Mysuru: ದಸರಾಗೆ ಬಂದ ಮಹೇಂದ್ರ ಲಕ್ಷ್ಮೀಗೆ ಲವ್‌ ಆಗೋಯ್ತು; ಇದು ಆನೆಗಳ ಪ್ಯೂರ್‌ ಲವ್‌ ಸ್ಟೋರಿ!

Published : Oct 08, 2026, 04:43 PM IST
Mysuru Dasra

ಸಾರಾಂಶ

Mysore Dasara elephants: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಈ ಬಾರಿ ಅರಮನೆ ಬಿಡಾರದಲ್ಲಿ ಮಹೇಂದ್ರ ಮತ್ತು ಲಕ್ಷ್ಮೀ ಆನೆಗಳ ನಡುವೆ ವಿಶಿಷ್ಟವಾದ ಪ್ರೇಮಕಥೆ ಶುರುವಾಗಿದೆ. ಮಹೇಂದ್ರನ ಮೇಲೆ ಲಕ್ಷ್ಮೀಗೆ ಇರುವ ವಿಶೇಷ ಕಾಳಜಿ ಮತ್ತು ಪೊಸೆಸಿವ್‌ನೆಸ್ ಬಗ್ಗೆ ಡಿಸಿಎಫ್ ಡಾ.ಪ್ರಭುಗೌಡ ವಿವರಿಸಿದ್ದಾರೆ.

ವಿಶ್ವ ವಿಖ್ಯಾತ ದಸರೆ ಎಂದರೆನೆ ಎಲ್ಲಿಲ್ಲದ ಸಂಭ್ರಮ ಸಂತೋಷದ ಆಗರ. ದಸರೆಗೂ ಮುನ್ನವೇ ಪ್ರಾರಂಭವಾಗುವ ಯುವ ಸಂಭ್ರಮ, ಯುವ ದಸರಾ ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರವೆಗೂ ಭಾಗವಹಿಸುತ್ತಾರೆ. ಆ ಸಂಭ್ರಮವನ್ನು ಅನುಭವಿಸುತ್ತಾರೆ. ಹಾಗಂದ್ರೆ, ಲೈಟಿಂಗ್ಸ್‌, ಯುವ ದಸರಾ, ಯುವ ಸಂಭ್ರಮ ಅಂದ್ರೆ ಅಷ್ಟೇನಾ? ಅಲ್ಲ ಇದಕ್ಕೂ ಮುನ್ನ ಮೈಸೂರು ಅರಮನೆ ಬಿಡಾರದಲ್ಲಿ ಬೀಡು ಬಿಟ್ಟು ತಾಲೀಮು ನಡೆಸುವ ಆನೆಗಳ ದರ್ಭಾರ ಇದೆಯಲ್ಲ ಅದನ್ನು ನೋಡುವುದಕ್ಕೆ ಎರಡೂ ಕಣ್ಣು ಸಾಲದು. ಈ ನಿಟ್ಟಿನಲ್ಲಿ ಇಲ್ಲಿ ಒಂದು ವಿಶಿಷ್ಟ ಪ್ಯೂರ್‌ ಲವ್‌ ಸ್ಟೋರಿ ಸ್ಟ್ರಾರ್ಟ್‌ ಆಗಿದೆ. ಆ ಕುರಿತು ಸ್ವತಃ ಡಾಕ್ಟ್ರೆ ಮಾತನಾಡಿದ್ದಾರೆ. ಅದೇನು ಅಂತಾ ನೋಡೋಣ ಬನ್ನಿ.

ದಸರಾದಲ್ಲಿ ಸೆಪರೇಟ್‌ ಫ್ಯಾನ್‌ ಬೇಸ್‌ ಹೊಂದಿದ ಆನೆಗಳು!

