ಮಸೀದಿ ಮುಂದೆ ಪಟಾಕಿ ಹೊಡೆದ್ರೆ, ಮೆರವಣಿಗೆ ಮಾಡಿದ್ರೆ, ಗ್ರಹಚಾರ ಬಿಡಿಸ್ತೀನಿ!: ಟಿ.ನರಸೀಪುರ ಇನ್ಸ್‌ಪೆಕ್ಟರ್

Published : Sep 12, 2026, 01:03 PM IST
T Narsipur Ganesh Procession Row

ಸಾರಾಂಶ

ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯನ್ನು ಮಸೀದಿ ಮುಂದೆ ನಡೆಸದಂತೆ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ನಿರ್ಬಂಧಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದ ಯದುವೀರ್ ಒಡೆಯರ್ ಅವರು ಸರ್ಕಾರದ ನೀತಿಯನ್ನು ಖಂಡಿಸಿ, ಇದು ಹಿಂದೂ ಹಬ್ಬಗಳ ಆಚರಣೆಯ ಹಕ್ಕನ್ನು ಕಸಿದುಕೊಳ್ಳುವ ಯತ್ನ ಎಂದು ಆರೋಪಿಸಿದ್ದಾರೆ.

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಯ ನಿಯಮಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಸೀದಿ ಮುಂದೆ ಮೆರವಣಿಗೆ ಮಾಡುವಂತಿಲ್ಲ ಮತ್ತು ಪಠಾಕಿ ಹೊಡೆಯುವಂತಿಲ್ಲ ಎಂದು ತಾಕೀತು ಮಾಡಿದ್ದು, ಗಲ್ಲಿಯ ಬೀದಿಗೊಂದೊಂದು ಗಣೇಶನನ್ನು ಕೂರಿಸುವಾಗ ಮಸೀದಿ ಮುಂದೆತೇ ಹೋಗಬೇಕಾದ ಅನಿವಾರ್ಯತೆ ಇದೆ. ಗಣೇಶನನ್ನು ವಿಸರ್ಜನೆಗೆ ಆಕಾಶ ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕೆ ಎಂದು ಸಾರ್ವಜನಿಕರಿ ಕಿಡಿಕಾರಿದ್ದಾರೆ. ಪ್ರಕರಣ ಸಂಬಂಧ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ನೀಡಿ ಕಿಡಿಕಾರಿದ್ದಾರೆ.

ಇನ್ಸ್ಪೆಕ್ಟರ್ ಧನಂಜಯ ನೀಡಿದ ಎಚ್ಚರಿಕೆ

ಟಿ. ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮತ್ತು ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ, ಇನ್ಸ್ಪೆಕ್ಟರ್ ಧನಂಜಯ ಅವರು ಆಯೋಜಕರು ಹಾಗೂ ಯುವಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಗಣೇಶ ಮೆರವಣಿಗೆಯನ್ನು ಪೊಲೀಸರು ನಿಗದಿಪಡಿಸಿದ ಮಾರ್ಗದಲ್ಲೇ ನಡೆಸಬೇಕು. ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ನಡೆಸುವುದಾಗಲಿ ಅಥವಾ ಪಟಾಕಿ ಸಿಡಿಸುವುದಾಗಲಿ ಮಾಡಬಾರದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಸಿದ್ದಾರೆ. ಒಂದು ವೇಳೆ ಅನುಮತಿ ಇಲ್ಲದೆ ಮೆರವಣಿಗೆ ಮಾಡಿದ್ದು ನನ್ನ ಗಮನಕ್ಕೆ ಬಂದ್ರೆ ಹೇಳಲ್ಲ ಮಾಡಿ ತೋರಿಸ್ತೀನಿ ಎಂದು ಹಿಂದೂ ಯುವಕರನ್ನು ಗುಂಪು ಸೇರಿಸಿಕೊಂಡು ಪೊಲೀಸಪ್ಪ ವಾರ್ನಿಂಗ್ ಕೊಟ್ಟಿದ್ದು, ಈ ಬಾರಿ ಮಸೀದಿ ಮುಂದೆ ಪಟಾಕಿ ಹೊಡೆದ್ರೆ ಗ್ರಹಚಾರ ಬಿಡಿಸ್ತೇನೆ. ಅಲ್ಲಿ ನಾವು ಭದ್ರತೆ ಹಾಕಿರ್ತಿವಿ. ನೀವು ಮೆರವಣಿಗೆ ಮಾಡುವ ರೂಟ್ ಕೊಟ್ಟು ಗಣಪತಿ ಕೂರಿಸಬೇಕು ಎಂಬ ಎಚ್ಚರಿಕೆ ನೀಡಿದ್ದು, ಈ ಶಾಂತಿ ಸಭೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸರ್ಕಾರದ ವಿರುದ್ಧ ಸಂಸದ ಯದುವೀರ್ ಒಡೆಯರ್ ವಾಗ್ದಾಳಿ

