ಡಿಕೆಶಿ ಇಡಿಗಾಗಲಿ, ಸಿಬಿಐಗಾಗಲಿ ಹೆದರಲ್ಲ: ಧ್ರುವನಾರಾಯಣ್

By Web DeskFirst Published Nov 8, 2019, 12:50 PM IST
Highlights

ಡಿ. ಕೆ. ಶಿವಕುಮಾರ್ ಅವರು ಇಡಿಗಾಗಲಿ, ಸಿಬಿಐಗಾಗಲಿ ಹೆಸರೋದಿಲ್ಲ ಎಂದು ಮಾಜಿ ಸಚಿವ ಧೃವನಾರಯಣ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಡಿ. ಕೆ. ಶಿವಕುಮಾರ್ ಬಗ್ಗೆ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಿರುವಾಗ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಮೈಸೂರು(ನ.08): ಡಿ. ಕೆ. ಶಿವಕುಮಾರ್ ಅವರು ಇಡಿಗಾಗಲಿ, ಸಿಬಿಐಗಾಗಲಿ ಹೆಸರೋದಿಲ್ಲ ಎಂದು ಮಾಜಿ ಸಚಿವ ಧೃವನಾರಯಣ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಡಿ. ಕೆ. ಶಿವಕುಮಾರ್ ಬಗ್ಗೆ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಿರುವಾಗ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಡಿ. ಕೆ. ಶಿವಕುಮಾರ್ ಇಡಿಗಾಗಲಿ, ಸಿಬಿಐಗಾಗಲಿ ಹೆದುರುವುದಿಲ್ಲ. ಅಣ್ಣ ತಮ್ಮ ಇಬ್ಬರು ಬಂಡೆಯಂತೆ. ಡಿಕೆಶಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದವರು. ರಿಯಲ್ ಎಸ್ಟೇಟ್ ಭೂಮ್ ಇದ್ದ ಸಂದರ್ಭದಲ್ಲಿ ಅಗಾಧವಾಗಿ ಬೆಳೆದಿದ್ದಾರೆ. ಕಾನೂನಾತ್ಮಕವಾಗಿ ವ್ಯವಹರಿಸಿ ಶ್ರೀಮಂತರಾಗಿದ್ದಾರೆ. ಅದೇ ರೀತಿ ಮೈಸೂರಿನಲ್ಲಿ ಮಾಜಿ ಸಚಿವರಾದ ಸಾರಾ ಮಹೇಶ್, ರಾಮದಾಸ್ ಕಾನೂನಾತ್ಮಕವಾಗಿ ವ್ಯವಹರಿಸಿ ಶ್ರೀಮಂತರಾಗಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ವ್ಯವಹಿಸಿರುವಾಗ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಡಿಕೆಶಿಗೆ ಉನ್ನತ ಸ್ಥಾನದ ವಿಚಾರ:

ಡಿ. ಕೆ. ಶಿವಕುಮಾರ್ ಈಗಾಗಲೇ ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಲು ಡಿಕೆಶಿ ಪಾತ್ರ ಬಹಳ ಮುಖ್ಯವಾಗಿತ್ತು. ಹೀಗಾಗಿ ಎಲ್ಲಾ ಅನುಭವ ಇರುವ ಡಿಕೆಶಿ ಉನ್ನತ ಸ್ಥಾನಕ್ಕೆ ಏರಲು ಅರ್ಹರು ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕ ಸಾ ರಾ ಮಹೇಶ್ -ಡಿಕೆಶಿ ನಡುವೆ ರಹಸ್ಯ ಮಾತುಕತೆ.

ಡಿಕೆಶಿಯವರನ್ನ ಇಷ್ಟೊಂದು ವಿಜೃಂಭಿಸುವ ಅಗತ್ಯವಿರಲಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಡಿಕೆಶಿ ನಮ್ಮನ್ನೆಲ್ಲಾ ಬೆಳೆಸಿದ್ದಾರೆ. ನನಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಅವರನ್ನ ಗೌರವಿಸುವುದು ನಮ್ಮ ಕರ್ತವ್ಯ. ನಮ್ಮ ಕರ್ತವ್ಯವನ್ನ ಮಾಡಿದ್ದೇವೆ ಅಷ್ಟೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ಹೇಳಿದ್ದಾರೆ.

ಜೈಲಿನಲ್ಲಿದ್ದಾಗ ಮಣ್ಣನ್ನು ತಲೆಗೆ ಹಾಕ್ಕೊಳ್ತಿದ್ರಂತೆ ಡಿಕೆಶಿ..!

click me!