ಹೌದು ದಸರಾದಲ್ಲಿ ಆನೆಗಳ ಆ ವರ್ಣರಂಜಿತ ಹೆಜ್ಜೆಗಳಿಗೆ ಯುವ ಮನಸ್ಸುಗಳಿಂದ, ಹಿರಿಯರವರೆಗೂ ಫಿದಾ ಆಗಿರುತ್ತಾರೆ. ಆ ಆನೆಗಳು ಹೆಜ್ಜೆ ಇಟ್ಟಂತೆ, ಧನಂಜಯ, ಏಕಲವ್ಯ, ಮಹೇಂದ್ರ ಅಂಥ ವಿಜಯ ಘೋಷಗಳು ಮಾರ್ಧನಿಸುತ್ತವೆ. ಆದ್ದರಿಂದ ಅಲ್ಲಿನ ಆನೆಗಳ ಆ ಸಡಗರ ಅವುಗಳ ಬರುವಿಕೆಗಾಗಿಯೇ ಜನ ಕಾತುರದಿಂದ ಕಾಯುತ್ತಿರುತ್ತಾರೆ. ಆದ್ದರಿಂದಲೇ ಈ ಆನೆಗಳಿಗೆ ಸೆಪರೇಟ್‌ ಪ್ಯಾನ್‌ ಭೇಸ್‌ ಇದೆ.

ತಾಯಿ ಚಾಮುಂಡೇಶ್ವರಿ ವೈಭವ!

ನಾಡದೇವತೆ ತಾಯಿ ಚಾಮುಂಡೇಶ್ವರಿ ವಿಜಯದಶಮಿ ದಿನ 750 ಕೆಜಿ ಅಂಬಾರಿ ಮೇಲೆ ಬರುತ್ತಿದ್ದರೆ, ಮುಂದೆ ಸಾಗುವ ಸ್ತಬ್ಧಚಿತ್ರ, ಕಲಾ, ವಾಧ್ಯ ಮೇಳಗಳೊಂದಿಗೆ ಸಾಗುವ ಈ ಅಂಬಾರಿ ಮೇಲೆ ಕುಳಿತ ತಾಯಿಯನ್ನು ನೋಡಲು ದೇಶದ ಮೂಲೆ-ಮೂಲೆಗಳಿಂದ ಬಂದು ಅವಳ ಪಾದಕ್ಕೆ ಶರಣಾಗುತ್ತದೆ. ಆ ಸನ್ನಿವೇಶವನ್ನು ಕಣ್ತುಂಬಿಕೊಂಡಿವನೆ ಪುಣ್ಯವಂತ.

ಸ್ಟಾರ್ಟ್‌ ಆಗಿದೆ ಪ್ಯೂರ್‌ ಲವ್‌ ಸ್ಟೋರಿ!

ಹೌದು ಮಹೇಂದ್ರ ಹಾಗೂ ಲಕ್ಷ್ಮೀ ಆನೆಗಳು ಶಿಬಿರದ ಆನೆಗಳಾಗಿದ್ದು, ಉತ್ತಮ ಬಾಂಧವ್ಯ ಹೊಂದಿವೆ ಎನ್ನಲಾಗಿದೆ. ಮನುಷ್ಯರಂತೆ ಅವುಗಳಿಗೂ ಪೊಸೆಸಿವ್‌ನೆಸ್‌ ಇರುತ್ತದೆ. ಅದರಂತೆ ಇಲ್ಲಿ ಲಕ್ಷ್ಮೀಗೆ ಮಹೇಂದ್ರನ ಮೇಲೆ ಪೊಸಿಸಿವ್‌ನೆಸ್‌ ಇದೆ ಎನ್ನುವುದನ್ನು ಅಲ್ಲಿನ ಡಿಸಿಎಫ್‌ ಡಾ.ಪ್ರಭುಗೌಡ ಹಂಚಿಕೊಂಡಿದ್ದಾರೆ. ಅಲ್ಲದೇ ಮಹೇಂದ್ರನ ಪಕ್ಕ ಯಾವುದೇ ಹೆಣ್ಣು ಆನೆ ಬಂದರೂ ಲಕ್ಷ್ಮೀ ಪ್ರತಿಕ್ರಿಯೆ ನೀಡುತ್ತಾಳೆ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.

PREV
Read more Articles on
click me!

Recommended Stories

ಮೈಸೂರು ದಸರಾ ಹಬ್ಬದ ಹೊತ್ತಲ್ಲಿ ತೃತೀಯ ಲಿಂಗಿ ಅನುಮಾನಾಸ್ಪದ ಸಾವು!
ರೈಲ್ವೆ ಪ್ರಯಾಣಿಕರೇ ಗಮನಿಸಿ: ಮೈಸೂರು ದಸರಾ ಹಬ್ಬಕ್ಕೆ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಘೋಷಣೆ! ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