ಟಿ. ನರಸೀಪುರದಲ್ಲಿ ಪೊಲೀಸ್ ಇಲಾಖೆ ವಿಧಿಸಿರುವ ಷರತ್ತುಗಳನ್ನು ಖಂಡಿಸಿರುವ ಮೈಸೂರು ಸಂಸದ ಯದುವೀರ್ ಒಡೆಯರ್, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಹಬ್ಬಗಳ ಆಚರಣೆಗೆ ಮತ್ತು ಮೆರವಣಿಗೆಗಳಿಗೆ ಪ್ರತಿ ಬಾರಿಯೂ ಕಠಿಣ ಷರತ್ತುಗಳನ್ನು ವಿಧಿಸುವುದು ಈ ಸರ್ಕಾರದ ಅಭ್ಯಾಸವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಸೀದಿ ಅಥವಾ ದೇವಸ್ಥಾನಗಳಿರುವ ರಸ್ತೆಗಳಲ್ಲಿ ಮೆರವಣಿಗೆ ಹೋಗಬಾರದು ಎಂದು ತಡೆಯುವುದು ಸೂಕ್ತವಲ್ಲ. ಸಾರ್ವಜನಿಕರಿಗೆ ಸೇರಿದ ಎಲ್ಲಾ ರಸ್ತೆಗಳಲ್ಲೂ ಮೆರವಣಿಗೆ ನಡೆಸುವ ಹಕ್ಕು ಪ್ರಜೆಗಳಿಗಿದೆ. ಇಂತಹ ನಿರ್ಬಂಧಗಳು ಸಮಾಜದಲ್ಲಿ ಅನಗತ್ಯ ವಿಭಜನೆಯ ಭಾವನೆಯನ್ನು ಬಿತ್ತುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚಾಮುಂಡಿ ಬೆಟ್ಟದ ವಿಚಾರದಲ್ಲೂ ಸರ್ಕಾರ ಇಂತಹದೇ ನಿಲುವು ತಳೆದಿತ್ತು. ಧಾರ್ಮಿಕ ಚೌಕಟ್ಟಿನ ಆಚರಣೆಗಳಿಗೆ ಜಾತ್ಯತೀತತೆಯ ನೆಪದಲ್ಲಿ ಅಡೆತಡೆ ಉಂಟುಮಾಡಲಾಗುತ್ತಿದೆ ಎಂದು ಸಂಸದರು ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಸ್ಥಳೀಯವಾಗಿ ಹಾಗೂ ರಾಜಕೀಯ ವಲಯದಲ್ಲಿ ಗಣೇಶೋತ್ಸವ ಮೆರವಣಿಗೆಯ ಮಾರ್ಗ ಸೂಕ್ಷ್ಮತೆ ಮತ್ತು ಸಾರ್ವಜನಿಕ ಆಚರಣೆಗಳ ಹಕ್ಕುಗಳ ಕುರಿತು ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿದೆ.

PREV
Read more Articles on
click me!

Recommended Stories

Mysuru: ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್, ಪ್ರತಿಭಟನೆ; ಅಲೋಕ್ ಕುಮಾರ್ ಹೇಳಿದ್ದೇನು?
ಮಗಳು ವೈಶಾಲಿ ಜನ್ಮದಿನಕ್ಕೆ ಮೈಸೂರು ಆನೆ ದತ್ತು ಕೊಡಿಸಿದ ಅಪ್ಪ ಶಾಸಕ ವಿನಯ್ ಕುಲಕರ್ಣಿ!