ನಟ ಅಜಿತ್‌ ಕುಮಾರ್‌ಗೆ ಮಾತೃವಿಯೋಗ, ಮೂರೇ ವರ್ಷದ ಅಂತರದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಸೂಪರ್‌ಸ್ಟಾರ್‌

Published : May 30, 2026, 11:12 AM IST
actor ajith kumar

ಸಾರಾಂಶ

ಖ್ಯಾತ ತಮಿಳು ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು 84ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೂರು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಅಜಿತ್ ಕುಟುಂಬಕ್ಕೆ ಇದೀಗ ತಾಯಿಯ ಅಗಲಿಕೆ ಮತ್ತಷ್ಟು ದುಃಖ ತಂದಿದೆ.

ಚೆನ್ನೈ (ಮೇ.30): ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ. ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು ಶನಿವಾರ ಮುಂಜಾನೆ ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.ಅಜಿತ್ ಕುಮಾರ್ ಮತ್ತು ಅವರ ಕುಟುಂಬಕ್ಕೆ ಈ ಸಾವು ಭರಿಸಲಾರದ ದೊಡ್ಡ ಆಘಾತವನ್ನು ತಂದಿದೆ. ಕೇವಲ ಮೂರು ವರ್ಷಗಳ ಅಂತರದಲ್ಲಿಯೇ ಅಜಿತ್‌ ಕುಮಾರ್‌ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡಂತಾಗಿದೆ. 2023ರ ಮಾರ್ಚ್‌ನಲ್ಲಿ ಅಜಿತ್‌ ಕುಮಾರ್‌ ಅವರ ತಂದೆ ಪಿ. ಸುಬ್ರಮಣ್ಯಂ ಮಣಿ ನಿಧನರಾಗಿದ್ದರು.

ತಂದೆಯ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ, ದಶಕಗಳ ಕಾಲ ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿ ಮತ್ತು ಕೇಂದ್ರಬಿಂದುವಾಗಿ ನಿಂತಿದ್ದ ತಾಯಿಯನ್ನು ಕಳೆದುಕೊಂಡು ಇಡೀ ಕುಟುಂಬವೀಗ ತೀವ್ರ ಶೋಕ ಸಾಗರದಲ್ಲಿ ಮುಳುಗಿದೆ.

ಕೋಲ್ಕತ್ತಾದ ಸಿಂಧಿ (Sindhi) ಕುಟುಂಬದಲ್ಲಿ ಜನಿಸಿದ ಮೋಹಿನಿ ಅವರು ಪುತ್ರರಾದ ಅನೂಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್‌ರನ್ನು ಅಗಲಿದ್ದಾರೆ. ಅಜಿತ್ ಕುಮಾರ್ ಅವರ ಅಗಾಧ ಜನಪ್ರಿಯತೆ ಮತ್ತು ಸ್ಟಾರ್‌ಡಮ್‌ನಿಂದಾಗಿ ಇಡೀ ಕುಟುಂಬ ಸದಾ ಸಾರ್ವಜನಿಕವಾಗಿ ಸುದ್ದಿಯಲ್ಲಿದ್ದರೂ, ಈ ಕುಟುಂಬವು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಲೈಮ್‌ಲೈಟ್‌ನಿಂದ (Spotlight) ದೂರವಿಡಲು ಸದಾ ಬಯಸುತ್ತಿತ್ತು.

ಖಾಸಗಿಯಾಗಿ ನಡೆಯಲಿದೆ ಅಂತ್ಯಸಂಸ್ಕಾರ

ಮೋಹಿನಿ ಮಣಿ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ, ಇಡೀ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಸಹೋದ್ಯೋಗಿಗಳು, ರಾಜಕೀಯ ನಾಯಕರು ಹಾಗೂ ಅಸಂಖ್ಯಾತ ಅಭಿಮಾನಿಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಅಜಿತ್ ತಾಯಿಯ ಆತ್ಮಕ್ಕೆ ಶಾಂತಿ ಕೋರುವ ಮತ್ತು ದುಃಖತಪ್ತ ಕುಟುಂಬಕ್ಕೆ ಭಗವಂತನು ಶಕ್ತಿ ನೀಡಲಿ ಎಂದು ಪ್ರಾರ್ಥಿಸುವ ಸಂದೇಶಗಳಿಂದ ತುಂಬಿಹೋಗಿವೆ. ಕುಟುಂಬದ ಆಪ್ತ ಮೂಲಗಳ ಪ್ರಕಾರ, ಮೃತರ ಅಂತ್ಯಕ್ರಿಯೆಯು ಕೇವಲ ಆಪ್ತರು, ಹತ್ತಿರದ ಸಂಬಂಧಿಕರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ನೆರವೇರಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಾಮುಂಡೇಶ್ವರಿ ಮುಂದೆ ಕ್ಷಮೆ ಕೋರಿದ ಬೆನ್ನಲ್ಲೇ ಸಲ್ಮಾನ್ ಖಾನ್ ಮೂಲಕ ರಣವೀರ್-ಫರ್ಹಾನ್ 'ವಾರ್' ಎಂಡ್!?
OMG! ಎಲ್ರನ್ನೂ ಕರೆದು, ಇವೆಂಟ್‌ ಮಾಡಿ, ಹುಡುಗಿ ಮುಖ ರಿವೀಲ್‌ ಮಾಡಿದ ಬೃಂದಾವನ ಧಾರಾವಾಹಿ ನಟ Varun Aradya