Latest Videos

5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್: ಜಮೀನು ಮಾರಾಟಕ್ಕೆ ಮುಂದಾದ ಕೈ ಮುಖಂಡ

By Suvarna NewsFirst Published May 12, 2023, 8:41 AM IST
Highlights

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು, ರಾಜ್ಯದ ಬಹುತೇಕ ಕಡೆ ಬೆಟ್ಟಿಂಗ್ ಅಬ್ಬರ ಜೋರಾಗಿದೆ. ಗೆಲ್ಲುವ ಖಚಿತತೆ ಇರುವ ಅಭ್ಯರ್ಥಿಗಳು ನಿರಾಳರಾಗಿದ್ದರೆ, ಇತ್ತ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪರಸ್ಪರ ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಇದಕ್ಕಾಗಿ ಜಮೀನು ಮಾರಾಟಕ್ಕೂ ಮುಂದಾಗಿರುವಂತಹ ಘಟನೆ ಮೈಸೂರ ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು, ರಾಜ್ಯದ ಬಹುತೇಕ ಕಡೆ ಬೆಟ್ಟಿಂಗ್ ಅಬ್ಬರ ಜೋರಾಗಿದೆ. ಗೆಲ್ಲುವ ಖಚಿತತೆ ಇರುವ ಅಭ್ಯರ್ಥಿಗಳು ನಿರಾಳರಾಗಿದ್ದರೆ, ಇತ್ತ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪರಸ್ಪರ ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಇದಕ್ಕಾಗಿ ಜಮೀನು ಮಾರಾಟಕ್ಕೂ ಮುಂದಾಗಿರುವಂತಹ ಘಟನೆ ಮೈಸೂರ ಜಿಲ್ಲೆಯಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಯೋಗೇಶಗೌಡ ಚುನಾವಣಾ ಬೆಟ್ಟಿಂಗ್‌ಗಾಗಿ ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದು,  ಇವರ ಹುಚ್ಚುತನ ಗ್ರಾಮದಲ್ಲಿ ಅಚ್ಚರಿ ಮೂಡಿಸಿದೆ.  ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನನ್ನು ಬೆಟ್ಟಿಂಗ್‌ಗೆ  ಇಟ್ಟಿರುವ ಕಾಂಗ್ರೆಸ್ ಮುಖಂಡ ಯೋಗೇಶ್ ಗೌಡ ಈ ಬಗ್ಗೆ  ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಪಿರಿಯಾಪಟ್ಟಣ (Piriyapattana) ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಕೆ.ವೆಂಕಟೇಶ್ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ (K mahadev)ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದ್ದು, ಮೇ.13 ರಂದು ಕ್ಷೇತ್ರ ಯಾರ ಪಾಲಾಗಲಿದೆ ಎಂದು ತಿಳಿಯಲಿದೆ.

Karnataka assembly election: ಮತದಾನ ಮುಗಿತಿದ್ದಂತೆ ಜೋರಾದ ಬೆಟ್ಟಿಂಗ್!

ಗೆಲುವು ಸೋಲಿನ ಬೆಟ್ಟಿಂಗ್‌ಗೂ ಅಗ್ರಿಮೆಂಟ್.

ಇನ್ನೊಂದೆಡೆ ಮೈಸೂರಿನ ಹೆಚ್ ಡಿ ಕೋಟೆ (HD kote) ಕ್ಷೇತ್ರದಲ್ಲಿ ಬೆಟ್ಟಿಂಗ್ ಅಗ್ರಿಮೆಂಟ್‌ ಫೋಟೋವೊಂದು ಸ್ಥಳೀಯ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ. ಜಯರಾಮ ನಾಯಕ ಹಾಗೂ ಪ್ರಕಾಶ್, ಶಿವರಾಜ್ ನಡುವೆ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಅಗ್ರಿಮೆಂಟ್ ಆಗಿದೆ. ಛಾಪಾಕಾಗದದಲ್ಲಿ  5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಸಿಕೊಂಡಿದ್ದು, ಇದು ವೈರಲ್ ಆಗಿದೆ. ಪ್ರಕಾಶ್ (prakash) ಹಾಗೂ ಶಿವರಾಜ್ (Shivaraj) ಜೆಡಿಸ್ ಅಭ್ಯರ್ಥಿ ಪರ ಬೆಟ್ಟಿಂಗ್ ಕಟ್ಟಿದ್ದರೆ, ಜಯರಾಮ ನಾಯ್ಕ‌ (Jayaram Naik) ಕಾಂಗ್ರೆಸ್ ಅಭ್ಯರ್ಥಿ ಪರ ಬೆಟ್ಟಿಂಗ್ ಕಟ್ಟಿದ್ದಾರೆ. 

ಇಬ್ಬರೂ ತಲಾ 5 ಲಕ್ಷ ಬೆಟ್ಟಿಂಗ್ ಕಟ್ಟಿದ್ದು, ಈ ಬಗ್ಗೆ ಛಾಪಾ ಕಾಗದದಲ್ಲಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಇವರಿಬ್ಬರು ಸೇರಿಸಿದ 10 ಲಕ್ಷ ಹಣವನ್ನು ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ‌ ನೇಮಿಚಂದ್ (Nemichand) ಬಳಿ ನೀಡಿರುವ ಬಗ್ಗೆ ಅಗ್ರಿಮೆಂಟ್‌ನಲ್ಲಿ ಉಲ್ಲೇಖಿಸಿದ್ದು, ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರು ತಮ್ಮ ಹಣ ತಾವು ವಾಪಸ್ಸು ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 

ಬೆಟ್ಟಿಂಗ್ ಆ್ಯಪ್ ಜತೆ ನಂಟು: ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ..!

click me!