಿರಿಯ ಪತ್ರಕರ್ತರಾದ ತೋಟ ಭಾವನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ನಟ ಆಕ್ಷನ್ ಕಿಂಗ್ ಅರ್ಜುನ್ ಮಾತ್ರ ಸಿಲ್ಕ್ ಸ್ಮಿತಾ ಅವರ ಅಂತ್ಯಕ್ರಿಯೆಗೆ ಬಂದಿದ್ದರಂತೆ. ಇದನ್ನು ಕಂಡು ಆಶ್ಚರ್ಯಗೊಂಡ ಭಾವನಾರಾಯಣ, ಅರ್ಜುನ್ ಅವರನ್ನೇ ಈ ಬಗ್ಗೆ ಪ್ರಶ್ನಿಸಿದ್ದರು.

ಅದಕ್ಕೆ ಅರ್ಜುನ್ ನೀಡಿದ ಉತ್ತರ ನಿಜಕ್ಕೂ ಮನಕಲಕುವಂತಿತ್ತಂತೆ. ಸಿಲ್ಕ್ ಸ್ಮಿತಾ ಅವರ ಕೊನೆಯ ಸಿನಿಮಾದ ಚಿತ್ರೀಕರಣದ ವೇಳೆ ಆಕೆ, "ನಾನು ಸತ್ತರೆ ನನ್ನನ್ನು ನೋಡಲು ಬರುತ್ತೀಯಾ?" ಎಂದು ಅರ್ಜುನ್ ಅವರನ್ನು ಕೇಳಿದ್ದರಂತೆ. ಆಗ ಅವರು ಅದನ್ನು ತಮಾಷೆಯ ಮಾತೆಂದುಕೊಂಡು ನಿರ್ಲಕ್ಷಿಸಿದ್ದರಂತೆ. ಆದರೆ, ನಿಜವಾಗಿಯೂ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದಾಗ ತಡೆಯಲಾಗಲಿಲ್ಲ. ಆಕೆಗೆ ಕೊಟ್ಟ ಮಾತಿನಂತೆ ಅಂತ್ಯಕ್ರಿಯೆಗೆ ಬಂದೆ ಎಂದು ಹೇಳುತ್ತಾ ಅರ್ಜುನ್ ಕಣ್ಣೀರಿಟ್ಟಿದ್ದರಂತೆ. ಈ ಘಟನೆಯನ್ನು ಭಾವನಾರಾಯಣ ಭಾವುಕರಾಗಿ ಸ್ಮರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಸಿಲ್ಕ್ ಸ್ಮಿತಾ ಅವರಿಗೆ ತಾವು ಧೈರ್ಯ ಹೇಳಿದ್ದೆವು, ಸಾವಿನ ಹಿಂದಿನ ರಾತ್ರಿ ಆಕೆ ತಮಗೇ ಕರೆ ಮಾಡಿದ್ದರು ಎಂದು ಹೇಳಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸುತ್ತದೆ. ಆದರೆ, ತಾವು ಖುದ್ದಾಗಿ ಕಂಡಿದ್ದ ಪ್ರಕಾರ ಅಂತ್ಯಕ್ರಿಯೆಗೆ ಬಂದಿದ್ದು ಅರ್ಜುನ್ ಮಾತ್ರ ಎಂದು ಭಾವನಾರಾಯಣ ಸ್ಪಷ್ಟಪಡಿಸಿದ್ದಾರೆ.

ಕೊನೆಯ ಪತ್ರದಲ್ಲಿ ಯಾರ ಹೆಸರನ್ನು ಪದೇ ಪದೆ ಉಲ್ಲೇಖಿಸಿದ್ದರು ಸಿಲ್ಕ್ ಸ್ಮಿತಾ?

ಸಿಲ್ಕ್ ಸ್ಮಿತಾ ಬರೆದಿದ್ದ ಕೊನೆಯ ಪತ್ರದಲ್ಲಿನ ಕೆಲವು ವಿಚಾರಗಳನ್ನೂ ಭಾವನಾರಾಯಣ ಬಹಿರಂಗಪಡಿಸಿದ್ದಾರೆ. ಆ ಪತ್ರದಲ್ಲಿ ಆಕೆ ಜೀವನದಲ್ಲಿ ಒಂದು ರೀತಿಯ ಶೂನ್ಯತೆಯನ್ನು ಅನುಭವಿಸುತ್ತಿದ್ದ ಬಗ್ಗೆ ಬರೆದಿದ್ದರಂತೆ. ಆ ಒಂಟಿತನ ಮತ್ತು ಮಾನಸಿಕ ನೋವನ್ನು ಸಹಿಸಲಾಗದೆ ಈ ನಿರ್ಧಾರಕ್ಕೆ ಬಂದಿರಬಹುದು ಎಂಬ ಅರ್ಥದ ವಿಚಾರಗಳು ಪತ್ರದಲ್ಲಿದ್ದವು ಎಂದು ಅವರು ತಿಳಿಸಿದ್ದಾರೆ.

ಹೀಗೆ, ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿದ್ದ ಸಿಲ್ಕ್ ಸ್ಮಿತಾ ಅವರ ಬದುಕಿನ ಕೊನೆಯ ದಿನಗಳ ಕುರಿತು ಹಿರಿಯ ಪತ್ರಕರ್ತ ತೋಟ ಭಾವನಾರಾಯಣ ಹಂಚಿಕೊಂಡಿರುವ ಈ ವಿಚಾರಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

'ಟಾಕ್ಸಿಕ್' ಚಿತ್ರದಿಂದ ಲಾಭವೇ ಆಗಿದೆ, ನಷ್ಟ ಅಲ್ಲ.. ಪೇಯ್ಡ್ ಪ್ರಮೋಷನ್ ಗುಟ್ಟು ಬಿಟ್ಟುಕೊಡದ ದಿಲ್ ರಾಜು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರ್ಧ ಚೆನ್ನೈ ಖರೀದಿಸುವಷ್ಟು ಸಂಪಾದಿಸಿದ್ದ ಕನ್ನಡದ ಹಿರಿಯ ನಟಿಗೆ ಆಸರೆಯಾಗಿದ್ದು ಚಿಲ್ಲರೆ ಹಣ: ಆಗಿದ್ದೇನು?
ಯಶ್ ಮುಂದಿನ ಚಿತ್ರ ಆದಿತ್ಯ ಧರ್ ಜೊತೆಗೆ, ರಣವೀರ್ ರೋಲ್ ಬಗ್ಗೆ ಕುತೂಹಲ, ಇದು ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯದ ಕಥೆ!